10Ylb01

ಸರಕಾರಿ ಶಾಲೆಗಳ ಅಭಿವೃದ್ಧಿಗೆ ಗ್ಯಾರಂಟಿ ಸರಕಾರ ಬದ್ಧ : .ಮಧು ಬಂಗಾರಪ್ಪ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 10- ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಗ್ರಾಮೀಣ ಭಾಗದ ಶಾಲೆಗಳ ಪ್ರಗತಿಗೆ ಸದಾ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶಿಕ್ಷಣ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಧಮ್ಮೂರು ಗ್ರಾಮದ ಹಮ್ಮಿಕೊಂಡಿದ್ದ ನೂತನ ಸರಕಾರಿ ಪ್ರೌಢ ಶಾಲೆ ಉದ್ಘಾಟನೆ ನೇರವೇರಿಸಿ ಮಂಗಳವಾರ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ವಿಶೇಷ ಅನದಾನ ನೀಡಿದ್ದು, ಶಿಕ್ಷಣಕ್ಕಾಗಿ ಕ್ಷೇತ್ರದಲ್ಲಿ ಸದಾ ಶಾಸಕ ಬಸವರಾಜ ರಾಯರಡ್ಡಿ ಹಗಲೆರುಳು ಶ್ರಮಿಸಿದ್ದಾರೆ. ಚುನಾವಣೆಯಲ್ಲಿ ಪ್ರಣಾಳಿಕೆ ನೀಡಿದ ೫ ಗ್ಯಾರಂಟಿ ಈಡೇರಿಸಿದ ಅನುಷ್ಠಾನಗೊಳಿಸಿದ ಸರಕಾರ ಸುಭದ್ರವಾಗಿ ಆಡಳಿತ ನಡೆಸುತ್ತಿದೆ. ಕ್ಷೇತ್ರದಲ್ಲಿ ಎಂಜಿನಿಯರ್ ಕಾಲೇಜು, ಕೌಶಲ್ಯಾಭಿವೃದ್ಧಿ ಇಡೀ ರಾಜ್ಯದಲ್ಲಿ ಹೆಚ್ಚು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸುಮಾರು ೨೮೦ ರೂ.ಕೋಟಿ ನಿರ್ಮಾಣದಲ್ಲಿ ಎಂಜಿನಿಯರ್ ಕಾಲೇಜು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ೩೨ ಸಾವಿರ ರೈತರಿಗೆ ಉಚಿತ ಪಂಪ್ ಸೆಟ್ ಅವಕಾಶ ನೀಡಿದೆ. ಸರಕಾರ ಉತ್ತಮ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಜನ ಸಾಮನ್ಯರ ಪರವಾಗಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ. ಹೆಚ್ಚು ಶಿಕ್ಷಣ ಇಲಾಖೆಯಲ್ಲಿ ಸಮಸ್ಯೆಗಳ ತಾಂಡಾ ವಾಡುತ್ತಿದೆ. ರಾಜ್ಯ ಸರಕಾರ ಅಧಿಕಾರ ವಹಿಸಿಕೊಂಡ ೧೦ ತಿಂಗಳಲ್ಲಿ ೧೨ ಸಾವಿರ ಭರ್ತಿಗೊಳಿಸಿದೆ. ಮುಂದಿನ ಮೂರುವರಿ ವರ್ಷದ ಆಡಳಿತದಲ್ಲಿ ಸಂಪೂರ್ಣವಾಗಿ ಶಿಕ್ಷಣ ಕ್ಷೇತ್ರದಲ್ಲಿ ಆದ್ಯತೆ ನೀಡಲಾಗುವುದು. ಶಿಕ್ಷಕರು ಕೊರತೆ ನಿಭಾಯಿಸಲು ಉತ್ತಮವಾದ ಕಾರ್ಯ ನಿರ್ವಹಿಸಲಾಗುವುದು ಎಂದರು.

ಸಿಎA ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಶಾಲೆಗಳನ್ನು ನಿರ್ಮಾಣಗೊಳಿಸುವ ಮೂಲಕ ಅವಳಿ ತಾಲೂಕು ಅಭಿವೃದ್ಧಿಗೆ ಮುಂದಾಗಿದೆ. ಈ ಭಾಗದಲ್ಲಿ ರೈತರ ಪರವಾಗಿ ಆಡಳಿತ ನಡೆಸಲು ರೈತರು ಭೂಮಿ ನೀಡಿದರೆ ಕೆರೆ ತುಂಬಿಸಲಾಗುವುದು. ಬಸ್ ನಿಲ್ದಾಣ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಜಾಗ ಕೊರತೆಯಿಂದ ಅಭಿವೃದ್ಧಿಗೊಳಿಸಲು ಹಿಂದೇಟು ಹಾಕಲಾಗಿದೆ,ಪ್ರತಿಯೊಂದು ಗ್ರಾಮದಲ್ಲಿ ಜನರ ಸಹಕಾರ ನೀಡಿದರೆ ಹೆಚ್ಚು ಅಭಿವೃದ್ಧಿಗೊಳಿಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಡಿಡಿಪಿಐ ಶ್ರೀಶೈಲ್ ಬಿರದಾರ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾ.ಪಂ ಇಒ ಸಂತೋಷ ಪಾಟೀಲ್ ಬಿರದಾರ, ಬಿಇಒ ಕೆ.ಟಿ.ನಿಂಗಪ್ಪ, ಕೊಪ್ಪಳ ಎಡಿಸಿ ಮಹೇಶ ಮಾಲಗಿತ್ತಿ, ಪಿಡಬ್ಲುö್ಯಡಿ ಇಲಾಖೆ ಅಧಿಕಾರಿ ಶ್ರೀಧರ್ ತಳವಾರ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಎಫ್.ಎಂ ಕಳ್ಳಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡರಾದ ಹನುಮಂಗೌಡ ಚಂಡೂರು, ರಾಮಣ್ಣ ಸಾಲಬಾವಿ, ಯಂಕಣ್ಣ ಯರಾಶಿ, ಎ.ಜಿ.ಭಾವಿಮನಿ, ವೀರನಗೌಡ ಪೋ.ಪಾಟೀಲ್, ಕೆರಿಬಸಪ್ಪ ನಿಡಗುಂದಿ, ಈರಪ್ಪ ಕುಡಗುಂಟಿ, ಡಾ.ಶಿವನಗೌಡ ದಾನರಡ್ಡಿ, ಅಲ್ಲಾಸಾಬ್ ವಾಲೇಕಾರ್, ರಸೂಲಸಾಬ್ ಧಮ್ಮೂರು ಸೇರಿದಂತೆ ಶಾಲೆಯ ಆಡಳಿತ ಮಂಡಳಿದವರು, ಗ್ರಾಮದ ಮುಖಂಡರು ಶಾಲಾ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!