
ಚೆರಂಡಿ ಸ್ವಚ್ಛ ಗೊಳಿಸಿ ಸೊಳ್ಳೆಯಿಂದ ಗ್ರಾಮ ರಕ್ಷಿಸಿ : ಬೀರಪ್ಪ ಬನ್ನಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 10- ಚೆರಂಡಿ ಸ್ವಚ್ಛ ಗೊಳಿಸಿ ಸೊಳ್ಳೆಯಿಂದ ರಕ್ಷಿಸಿ ನಮ್ಮ ಗ್ರಾಮದಲ್ಲಿ ಡೆಂಗ್ಯೂ ಜ್ವರ ಮತ್ತು ಚಿಕ್ಕನ್ ಗುನ್ಯಾ ಬರದಂತೆ ಮುಜಾಂಗ್ರತೆ ಕ್ರಮವಹಿಸಬೇಕು ಎಂದು ಗ್ರಾ.ಪಂ.ಸದಸ್ಯ
ಬೀರಪ್ಪ ಬನ್ನಿ ಹೇಳಿದರು.
ತಾಲೂಕಿನ ಬೇವೂರು ಗ್ರಾಮದ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಂದಮ್ಮ ಬಳಿಗಾರ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲಿ ಭಾಗವಹಿಸಿ ಮಾತನಾಡಿದ ಅವರು
ಕೋಳಿಹಾಳ ಗ್ರಾಮದಲ್ಲಿ ಜಲ ಜೀವನ ಮಿಷನ್ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಮಹತ್ವಕಾಂಕ್ಷಿ ಯೋಜನೆ ಇದಾಗಿದ್ದು ಆದರೆ ಗುತ್ತಿಗೆದಾರರ ನಿರ್ಲಕ್ಷದಿಂದ ಸಿಸಿ ರಸ್ತೆಗಳ ಚರಂಡಿಗಳಾಗಿವೆ. ಎಲ್ಲಿ ಬೇಕಲ್ಲಿ ಕಾಂಕ್ರೀಟ್ ತ್ಯಾಜ್ಯ ಕಸ ಕಡ್ಡಿ ಹಾಕಲಾಗಿದೆ ರಸ್ತೆಯ ಮೇಲೆ ಬೈಕ್ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ ವೈರುದ್ದರು ವೆಡಯುವದಕ್ಕೆ ಸಹ ನಡೆಯಲಾಗುತ್ತಿಲ್ಲ ಹಾಗೂ ಹಲವಾರು ಮನೆಗಳಿಗೆ ನಳ ಜೋಡಣೆ ಮಾಡಿಲ್ಲ ನಮ್ಮ ಓಣಿಯಲ್ಲಿ ವಿದ್ಯುತ್ ಕಂಬ ಬಾಗಿರುವುದರಿಂದ ಅನಾಹುತ ಸಂಭವಿಸಬಹುದು ಹೀಗಾಗಿ ಆ ವಿದ್ಯುತ್ ಕಂಬವನ್ವು ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದು ಸರಿಪಡಿಸ ಬೇಕೆಂದು ಒತ್ತಾಯಿಸಿದರು.
ಬೇವೋರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗ ಇರುವ ಬಲ್ಪಗಳು ಹಾಳಾಗಿವೆ ಇದರಿಂದ ಜನರಿಗೆ ತೊಂದರೆಯಾಗಿದೆ. ಮೊಹರಂ ಹಬ್ಬದ ಬಂದಿರುವುದರಿಂದ ಇಲ್ಲಿ ಕತ್ತಲು ಆಗಿರುವದರಿಂದ ಕೂಡಲೇ ಐ ಮಾಸ್ಕ್ ಬಲ್ಪ್‌ಗಳನ್ನು ಹಾಕಿ ಸರಿಪಡಿಸಬೇಕು ಮತ್ತು ಗ್ರಾಮ ತುಂಬಿಲ್ಲೆ ಅಲ್ಲಲಿ ರಸ್ತೆಗಳು ಹಾಳಾಗಿ ಹೂಲಸು ಕೆಸರು ಗದ್ದೆಯಂತಾಗಿವೆ ಶೀಘ್ರವಾಗಿ ಸ್ವಚ್ಛಗೊಳಿಸಬೇಕು ಮತ್ತು, ಬೀಜಿಂಗ್ ಪಿಡರ್ ಸಿಂಪರಣೆ ಮಾಡಿಸಬೇಕು ಪಕ್ಕದ ಗುನ್ನಾಳ ಗ್ರಾಮದಲ್ಲಿ ಡೆಂಗ್ಯೂ ಜ್ವರಗಳು ಪತ್ತೆಯಾಗಿರುವುದರಿಂದ ನಮ್ಮ ಗ್ರಾಮದಲ್ಲಿ ಎಲ್ಲಾ ಸಾವ೯ಜನಿಕರು ತಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛತಯಾಗಿ ಇಟ್ಟುಕೊಳ್ಳುಬೇಕು ಗ್ರಾ. ಪಂ. ಸಿಬ್ಬಂದಿಗಳು. ಬಿ ಅಲರ್ಟ ನಿಂದ ಕತ೯ವ್ಯ ನಿವ೯ವಹಿಸುವದರ ಜೊತೆಗೆ ಗ್ರಾಮದ ಪ್ರತಿ ವಾಡ೯ಗಳಲ್ಲಿ ಚರಂಡಿಗಳನ್ನು ಸ್ವಚ್ಛಗೋಳಸಬೇಕು.ರಸ್ತಯಲ್ಲಿ ಮಳೆ ನೀರು ಚರಂಡಿ ನೀರು ನಿಂದರದಂತೆ ಕ್ರಮ ವಹಿಸಿ ಡೆಂಗು. ಜ್ವರ ಚಿಕ್ಕನ ಗುನ್ಯಾ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಗ್ರಾ.ಪಂ. ಸದಸ್ಯ ಭೀಮೇಶ್ ಕರಡಿ ಸಭಯಲ್ಲಿ ಒತ್ತಾಯಿಸಿದರು.
