
ಶಾಂತಿ ಸಹೋದರತೆ ಭಾವೈಕ್ಯತೆಯ ಹಬ್ಬವೇ ಮೊಹರಂ : ಎಂ.ಗೋಪಾಲ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 15- ನಮ್ಮೆಲ್ಲರ ರಕ್ಷಣೆಗೆ ಮತ್ತು ಸತ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾದ ಹಜರತ್ ಇಮಾಮೆ ಹಸೈನ್ ಇಮಾಮೆ ಹುಸೈನ್ ಅವರು ಶಾಂತಿ ಸಹೋದರತೆ ಭಾವೈಕ್ಯತೆ ಏಕತೆಯ ಪವಿತ್ರ ವಿಶೇಷ ಹಬ್ಬ ಮೊಹರಂ ಎಂದು ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರು ಕಾಂಗ್ರೆಸ್ ಹಿರಿಯ ಮುಖಂಡರಾದ ಎಂ ಗೋಪಾಲ ರೆಡ್ಡಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿರುಗುಪ್ಪ ತಾಲೂಕು ಅಗಸನೂರು ಗ್ರಾಮದಲ್ಲಿ ಹಜರತ್ ಇಮಾಮ್ ಹಸೈನ್ ಇಮಾಮ್ ಹುಸೈನ್ ಪವಿತ್ರ ಮೊಹರಂ ಹಬ್ಬದ ಭಾನುವಾರ ಏಳನೇ ದಿನ ಪೀರ್ ದೇವರ ಖುರಾನ್ ಫಾತೆಹ ಓದಿಕೆ ಲೋಬಾನ ಊದುಬತ್ತಿ ಕಾಯಿ ಕೆಂಪು ಸಕ್ಕರೆ ತುಲಾಭಾರ ಮಾಡುವ ಹರಕೆ ಹೊತ್ತವರು ಬೆಳಿಗ್ಗೆನಿಂದ ಪ್ರಾರಂಭವಾಗಿ ಸಂಜೆವರೆಗೆ ನಡೆಯಿತು ಮುಸಲ್ಮಾನರ ಮುಜಾವರ್ ಮುಲ್ಲಾ ಸಾಹೇಬರು ಬಿಳಿ ಬಟ್ಟೆಯ ಪೇಟ ಧರಿಸಿದ ನಿಶಾನೆ ಧಾರಿಗಳ ಲಿಂಗಾಯತ ರೋಬ್ಬರಿಗೆ ಪೀರ್ ದೇವರನ್ನು ಹೊತ್ತು ಸಾಗುತ್ತಾರೆ ದೇವರನ್ನು ಹಿಡಿದ ಇಬ್ಬರು ಮನೆಮನೆಗೆ ಹೋಗಿ ಭಕ್ತರಿಂದ ಫಾತೇಹ ಓದಿಕೆದೊಂದಿಗೆ ದೀನ್ ಜಗಾಯಿಸಿ ನುಡಿಮುತ್ತುಗಳ ಘೋಷ ಜಾನಪದ ಸೊಗಡಿನ ಹಾಡುಗಳು ಮೊಹರಂ ಹಬ್ಬದ ಚರಿತ್ರೆಯನ್ನು ಹಾಡಿದರು.
