WhatsApp Image 2024-08-05 at 6.52.56 PM

ರಾಜ್ಯಪಾಲರ ನಡೆಯನ್ನು ವಿರೋಧಿಸಿ ವಿಜಯನಗರ ಜಿಲ್ಲಾ ಅಹಿಂದ ಸಂಘಟನಾ ಒಕ್ಕೂಟದಿಂದ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 5- ಶೋಷಿತ ಸಮುದಾಯಗಳ ಜನನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಖಂಡಿಸಿ ಮತ್ತು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ರಾಜ್ಯಪಾಲರ ನಡೆಯನ್ನು ವಿರೋಧಿಸಿ ವಿಜಯನಗರ ಜಿಲ್ಲಾ ಅಹಿಂದ ಸಂಘಟನಾ ಒಕ್ಕೂಟ ಹೊಸಪೇಟೆ ವತಿಯಿಂದ, ಸಿಎಂ ಸಿದ್ದರಾಮಯ್ಯನವರನ್ನು ಬೆಂಬಲಿಸಿ ರಾಜ್ಯಪಾಲರ ಅನುಮಾನಾಸ್ಪದ ನಡೆಯನ್ನು ಖಂಡಿಸಿ ವಿವಿಧ ಸಮುದಾಯದ ಮುಖಂಡರುಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಗರದ ಸಾಯಿಬಾಬಾ ಸರ್ಕಲ್ ನಿಂದ ರ್ರ್ಯಾಲಿ ಹೊರಟು ಜಿಲ್ಲಾಧಿಕಾರಿ ಕಛೇರಿಯ ಆವರಣದಲ್ಲಿ ಪ್ರತಿಭಟಿಸಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಇವರಿಗೆ ಅಹಿಂದ ಸಂಘಟನೆಗಳ ಒಕ್ಕೂಟದ ನಾಯಕ ಕೆಎಂ ಹಾಲಪ್ಪ ಇತರರು ಮನವಿಯನ್ನ ನೀಡಿದರು.

ಪರಮೇಶ್ವರ ನಾಯ್ಕ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಎರಡನೆಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ನಾಡಿನ ಜನಮನ ಗೆದ್ದಿದ್ದಾರೆ.ಅವರ ಅವಧಿಯಲ್ಲಿ ಯಾವುದೇ ಹಗರಣಗಳು ನಡೆದಿಲ್ಲ ಮತ್ತು ಮೂಡ ಹಗರಣದ ವಿಷಯದಲ್ಲಿ ಅವರು ಪಾರದರ್ಶಕವಾಗಿದ್ದಾರೆ. ಇತ್ತೀಚಿಗೆ ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿ ಪಟ್ಟ ಭದ್ರ ಹಿತಾಸಕ್ತಿಗಳು ಅಧಿಕಾರದ ದಾಹ ಮತ್ತು ಕುರ್ಚಿಯ ಆಸೆಗಾಗಿ ಜನಪರ ಕಾಳಜಿ ಇರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡ ಮಟ್ಟದ ಷಡ್ಯಂತರವನ್ನು ರೂಪಿಸಿದ್ದಾರೆ. 40 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಇತಿಹಾಸದಲ್ಲಿ ಹಲವು ಮಹತ್ವದ ಅಧಿಕಾರದ ಹುದ್ದೆಯಲ್ಲಿದ್ದರೂ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯನವರ ಆಡಳಿತವನ್ನು ಸಹಿಸದ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಅವರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯನಗರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಸಿರಾಜ್ ಶೇಖ್ ಮಾತನಾಡಿ ಬೆಂಗಳೂರಿಂದ ಮೈಸೂರಿಗೆ ಪಾದರ ಯಾತ್ರೆ ಮಾಡುತ್ತಿರುವವರು ಯಾರು ಎಂದರೆ ರಾಜ್ಯದ ಎಲ್ಲಾ ಹಗರಣಗಳಲ್ಲಿ ಭಾಗಿಯಾದವರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ದರೋಡೆಕೋರರ ಗುಂಪು ಪಾದಯಾತ್ರೆ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ ಎಂದು ವ್ಯಂಗವಾಡಿದರು.

