IMG-20240805-WA0016

ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದಿಂದ ಸಾಧನೆಯ ಶಿಖರವಾಗಬೇಕು : ಶಾಸಕ ದೊಡ್ಡನಗೌಡ ಪಾಟೀಲ

ಕುಷ್ಟಗಿ:- ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯ ಕಟ್ಟಿಕೊಳ್ಳುಲು ಶಾಲಾ ಮತ್ತು ಕಾಲೇಜಿನಲ್ಲಿ ಗುರುಗಳು ಹೇಳಿದ ಪಾಠವನ್ನು ಚೆನ್ನಾಗಿ ಕಲಿತು ತಂದೆ ತಾಯಿಗಳ  ಕೀರ್ತಿ, ಗುರುಗಳ ಕೀರ್ತಿ ತರುವಲ್ಲಿ ತಮ್ಮ ಕಠಿಣ ಪರಿಶ್ರಮದೊಂದಿಗೆ ಯಶಸ್ವಿಯಾಗಿ ತಮ್ಮ ಜೀವನದಲ್ಲಿ ಸಾಧನೆ ಮಾಡುವ ಮೂಲಕ ಸಾಧನೆಯ ಶಿಖರವಾಗಬೇಕು ಎಂದು ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಷ್ಟಗಿ 2023-24ನೇ ಸಾಲಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ, ಕ್ರೀಡೆ, ರೇಡ್ ಕ್ರಾಸ್, ಎನ್,ಎಸ್.ಎಸ್. ಮತ್ತು ಸ್ಕೌಟ್ & ಗೈಡ್ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮದ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ತಂದೆ ತಾಯಿಗಳು ಕಷ್ಟಪಟ್ಟು ನಮಗೆ ಶಿಕ್ಷಣವನ್ನು ಕಲಿಸುತ್ತಾರೆ ಅದರಂತೆ ಕಾಲೇಜಿನಲ್ಲಿ ಗುರುಗಳು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನ ರೀತಿಯಲ್ಲಿ ನೋಡಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗೆ  ವಿದ್ಯಾಭ್ಯಾಸವನ್ನು ಕಲಿಸುತ್ತಾರೆ ಗುರುವಿನ ಮಾರ್ಗದ ಅರಿವಿನೊಂದಿಗೆ ವಿದ್ಯಾರ್ಥಿಗಳಾದ ನಾವುಗಳು ನಮ್ಮ  ಜೀವನದ  ಉತ್ತಮ ಭವಿಷ್ಯಕ್ಕಾಗಿ ತಂದೆ ತಾಯಿಗಳ ಆಸೆಯನ್ನು ಈಡೇರಿಸಲು ಸಾಧನೆಯ ಶಿಖರವನ್ನು ಏರಿ ಕಾಲೇಜಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಪ್ರವೀಣ ಪಾಟೀಲ ಉಪನ್ಯಾಸವನ್ನು ನೀಡಿದರು, ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಎಸ್.ವ್ಹಿ.ಡಾಣಿ, ಮಾಜಿ ಪುರಸಭೆ ಅಧ್ಯಕ್ಷ ಹಾಗೂ ಹಾಲಿ ಪುರಸಭೆ ಸದಸ್ಯರಾದ ಜಿ.ಕೆ.ಹಿರೇಮಠ, ಶಶಿಧರ ಕವಲಿ ಸೇರಿದಂತೆ ಕಾಲೇಜಿನ ಶಿಕ್ಷಕರು, ಶಿಕ್ಷಕಿಯರು, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!