WhatsApp Image 2024-07-26 at 1.15.18 PM

ಶಾಲಾ ಮಕ್ಕಳಿಗೆ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 26- ನಗರದ ತಹಶೀಲ್ದಾರ ರವರ ಸಭಾಂಗಣದಲ್ಲಿತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಮ್ಯಾನೇಜರ್ ಶ್ರೀಮತಿ ಸುಜಾತ ರವರ ಅಧ್ಯಕ್ಷತೆಯಲ್ಲಿ ಆರೋಗ್ಯ ಸಿಂಚನ ಕಾರ್ಯಕ್ರಮದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯು ಹಮ್ಮಿಕೊಳ್ಳಲಾಯಿತು.

ತಾಲೂಕಾ ಆರೋಗ್ಯ ಅಧಿಕಾರಿ ಡಾಕ್ಟರ್ ಬಿ ಈರಣ್ಣರವರು ಮಾತನಾಡಿ ಆರೋಗ್ಯ ಸಿಂಚನ ಕಾರ್ಯನಿರ್ವಾಹಕ ಅಧಿಕಾರಿಗಳು ಬಳ್ಳಾರಿ ಇವರ ಕನಸಿನ ಕೂಸು ಏಳರಿಂದ ಹತ್ತನೇ ವರ್ಗದ ಮಕ್ಕಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಪ್ರದರ್ಶನ ಮಾಡಿ ಚರ್ಚೆ ಮುಕ್ತ ಸಂವಾದ ಮತ್ತು ಪ್ರಶ್ನಾವಳಿಗಳ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ ಇದಕ್ಕಾಗಿ ಗ್ರಾಮ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಯೋಜನಾ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಸಹಕಾರ ನೀಡಲು ಕೋರಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ ರವರು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ಶಿಕ್ಷಣ ಇಲಾಖೆ ಜವಾಬ್ದಾರಿ ಮತ್ತು ಅಂಗನವಾಡಿ ಹಾಗೂ ಆರೋಗ್ಯ ಇಲಾಖೆಯ ಜವಾಬ್ದಾರಿ ಕುರಿತಂತೆ ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಯಿಂದ ಆಗಮಿಸಿದ ಮಂಜುನಾಥ ಗೌಡರವರು ಶಾಲೆಗಳ ಎಲ್ಲಾ ಮುಖ್ಯೋಪಾಧ್ಯಾಯ ರವರು ಸಹಕಾರ ನೀಡುವಂತೆ ಹಾಗೂ ಸಿ ಆರ್ ಪಿ ರವರು ಕಾರ್ಯಕ್ರಮದಲ್ಲಿ ಹಾಜರಾಗುವಂತೆ ಆದೇಶಿಸಲಾಗುವುದು ಎಂದರು.

ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಆರೋಗ್ಯ ಸಿಂಚನ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಕ್ರಿಯಾಯೋಜನೆ ಪ್ರಕಾರ ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಬೇಕಾಗಬಹುದಾದ ಉಪಕರಣಗಳ ಸಹಾಯದೊಂದಿಗೆ ಸಹಕರಿಸಲು ತಿಳಿಸಲಾಗುವುದು ಎಂದುತಾಲೂಕು ಪಂಚಾಯಿತಿಯ ಮ್ಯಾನೇಜರ್ ಶ್ರೀಮತಿ ಸುಜಾತಾ ರವರು ಅಧ್ಯಕ್ಷ ನುಡಿಯಲ್ಲಿ ತಿಳಿಸಿದರು.

ದಿನಾಂಕ 30.07.24 ರಂದು 2:30 ನಿಮಿಷಕ್ಕೆ ತಾಲೂಕು ಆರೋಗ್ಯ ಸಭಾಂಗಣದಲ್ಲಿ ಸಿ ಆರ್ ಪಿ , ಸಿಡಿಪಿಓ ಮೇಲ್ವಿಚಾರಕರು, ಎಸ್ ಹೆಚ್ ಐಒ. ಹೆಚ್ ಐ ಒ. ಪಿ ಎಚ್ ಸಿ ಓ.ರವರಿಗೆ ಆರೋಗ್ಯ ಸಿಂಚನ ತರಬೇತಿ ಗೆ ಹಾಜರಾಗಲು ತಿಳಿಸಿದರು.

ಈ ಸಂದರ್ಭದಲ್ಲಿ ಎಲ್ಲಾ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಾದ ಡಾಕ್ಟರ್ ವಿದ್ಯಾಶ್ರೀಡಾಕ್ಟರ್ ತಿಪ್ಪೇಸ್ವಾಮಿ ರೆಡ್ಡಿ ಡಾಕ್ಟರ್ ಬಾಲಾಜಿ ಡಾ. ಹರೀಶ್ ತಾಲೂಕ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮ್ ರಾಜ್ ರೆಡ್ಡಿ ಮತ್ತು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿಕುಮಾರ್ ತಾಲೂಕು ಕಚೇರಿಯ ತಹಸಿಲ್ದಾರ್ ರವರ ಶಿರಸ್ತಿದಾರ ರವೀಂದ್ರ ಬಾಬು ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ಸಿಆರ್‌ಪಿ ಮಾರುತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!