WhatsApp Image 2024-07-23 at 4.31.40 PM

ಪತ್ರಕರ್ತರು ಸಮಾಜದಲ್ಲಿನ ಅಂಕು-ಡೂಂಕುಗಳ ತಿದ್ದಬೇಕು : ಬಂಗ್ಲೆ ಮಲ್ಲಿಕಾರ್ಜುನ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 23- ಪತ್ರಕರ್ತರು ನಿಸ್ವಾರ್ಥ ಸೇವೆ ಮತ್ತು ಸಮಾಜಿಕ ಕಳಕಳಿ ಇಟ್ಟು ಕೊಂಡು ಸಮಾಜಮುಖಿಯಾಗಿ ಸಮಾಜದಲ್ಲಿ ನಡೆಯುವ ಅಂಕು ಡೂಂಕುಗಳ ತಿದ್ದುವದರ ಜೊತೆಗೆ ಪ್ರಸ್ತುತ ವಿದ್ಯಮಾನಗಳ ಕುರಿತು ನೈಜ ವರದಿ ನೀಡಬೇಕು.

ದೇಶದ ಅಭಿವೃದ್ಧಿಗೆ ಪತ್ರಿಕೆಗಳ ಪಾತ್ರ ಅಪಾರವಾಗಿದ್ದು, ಸ್ವಾತಂತ್ರ ಹೋರಾಟದಲ್ಲಿ ಇಡೀ ಭಾರತವನ್ನೇ ಒಗ್ಗೂಡಿಸಿದ ಶ್ರೇಯಸ್ಸು ಪತ್ರಿಕೆಗಳಿಗೆ ಸಲ್ಲುತ್ತದೆ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸಂಸ್ದಾಪಕ ರಾಜ್ಯಾದ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರಿಗೆ ಸಾಮಾಜಿಕ ಭದ್ರತೆಯ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ಸರಕಾರ ಮಿನಾಮೇಷ ತೊರುತ್ತಿರುವುದು, ಪತ್ರಕರ್ತರಿಗೆ ಮಾಡುವ ಮೋಸ ಎಂದರು.

ತಾಲೂಕಿನಲ್ಲಿನಷ್ಟೆ ಅಲ್ಲದೇ ಕರ್ನಾಟಕದ ಮೂಲೆಮೂಲೆಗಳಲ್ಲಿ ಪತ್ರಕರ್ತರು ಬಹಳಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳಿಗೆ ಸರಕಾರ ಮನ್ನಣೆ ನೀಡುವುದಲ್ಲದೆ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಇಲ್ಲವಾದಲ್ಲಿ ಸರಕಾರದ ವಿರುದ್ದ ನ್ಯಾಯಂಗದ ಮೊರೆ ಹೊಗುವದಾಗಿ ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಗವಿ ಸಿದ್ದಪ್ಪ ಹೊಸಮನಿ ಮಾತನಾಡಿ ಪತ್ರಕರ್ತರು ಯಾವುದೇ ವಿಷಯವಾಗಲಿ‌ ಸಮಾಜಕ್ಕೆ ಬಿತ್ತರಿಸುತ್ತಾರೆ. ನೈಜತೆಗೆ ಹೆಚ್ಚು ಒತ್ತು ನೀಡಿ ಪ್ರಸಾರ ಮಾಡುವ ಕೆಲಸದಲ್ಲಿ ನಿರತರಾಗಬೇಕು ಪತ್ರಕರ್ತರು ಅಭಿವೃದ್ಧಿಗೆ ಪೂರಕವಾದ ಹೊಸ ವಿಚಾರಗಳನ್ನು ಪ್ರತಿ ದಿನ ಹೊತ್ತು ತರಬೇಕು. ಪ್ರಜಾಪ್ರಭುತ್ವದ 4 ನೇ ಅಂಗವಾಗಿ ನಾವು ಪತ್ರಿಕೋದ್ಯಮವನ್ನು ನೋಡುತ್ತಿದ್ದೇವೆ. ಸಾಮಾಜಿಕ ನ್ಯಾಯದ ಪರವಾಗಿ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವಲ್ಲಿ ಪತ್ರಕರ್ತರು ಕಾರ್ಯೊನ್ಮುಖರಾಗ ಬೇಕೆಂದರು.

