WhatsApp Image 2024-08-01 at 6.02.18 PM

ಗುನ್ನಾಳ  : ಗ್ರಾ.ಪಂ. ಉಪಾಧ್ಯಕ್ಷರಾಗಿ ಶರಣಯ್ಯ ನಂದಾಪೂರ ಅವಿರೋಧವಾಗಿ ಆಯ್ಕೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 1 ತಾಲ್ಲೂಕಿನ ಗುನ್ನಾಳ ಗ್ರಾಮ ಪಂಚಾಯತ ಉಪಾಧ್ಯಕ್ಷ ಸ್ಥಾನಕ್ಕೆ ಶರಣಯ್ಯ ಗುರಯ್ಯ ನಂದಾಪೂರ ಮಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರವಾರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ನೇತೃತ್ವದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ಒಟ್ಟು 21 ಜನ ಗ್ರಾಮ ಪಂಚಾಯತ ಸದಸ್ಯರುಗಳ ಪೈಕಿ ಒರ್ವ ಸದಸ್ಯ ಗೈರಾಗಿದ್ದು ಇನ್ನೂಳಿದ ಎಲ್ಲಾ ಸದಸ್ಯರು ಚುನಾವಣಾ ಪ್ರಕ್ರೀಯಲ್ಲಿ ಭಾಗವಹಿಸಿದ್ದರು ಉಪಾಧ್ಯಕ್ಷ ಸ್ಥಾನಕ್ಕೆ ಶರಣಯ್ಯ ಗುರಯ್ಯ ನಂದಾಪೂರ ಮಠ ಮಾತ್ರ ನಾಮ ಪತ್ರಸಲ್ಲಿಸಿದರು ಇನ್ನೂಳಿದ ಸದಸ್ಯರು ಯಾರು ನಾಮ ಪತ್ರ ಸಲ್ಲಿಸದ ಕಾರಣ ಶರಣಯ್ಯ ಗುರಯ್ಯ ನಂದಾಪೂರ ಮಠ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆಂದು ತಹಶಿಲ್ದಾರ ಬಸವರಾಜ ತೆನ್ನಳ್ಳಿ ತಿಳಿಸಿದರು ,ಚುನಾವಣಾ ಪ್ರಕ್ರೀಯಲ್ಲಿ ಸಹಾಯಕ ಚುನಾವಣಾಧಿಕಾರಿ ಶಮೀರ ಕುಮಾರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹನಮಂತರಾಯ ಯಂಕಂಚಿ.ಸಿಬ್ಬಂದಿಗಳು ಭಾಗವಹಿಸಿದ್ದರು.

ಶರಣಯ್ಯ ನಂದಾಪೂರ ಮಠ ಉಪಾಧ್ಯಕ್ಷರಾಗಿ ಆಯ್ಕೆಯಾಗುತಿದ್ದಂತೆ ಗ್ರಾಮ ಪಂಚಾಯತ ಅಧ್ಯಕ್ಷೆ ಶಾಂತಮ್ಮ ಶರಣಪ್ಪ ಕಂಬಳಿ, ಸದಸ್ಯರುಗಳಾದ ಶಿವಪ್ಪ ಕಟ್ಟಿಮನಿ, ಸಂಗನಗೌಡ ಆರ್ ಕೆಂಚಮ್ಮನವರ, ಪಾರಮ್ಮ,ಡಿ, ತಳವಾರ, ಅಮರೇಶ ಜಾಲಿಹಾಳ, ಶಿವಪ್ಪ ಪೂಜಾರ, ಶರಣಮ್ಮ ಕಾಗಿ,ಬಸಪ್ಪ ಹರಿಜನ, ರಮೇಶ ವಾಲ್ಮೀಕಿ ,ಬುಡ್ಡಪ್ಪ ಇಂಗಳದಾಳ, ಶಂಕ್ರಮ್ಮ ಇಂಗಳದಾಳ, ನೀಲಮ್ಮ ಕಾಸನಕಂಡಿ, ರೇಣುಕಾ ಪೂಜಾರ,ಈಶಪ್ಪ ಹಟ್ಟಿ ,ಶರಣಪ್ಪ ಬಿಸೇಟಿ, ನೇತ್ರಾವತಿ ನಿಡಶೇಶಿ, ನಿಂಗಮ್ಮ ಹಡಪದ, ಪಾರಮ್ಮ ಓ.ತಳವಾರ, ಮಾಹದೇವಮ್ಮ ನೇಲಜೇರಿ, ಮುಖಂಡರುಗಳಾದ ಶಿವಸಂಗಪ್ಪ ಹುಚನೂರ, ಲಕ್ಷ್ಮಣಾಚಾರ್ಯ ಜೋಷಿ ಶಾಂತಯ್ಯಹಿರೇಮಠ, ಮಾನಪ್ಪ ಕುಷ್ಟಗಿ,  ಶರಣಪ್ಪ ಇಂಗಳದಾಳ,  ವೆಂಕಟೇಶ ವಾಲ್ಮೀಕಿ,  ನಿಂಗಪ್ಪ ಹಂದ್ರಾಳ,  ಫರೀದ್ ಸಾಬ ಹಿರೇಮನಿ,  ಶರಣಪ್ಪ ಪೂಜಾರ, ಶರಣಪ್ಪ ಕೆ ಇಂಗಳದಾಳ, ಕುಂಟೇಪ್ಪ ಮಡಿವಾಳರ, ಚಿದಾನಂದ ಲಂಕಿ, ಅಮರೇಶ ಅಮರಾವತಿ, ಮಾಹಂತೇಶ ಇಂಗಳದಾಳ, ಕುಂಟೇಪ್ಪ ಬೀರಲದಿನ್ನಿ ಸೇರಿದಂತೆ ಮತ್ತು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!