WhatsApp Image 2024-07-21 at 11.55.15 AM

ಪುರುಷೋತ್ತಮ ಹಂದ್ಯಾಳುಗೆ ರಾಜ್ಯಮಟ್ಟದ ರಂಗ ಪ್ರಶಸ್ತಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 21- ಕಲಬುರಗಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಂಗಸಂಗಮ ಕಲಾ ವೇದಿಕೆಯವರು ಹಮ್ಮಿಕೊಂಡಿದ್ದ ಎಸ್.ಬಿ ಜಂಗಮಶೆಟ್ಟಿ ಹಾಗೂ ಸುಭದ್ರಾದೇವಿ ಜಂಗಮಶೆಟ್ಟಿ ರಾಜ್ಯಮಟ್ಟದ ರಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜಮೂರ್ತಿ ಅವರು ಪುರುಷೋತ್ತಮ ಹಂದ್ಯಾಳು ಹಾಗೂ ಹಾಗೂ ಶಿಗ್ಗಾಂವ್ ರಾಧಿಕಾ ಬೇವಿನಕಟ್ಟಿ ಅವರಿಗೆ ರಂಗ ಪ್ರಶಸ್ತಿ ನೀಡಿ ಸತ್ಕರಿಸಿದರು.

ಈ ಸಮಯದಲ್ಲಿ ಸೇಡಂ ಶ್ರೀ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮಿಗಳು, ಕರ್ನಾಟಕ ಮುಕ್ರ ವಿಶ್ವವಿದ್ಯಾಲಯ ಕುಲಪತಿ ಶರಣಪ್ಪ ಹಲ್ಸೆ, ಚಿಂಚೋಳಿಯ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶ ಜಾರಿಕಾರ ಮಹಾದೇವ ಹಂಗರಗಿ, ರಂಗಸಂಗಮ ಕಲಾವೇದಿಕೆ ಅಧ್ಯಕ್ಷೆ ಶಿವಗೀತಾ, ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ ಮಾಸ್ತರ,ಕಲಬುರ್ಗಿ ನಗರ ಪೊಲೀಸ್ ಮೀಸಲು ಪಡೆ ಸಹಾಯಕ ಪೊಲೀಸ್ ಆಯುಕ್ತರಾದ ಹೆಚ್.ಎಂ ಸರ್ದಾರ್ ಮತ್ತು ಕೇಂದ್ರ ಕಾರಾಗೃಹ ಶ್ರೀಕಾಂತ್ ರಂಜೇರಿ, ಪುಸ್ತಕ ಪ್ರಾಧಿಕಾರ ಸದಸ್ಯ ಬಿ.ಎಚ್ ನಿರಗುಡಿ, ಸದ್ಯಸರ ಜೇವರ್ಗಿ ರಾಜಣ್ಣ, ಮಲ್ಲಿಕಾರ್ಜುನ ಮಡ್ಡೆ, ಬಸವಪ್ರಭು, ಸಿದ್ದಪ್ಪ ತಳ್ಳಳ್ಳಿ ವಿಶ್ವರಾಜ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!