ಗ್ರಾಮದ ಬಸವೇಶ್ವರ ನಗರದಲ್ಲಿ ಬೀದಿ ದೀಪಗಳು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಬಸವೇಶ್ವರನಗರದಲ್ಲಿ ಬಹಳ ಸಮಸ್ಯೆಯಾಗಿದೆ ರಾಮ್ ಬಾಬು ಎನ್ನುವ ವ್ಯಕ್ತಿ ಪ್ರಾಧಿಕಾರದಿಂದ ಲೇ ಔಟ್ ಮಾಡಿಸಿ ಫ್ಲಾಟ್ ಗಳನ್ನು ವಿತರಣೆ ಮಾಡಿದ್ದೇನೆ.
ಈ ಬಡಾವಣೆಯ ಜನರಿಗೆ ಯಾವುದೇ ಕಾರಣಕ್ಕೂ ಅರ್ಜಿ ನಮೂನೆ 9 ಮತ್ತು ಅರ್ಜಿ ನಮೂನೆ 11 ಪಾರಂ ಅನುಮತಿ ನೀಡಬಾರದು ಎಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜೀವಗಾಂಧಿ ಪಂಚಾಯತ ರಾಜ್ ಫಿಲೋಶಿಪ್ ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾದ ಸಿ ವಿಕ್ಷಿತಾಶೆಟ್ಟಿ. ಶಿಲ್ಪಾ ಏನ್.ನವೀನ್ ಕರ್ಜೆ, ಉಮರ್ ಫಾರೂಕ್, ರವರು ತರಬೇತಿ ಭಾಗವಾಗಿ ಕ್ಷೇತ್ರ ಭೇಟಿ ನಿಮಿತ್ತ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು ನಂತರ ಗ್ರಾಮ ಪಂಚಾಯತ ಸಭೆಯಲ್ಲಿ ಗ್ರಾ. ಪಂ. ಪಿಡಿಓ ಅಬ್ದುಲ್ ಗಫರ್ ಸರಕಾರದಿಂದ ಮತ್ತು ಸಾರ್ವಜನಿಕರಿಂದ ಬಂದಿರುವ ಅರ್ಜಿಗಳನ್ನು ಸಭೆಯಲ್ಲಿ ಓದಿದರು ಮತ್ತು 15ನೇ ಹಣಕಾಸಿನ ಯೋಜನೆ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಗೆ ಬರುವ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತೆಗೊಳಿಸಲು ಡೆಂಗ್ಯೂ ಸೊಳ್ಳೆಗಳು ಹರಡದಂತೆ ಮುಂಜಾಗ್ರತೆ ಕ್ರಮ ವಹಿಸುತ್ತೇವೆ. ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಅಬ್ದುಲ್ ಗಫರ್).
ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಲಕ್ಷಮವ್ವ ಚುಕ್ಕಾಡಿ.ಸದಸ್ಯರಗಳಾದ ರುದ್ರಪ್ಪ ವದ್ನಾಳ್ ಶೇಖರಪ್ಪ ನಾಯಕ್ ಸೋಮಣ್ಣ ಇಂಗಳದಾಳ ಅನ್ನಪೂರ್ಣಮ್ಮ ಗಡ್ಡದ ಯಲ್ಲಮ್ಮ ಹರಿಜನ್ ರೇಣುಕಮ್ಮ ಹರಿಜನ್ ನೀಲಮ್ಮ ಸಿಳ್ಳೇದಾರ್ ಸೇರಿದಂತೆ ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದ್ದರು.