ಮೈಸೂರಿನ ಹೆಸರೇ ಗ್ರಾಮದ 464 ಸರ್ವೇ ನಂಬರ್ ನ ಮೂರು ಎಕರೆ 16 ಗುಂಟೆ ಜಮೀನನ್ನ ಸಿಎಂ ಸಿದ್ದರಾಮಯ್ಯನವರ ಧರ್ಮ ಪತ್ನಿ ಪಾರ್ವತಮ್ಮನವರ ಅಣ್ಣ ಮಲ್ಲಿಕಾರ್ಜುನ ಎಂಬವರಿಗೆ ಮಾರಾಟ ಮಾಡುತ್ತಾರೆ. ಈ ಜಮೀನನ್ನು ಮಲ್ಲಿಕಾರ್ಜುನ ತನ್ನ ತಂಗಿಗಾಗಿ ಅಂದರೆ ನನ್ನ ತಾಯಿ ಸಮಾನರಾದ ಪಾರ್ವತಮ್ಮನವರಿಗೆ ಬಳುವಳಿಯಾಗಿ ನೀಡಿರುತ್ತಾರೆ. ಈ ಭೂಮಿಯನ್ನು ಮೂಡ ಆಕ್ರಮಿಸಿಕೊಂಡು ಶೇ50 -50 ರ ಅನುಪಾತದಲ್ಲಿ ನಿವೇಶನ ನೀಡಲು ನಿರ್ಧರಿಸಿದ್ದರ ಹಿನ್ನೆಲೆಯಲ್ಲಿ ತವರಿನ ಬಳುವಳಿಯನ್ನು ಬಿಟ್ಟುಕೊಡಲು ಮನಸ್ಸಿಲ್ಲದೇ ಮೂಡದಿಂದ ಬದಲಿಗೆ ನಿವೇಶನ ನೀಡುವಂತೆ ಮುಖ್ಯಮಂತ್ರಿಯವರ ಧರ್ಮಪತ್ನಿ ಪಾರ್ವತಮ್ಮ ಬೇಡಿಕೆ ಇಟ್ಟಿದ್ದರು.ಅದರಂತೆ 2022ರಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಆಡಳಿತದಲ್ಲಿದ್ದಾಗ ಬದಲಿ ನಿವೇಶನಗಳನ್ನು ಪಡೆದುಕೊಂಡಿರುತ್ತಾರೆ. ಇದರಲ್ಲಿ ನಾಡಪ್ರಭು ಎಂದು ಹೆಸರುವಾಸಿಯಾಗಿರುವ ಸಿಎಂ ಸಿದ್ದರಾಮಯ್ಯನವರ ತಪ್ಪು ಎಲ್ಲಿದೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರವನ್ನು ಬಳಸಿಕೊಂಡು ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ಅವರಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಒಬ್ಬ ದಾರಿ ಹೋಕ ಅಬ್ರಹಾಂ ಎನ್ನುವ ವ್ಯಕ್ತಿ ಕೊಟ್ಟ 200 ಪುಟಗಳ ದೂರನ್ನು ಪರಿಶೀಲಸದೇ, ಪ್ರತಿಯೊಂದು ಪರಿಶೀಲಿಸಿದ್ದೇನೆ ಎಂದು ಸಮರ್ಥಿಸಿಕೊಂಡ ರಾಜ್ಯಪಾಲರು ಕೇವಲ 6ಗಂಟೆಯಲ್ಲಿ ನೋಟೀಸ್ ಜಾರಿ ಮಾಡಿರುವುದು ಇಡೀ ರಾಜ್ಯದ ಜನತೆಗೆ ನೋವನ್ನುಂಟು ಮಾಡಿದೆ ಇದು ಕೇವಲ ಸಂಕೇತಿಕ ಹೋರಾಟವಾಗಿದ್ದು ಷಡ್ಯಂತರ ನಿಲ್ಲದೆ ಹೋದಲ್ಲಿ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಕರ್ನಾಟಕ ರಾಜ್ಯದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಆಗ್ರಹಿಸಿದರು.

