
ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿನ ಸೊಳ್ಳೆಗಳ ನಿಯಂತ್ರಣಕ್ಕೆ ಮನವಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 1- ತಾಲೂಕಿನಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಸ್ವಚ್ಛತೆ ಹಾಗೂ ತರಗತಿ ಕೊಠಡಿಗಳಲ್ಲಿ ಫ್ಯಾನ್‌ಗಳ, ಕಿಟಕಿಗಳಿಗೆ ಮೆಸ್ ಅಳವಡಿಸುವ ವ್ಯವಸ್ಥೆ ಮಾಡುವ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಳಗೆ ಸಹಿಮಾಡಿದ ನಾವುಗಳು ಮೆಹಬೂಬ್‌ಬಾಷ, ಪತ್ರಕರ್ತರು ಹಾಗೂ ಸಮಾಜ ಸೇವಕರು, ಚಾಂದ್‌ಬಾಷ, ನೂರ್ ಮಹಮ್ಮದ್, ಅಲಿ ಸಿರುಗುಪ್ಪ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ರಾಜ್ಯದ್ಯಂತ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಿರುಗುಪ್ಪ ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ತರಗತಿ ಕೊಠಡಿಗಳಲ್ಲಿ ಕಿಟಕಿಗಳಿಗೆ ಮೆಸ್ ಅಳವಡಿಸಿರುವುದಿಲ್ಲ, ಫ್ಯಾನ್‌ಗಳು ಇರುವುದಿಲ್ಲ, ಕೆಲವು ಶಾಲೆಗಳ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದ್ದು, ಇಲ್ಲಿ ಸೊಳ್ಳೆಗಳು ಉತ್ಪಾದನೆಯಾಗುವುದು ಸಾಮಾನ್ಯವಾಗಿರುತ್ತದೆ, ಇದರಿಂದ ಶಾಲೆಗಳಲ್ಲಿ ಓದು ವಿದ್ಯಾರ್ಥಿಗಳಿಗೆ ಸೊಳ್ಳೆಗಳ ಕಡಿತದಿಂದ ಸಾಂಕ್ರಾಮಿಕ ರೋಗ ಹಾಗೂ ಡೆಂಘಿ, ಚಿಕನ್‌ಗುನ್ಯಾ ಇಂತಹ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ಸೊಳ್ಳೆಗಳಿಂದ ರಕ್ಷಿಸಲು ತರಗತಿ ಕೊಠಡಿಗಳಲ್ಲಿ ಫ್ಯಾನ್‌ಗಳು ಅಳವಡಿಸುವುದು, ಕಿಟಕಿಗಳಿಗೆ ಮೆಸ್ ಅಳವಡಿಸಬೇಕಾಗಿರುತ್ತದೆ.
ಆದ್ದರಿಂದ ದಯಾಳುಗಳಾದ ತಾವುಗಳು ತಾಲೂಕಿನಲ್ಲಿರುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದಿಟ್ಟುಕೊಳ್ಳಲು, ತರಗತಿ ಕೊಠಡಿಗಳ ಕಿಟಕಿಗಳಿಗೆ ಮೆಸ್ ಅಳವಡಿಸಲು ಹಾಗೂ ಫ್ಯಾನ್ ಅಳವಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಅನುದಾನಿತ ಹಾಗೂ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಯವರಿಗೆ ಸೂಚಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
ಮ್ಯಾನೇಜರ್ ವಿಠಲ್ ರವರಿಗೆ ಮನವಿ ಪತ್ರ ವಿತರಿಸಿದರುಮೆಹಬೂಬ್ ಭಾಷ , ನೂರ ಮಹ್ಮದ್, ಚಾಂದ್ ಭಾಷ, ಅಲಿ, ಹುಜೂರು, ಸಾಧಿಕ್ ಅಲಿ, ನಾಸೀರ್ ವಲಿ, ರಫೀಕ್, ಹುಸೇನ್, ಇನ್ನಿತರರು ಇದ್ದರು.