ಪಟ್ಟಣದ ಹಿರಿಯ ಮುಖಂಡ ಬಸಲಿಂಗಪ್ಪ ಭೂತೆ ಮಾತನಾಡಿ ಈ ಪತ್ರಿಕಾ ದಿನಾಚರಣೆ ಸಂಭ್ರಮವಲ್ಲ ಪತ್ರಕರ್ತರು ಅತ್ಯವಲೋಕನ ಮಾಡಿಕೊಳ್ಳಬೇಕಾದ ಸಮಯ. ಪತ್ರಿಕಾ ಧರ್ಮ ಉಳಿಸಿಕೊಳ್ಳಬೇಕಾಗಿದೆ.

ಸಮಾಜಕ್ಕೆ ವಿಷಯವನ್ನು ಮುಟ್ಟಿಸುವುದು ಪತ್ರಕರ್ತನ ಕೆಲಸ ಗ್ರಾಮೀಣ ಮಟ್ಟದಲ್ಲಿ ಬಹಳಷ್ಟು ಸುಧಾರಣೆಗಳು ಆಗಬೇಕು. ಆ ನಿಟ್ಟಿನಲ್ಲಿ ಹಳ್ಳಿಗಳಲ್ಲಿನ ಸಮಸ್ಯೆಗಳನ್ನು ಹೆಚ್ಚಾಗಿ ಬೆಳಕಿಗೆ ತಂದು ಅಭಿವೃದ್ಧಿ ಪಥದತ್ತ ಕೊಂಡ್ಯೂವುದು ಪತ್ರಕರ್ತರ ಕೆಲಸವಾಗಬೇಕು. ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬೀರದಾರ ಪಾಟೀಲ್ ಮಾತನಾಡಿ, ನಾವು ಮಾಧ್ಯಮಗಳ ಜೊತೆಯಾಗಿ ದಿನದ 24 ಗಂಟೆಗಳ ಕಾಲವೂ ಯಾವುದೇ ಸಮಸ್ಯೆ ಇದ್ದರೂ ಪರಿಶೀಲಿಸಿ ಕೆಲಸ ಮಾಡುತ್ತೇವೆ. ಮಾಧ್ಯಮ ಹಾಗೂ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೆವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಶಿವಶಂಕರ ರಾವ್ ದೇಸಾಯಿ. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್,ತಾಲೂಕ ಪಂಚಾಯತ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ ಅಮರೇಶ ಹುಬ್ಬಳ್ಳಿ ಮಾತನಾಡಿದರು.

ನಂತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಯಲಬುರ್ಗಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕ ಅಧ್ಯಕ್ಷ ಶ್ರೀಕಾಂತಗೌಡ ಮಾಲಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ ಹಡಪದ, ಉಪಾಧ್ಯಕ್ಷ ಹುಸೇನ್ ಸಾಬ ಮೋತೆಖಾನ, ಕಾರ್ಯಕಾರಣಿ ಸದಸ್ಯರಾದ ನೀಲಪ್ಪ ವೀ. ಖಾನಾವಳಿ, ಸದಸ್ಯರಾದ ವಿ.ಎಸ್.ಶಿವಪ್ಪಯ್ಯನಮಠ, ಬಸವರಾಜ ಮುಂಡರಗಿ, ಶ್ರೀಕಾಂತ ಅಂಗಡಿ, ಬಸವರಾಜ ಮುಂಡರಗಿ, ಸಿ,ಎ.ಆದಿ, ಬಸವರಾಜ ಕಳಸಪ್ಪನವರ, ಶ್ಯಾಮೀದ ಸಾಬ ತಾಳಕೇರಿ, ಎಸ್.ಕೆ.ದಾನಕೈ, ಮೌನೇಶ ವಜ್ರಬಂಡಿ ಹಾಗೂ ಮೊರಾರ್ಜಿ ಶಾಲೆಯ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿ ವಿಧ್ಯಾರ್ಧಿನಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!