IMG-20240725-WA0050

ಜಯತೀರ್ಥರ ಆರಾಧನಾ ಮಹೋತ್ಸವ 

ಕರುನಾಡ ಬೆಳಗು ಸುದ್ದಿ 

ಕೊಪ್ಪಳ, 25- ಇಲ್ಲಿನ ರಾಯರ ಮಠದಲ್ಲಿ ಗುರುವಾರ ಭಕ್ತರ ಸಂಭ್ರಮದ ನಡುವೆ ಜಯತೀರ್ಥರ (ಟೀಕಾರಾಯರ) ಆರಾಧನಾ ಮಹೋತ್ಸವ ನೆರವೇರಿತು.

ಪೂರ್ವಭಾವಿಯಾಗಿ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುಪ್ರಭಾತ, ಜಯತೀರ್ಥಸ್ತುತಿ ಪಾರಾಯಣ, ಅಷ್ಟೋತ್ತರ, ಪಂಚಾಮೃತಭಿಷೇಕ, ರಥೋತ್ಸವ, ನೈವೇದ್ಯ ಸಲ್ಲಿಕೆ ಹಾಗೂ ಹಸ್ತೋದಕ ಪಡೆದವು. ಸಂಜೆ ಪಂಡಿತ್‌ ಹನುಮೇಶಾಚಾರ್ಯ ಗಂಗೂರ್‌ ಅವರಿಂದ ಹಾಗೂ ಬೆಳಗಾವಿಯ ರಜತ್‌ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ ಜರುಗಿದವು.

ಆರಾಧನೆ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡಿ ವೃಂದಾವನದ ದರ್ಶನ ಪಡೆದರು. ವೃಂದಾವನಕ್ಕೆ ಹಾಗೂ ರಥಕ್ಕೆ ತರಹೇವಾರಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!