ನಿರ್ಮಿತಿ ಕೇಂದ್ರದ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,11- ದಾರವಾಡದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಸಂಬಂಧಿಸಿದ ಆಸ್ತಿ ಮೇಲೆ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಆಸ್ತೆ ಮೇಲೆ ಲೋಕಾಯುಕ್ತ ದಾಳಿನಡೆಸಿದೆ.
ಗುರುವಾರ ಬೆಳಿಗ್ಗೆ ದಾರವಾಡದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರಗೌಡ ಪಾಟೀಲ್
ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಹೊಂದಿರುವ ಮನೆಯಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಹಿರೇಸಿಂದೋಗಿ ಗ್ರಮದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಅವರುಗೆ ಸೇರಿದ ಮನೆ ಹಾಗೂ ಹೊಲವನ್ನು ಪರಿಶೀಲನೆ ನಡೆಸಿದರು. ಫಾರ್ಮ್ ಹೌಸ್ ಗೂ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದು ಅಕ್ರಮದ ಆಸ್ತಿ ಮಾಹಿತಿ ಲಭ್ಯವಾಗಿಲ್ಲಾ.