ಬುಕ್ಕಿಟ್ಟು ಗಾರರು ಭಂಡಾರವನ್ನು ಪೀರ ದೇವರು ಎದ್ದಾಗ ಎರೆಚುತ್ತಾರೆ ಸಂಜೆಯಾದಾಗ ಮಸೀದಿ ಮೈದಾನದಲ್ಲಿ ಬೃಹತ್ ಸಂಖ್ಯೆಯಲ್ಲಿ ಭಕ್ತರು ಹಲಗೆ ತಪ್ಪಡಿ ತಮಟೆ ವಾದ್ಯ ನಾದಕ್ಕೆ ಉತ್ಸಾಹದಿಂದ ಕುಂಭ ಹಿಡಿದು ಮೇಲು ಪದ ಹಾಡುತ್ತಾ ಕುಣಿದು ಕುಪ್ಪಳಿಸಿದರು ಭೇದ ಭಾವವಿಲ್ಲದೆ ಹಿಂದೂ ಮುಸ್ಲಿಮರು ಎನ್ನದೆ ಮೊಹರಂ ಹಬ್ಬ ಆಚರಿಸಿದರು ಮೊಹರಂ ಹಬ್ಬದ ವೇಳೆ ಮಧ್ಯಮಾಂಸ ತೊರೆದು ಕಟ್ಟುನಿಟ್ಟಿನ ನಿಯಮ ಪಾಲಿಸುವದು ಐತಿಹಾಸಿಕ ಪರಂಪರೆಯಿಂದ ಬಂದ ಸಾಂಪ್ರದಾಯವಾಗಿದೆ ಕಾಯಿ ಸಕ್ಕರೆ ಲೋಬಾನ ಊದುಬತ್ತಿ ಹರಕೆ ಸಲ್ಲಿಸುವ ವಿಶೇಷವಾಗಿತ್ತು ಮಹಿಳೆಯರು ಹೂವು ಮುಡಿಯುವುದಿಲ್ಲ ಯಾರು ಒಬ್ಬರು ಪಾದರಕ್ಷೆಯನ್ನು ಹಾಕುವುದಿಲ್ಲ ಮೊಹರಂ ಹಬ್ಬ ಮುಗಿಯವರೆಗೂ ಮನೆ ಬಾಗಿಲು ಮುಚ್ಚುವುದಿಲ್ಲ ಈ ನಿಯಮ ಅಗಸನೂರು ಗ್ರಾಮದವರಿಗೆ ಅಷ್ಟಲ್ಲದೆ ಹಬ್ಬಕ್ಕೆ ಬರುವ ಪ್ರತಿಯೊಬ್ಬರು ಪಾಲನೆ ಮಾಡುವುದು ಕಡ್ಡಾಯ ವಾಗಿದೆ ಬಹುತೇಕ ಕಡೆ ಪೀರಲದೇವರ ಮೆರವಣಿಗೆ ರಾತ್ರಿ ವೇಳೆಯಲ್ಲಿ ನಡೆಯುವದು ಸಾಮಾನ್ಯ ಆದರೆ ಅಗಸನೂರು ಗ್ರಾಮದಲ್ಲಿ ಮಧ್ಯಾನ ಪ್ರಾರಂಭವಾಗಿ ಸಂಜೆವರೆಗೆ ನಡೆಯುತ್ತದೆ ಲಿಂಗಾಯತರು ಒಬ್ಬರು ದೇವರನ್ನು ಹೊತ್ತು ಸಾಗುತ್ತಾರೆ ಶ್ರೀ ಶರಬಣ್ಣ ತಾತನವರ ಮನೆಯಲ್ಲಿ ಮಾಲಿದ ಸಹಿತ ನಡೆಯಿತು ಹಿರಿಯರು ಆಚರಿಸಿಕೊಂಡು ಬಂದ ಮೊಹರಂ ಹಬ್ಬವನ್ನು ಪ್ರತಿ ವರ್ಷ ಆಚರಿಸುತ್ತಿದ್ದೇವೆ ಎಂದು ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರು ಕಾಂಗ್ರೆಸ್ ಹಿರಿಯ ಮುಖಂಡರು ಆಗಸನೂರು ನಿವಾಸಿ ಎಂ ಗೋಪಾಲ ರೆಡ್ಡಿ ಅವರು ವಿವರಿಸಿದರು.
ಶಾಸಕ ಬಿ ಎಂ ನಾಗರಾಜ ಅವರು ಅಗಸನೂರಿಗೆ ತೆರಳಿ ಪೀರ ದೇವರ ದರ್ಶನ ಪಡೆದರು.
ಜಾಗಿರ್ ದಾರ್ ಖತೀಬ್ ಜಹೀರುದ್ದೀನ್ ಬಾಬು ಮುಖಂಡರಾದ ಹಾಜಿ ಹಂಡಿ ಹುಸೇನ್ ಬಾಷಾ ಹಾಜಿ ಹೋಟೆಲ್ ದೇಶನೂರ್ ಅಬ್ದುಲ್ ಗಫೂರ್ ಸಾಬ್ ಹಾಜಿ ಎ ಅಬ್ದುಲ್ ನಬಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ. ಇತರರು ಇದ್ದರು.