
ವಿಕಲಚೇತನ ಮಕ್ಕಳ ಆರೈಕೆದಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ಕೊಪ್ಪಳ ನಗರಸಭೆ ವತಿಯಿಂದ 2024-25ನೇ ಸಾಲಿನಲ್ಲಿ ವಿಕಲಚೇತನ ಮಕ್ಕಳ ಆರೈಕೆದಾರರಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿನ ಕೊಪ್ಪಳ ನಗರಸಭೆಯ ಶೇ.5 ಯೋಜನೆಯ ಎಸ್.ಎಫ್.ಸಿ ಹಾಗೂ ನಗರಸಭೆ ನಿಧಿ ಅನುದಾನದಡಿಯಲ್ಲಿ ಶೆ.50 ರಷ್ಟು ವ್ಯಕ್ತಿಗತ ಕಾರ್ಯಕ್ರಮದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಬುದ್ದಿಮಾಂದ್ಯ ಮತ್ತು ಬಹುವಿಧ ಅಂಗವಿಕಲತೆ ಸರಬಲ್ ಪಾಲ್ಸಿ ಹೊಂದಿದ ವಿಕಲಚೇತನ ಮಕ್ಕಳ ಆರೈಕೆದಾರರಿಗೆ ಸಹಾಯಧನ ಒದಗಿಸಲಾಗುತ್ತಿದ್ದು, ಸೌಲಭ್ಯ ಪಡೆಯಲು ವಿಕಲಚೇತನರು ಕೊಪ್ಪಳ ನಗರದ ನಿವಾಸಿಯಾಗಿರಬೇಕು.
ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ, ಬುದ್ದಿ ಮಾಂದ್ಯತೆ ಮತ್ತು ಬಹುವಿದ ಅಂಗವಿಕಲತೆ ಸರಬಲ್ ಪಾಲ್ಸಿ ಹೊಂದಿದ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ 2 ಭಾವಚಿತ್ರಗಳನ್ನು, ಬ್ಯಾಂಕ್ ಪಾಸ್‌ಬುಕ್ ವನ್ನು ಲಗತ್ತಿಸಿ ಆಗಷ್ಟ್ 31ರೊಳಗೆ ನಗರಸಭೆ ಕಾರ್ಯಾಲಯಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅವಧಿ ಮೀರಿ ಬಂದ ಹಾಗೂ ಅಪೂರ್ಣ ದಾಖಲಾತಿ ಹೊಂದಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.