WhatsApp Image 2024-07-27 at 3.13.40 PM

ಕರ್ನಾಟಕ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕೆ.ಬಾಲಸುಬ್ರಹ್ಮಣ್ಯಂ ಚೌದರಿ ಆಯ್ಕೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 27- ನಗರದ ಜಿಲ್ಲಾಧಿಕಾರಿ ಹಿಂಭಾಗದ ಪತ್ರಿಕೆಯ ಭವನದಲ್ಲಿ ಕರ್ನಾಟಕ ಜನತಾ ಪಕ್ಷ ವತಿಯಿಂದ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು.

ಕರ್ನಾಟಕ ಜನತಾ ಪಕ್ಷದ ರಾಜ್ಯದ್ಯಕ್ಷರಾದ ಶ್ರೀಧರ ರವರು ಮಾತನಾಡುತ್ತಾ, ಇವರು ಈ ಗುರುತರವಾದ ವಹಿಸಿಕೊಂಡು ಕೆ ಜೆ ಪಿ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ವಿಶ್ವಾಸದಿಂದ ಕರ್ನಾಟಕ ರಾಜ್ಯದಲ್ಲಿ ಈ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುತ್ತಾರೆಂದು ಹಾಗೂ ವಿವಿಧ ಪದಾಧಿಕಾರಿಗಳು ಪ್ರವೀಣ್ ಭಾರದ್ವಾಜ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಎಲ್ಲರೂ ಸೇರಿ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಬಾಲಸುಬ್ರಹ್ಮಣ್ಯo ಚೌದರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಇದೆ ವೇಳೆಯಲ್ಲಿ ನೂತನ ಜಿಲ್ಲಾಧ್ಯಕ್ಷರಾದ ಕೆ ಬಾಲಸುಬ್ರಹ್ಮಣ್ಯo ಚೌದರಿ ರವರು ಮಾತನಾಡಿ, ರಾಜಕೀಯ ಜೀವನ ನನಗೆ ಹೊಸತೇನಲ್ಲ ಮುಂಚಿತವಾಗಿ ಹಮ್ ಆದ್ಮಿ ಪಕ್ಷದಲ್ಲಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಯುವ ಘಟಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದೇನೆ. ಅಧ್ಯಕ್ಷರು ಅಧ್ಯಕ್ಷರಾಗಿ ಕಾರ್ಯಕರ್ತರು ಕಾರ್ಯಕರ್ತನು ಆಗಿ ಉಳಿಯಲು ಸಾಧ್ಯವಿಲ್ಲ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಸದಸ್ಯನಿಗೂ ಪ್ರೋತ್ಸಾಹ ಒಬ್ಬರಿಗೊಬ್ಬರ ಸಹಕಾರ ಮತ್ತು ಒಳ್ಳೆಯ ಮನೋಭಾವದಿಂದ ಕೂಡಿರುವಂಥದ್ದು ಪ್ರಮುಖವಾಗಿದೆ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ನಾನು ಹಳ್ಳಿಗಳ ಸಮಸ್ಯೆ ಕುರಿತು ನಾನು ಚರ್ಚೆ ಮಾಡಿದ್ದೇನೆ, ಅದೇ ರೀತಿಯಾಗಿ ವಿದ್ಯಾರ್ಥಿಗಳು ಅಲ್ಲಿಂದ ನಗರದ ಕಾಲೇಜುಗೆ ಬರುವ ಸಂದರ್ಭದಲ್ಲಿ ಬಸ್ಸಿನ ಸೌಕರ್ಯ ಪ್ರಮುಖ ಸಮಸ್ಯೆಯಾಗಿದೆ. ವಿದ್ಯಾರ್ಥಿ ವೇತನಗಳು ಸಹ ಸ್ಥಗಿತಗೊಂಡಿವೆ

ಎಸ್ಸಿ ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಸಾಲ ಸೌಲಭ್ಯಕ್ಕಾಗಿ, ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದನ್ನು ಬಡವರು ಕಾರ್ಮಿಕರು ಅರ್ಜಿ ಸಲ್ಲಿಸಲು ಒಂದು ದಿನದ ದಿನಗೂಲಿಯನ್ನು ಸಲ್ಲಿಸಬೇಕಾಗುತ್ತದೆ. ಹಾಗೂ ರೈತರಿಗೆ ಯಾವುದೇ ರೀತಿಯ ಸೌಲಭ್ಯಗಳು ದೊರಕುತ್ತಿಲ್ಲ, ಪ್ರತಿಯೊಂದು ಬೆಲೆಗಳು ಗಗನಕೇರಿದೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳು ದೊರೆಯುತ್ತಿಲ್ಲ ಯಾಕಂದರೆ ರಾಷ್ಟ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ ವ್ಯವಸ್ಥೆಯನ್ನು ಅದೋಗತಿಗೆ ಇಳಿದಿದೆ ಎಂದರು.

ಈ ಕರ್ನಾಟಕ ಜನತಾ ಪಕ್ಷಕ್ಕೆ ನಾನು ಸ್ವಾಹಿಚ್ಚಯಿಂದ ಬಂದಿದ್ದೇನೆ, ನಾವೆಲ್ಲರೂ ಒಂದಾಗಿ ಪಕ್ಷವನ್ನು ಬೆಳೆಸಬೇಕು ಎಂಬುದು ಪ್ರಮುಖ ಆದ್ಯ ಕರ್ತವವಾಗಿದೆ ಎಂದು ಮನದಾಳದ ಮಾತು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಮರೇಶ್, ಅಶ್ವಥ್, ನಾಗೇಂದ್ರ ಬಾಬು, ಶಿವಕುಮಾರ್, ಮಹೇಶ್, ಬಸರೆಡ್ಡಿ, ಆನಂದ, ಜಿಲ್ಲಾ ವಿವಿಧ ಪದಾಧಿಕಾರಿಗಳು ಸದಸ್ಯರು ಇತರರು ಆಗಮಿಸಿದ್ದರು.

Leave a Reply

Your email address will not be published. Required fields are marked *

error: Content is protected !!