ವಿಜಯನಗರ ಕ್ಷೇತ್ರದ ಶಾಸಕ ಎಚ್ ಆರ್ ಗವಿಯಪ್ಪ ಮಾತನಾಡಿ ಸಿಎಂ ಸಿದ್ದರಾಮಯ್ಯ ಮೊದಲಿನಿಂದಲೂ ಬಡವರ ಕಾಳಜಿ ಬಗ್ಗೆ ಮನಸ್ಸಿರುವ ವ್ಯಕ್ತಿ ಅವರು ತಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಜನಗಳ ಸೇವೆ ಮಾಡಲು ರಾಜಕೀಯಕ್ಕೆ ಬಂದವರು. ಅವರಿಗೆ ವ್ಯವಹಾರಗಳ ಬಗ್ಗೆಗೊತ್ತಿಲ್ಲ ಅವರು ಯಾವತ್ತಿಗೂ ಯಾವ ಭಾಗದ ಶಾಸಕರಾಗಲಿ ಅಭಿವೃದ್ಧಿಗಳ ಕೆಲಸದ ನಿಮಿತ್ತ ಹೋದಾಗ ಅವರು ಯಾವುದನ್ನು ಅಪೇಕ್ಷಿಸದೆ ಸಹಿ ಹಾಕುತ್ತಾರೆ ಸಹಿ ಹಾಕುವಾಗ ಕೆಲಸಗಳು ಕಳಪೆಯಾಗದಂತೆ ನೋಡಿಕೊಳ್ಳಿ ಎಂದು ಹೇಳುತ್ತಾರೆ.ಅವರಿಗೆ ಬಡವರ ಬಗ್ಗೆ ಕಾಳಜಿ ಇದೆ ಹಾಗಾಗಿ ಅವರು ಬಡವರ ಅಭಿವೃದ್ಧಿಗಾಗಿ ಗ್ಯಾರಂಟಿಗಳನ್ನು ತಂದಿದ್ದಾರೆ. ಇದರಿಂದ ತಳಮಟ್ಟದ ಜನ ಕೂಡ ರಾಜ್ಯದಲ್ಲಿ ಸಂತೋಷವಾಗಿದ್ದಾರೆ.ಇಂತಹ ಜನಪರ ಕಾಳಜಿ ಇರುವ ಮುಖ್ಯಮಂತ್ರಿಯನ್ನು ತೇಜೋವಧೆ ಮಾಡಲು ಹೊರಟಿರುವ ಜೆಡಿಎಸ್ ಮತ್ತು ಬಿಜೆಪಿ ನಾಯಕರು ರೂಪಿಸಿರುವ ಕುತಂತ್ರವನ್ನು ಕೂಡಲೇ ನಿಲ್ಲಿಸಬೇಕೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಎಲ್.ಸಿದ್ದನಗೌಡ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಮಾಮ್ ನಿಯಾಜಿ‌, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಣಿ ಸಂಯುಕ್ತ. ಕವಿತಾ ಸಿಂಗ್, ಯೋಗಲಕ್ಷ್ಮಿ, ಶಾಹಿರಬಾನು,ನಿಂಬಗಲ್ ರಾಮಕೃಷ್ಣ, ಬಣ್ಣದ ಮನೆ ಸೋಮಶೇಖರ, ವಕೀಲರಾದ ಹೆಚ್.ಮಹೇಶ, ವಿ.ಸೋಮಪ್ಪ, ಪಿ.ಬಾಬು, ರಾಮಚಂದ್ರ ಗೌಡ, ವಿಜಯನಗರ ಜಿಲ್ಲಾ ನದಾಫ ಸಮಾಜದ ಜಿಲ್ಲಾಧ್ಯಕ್ಷ ಹೋನ್ನುರ ಸಾಬ್, ಕುರಿ ಶಿವಮೂರ್ತಿ,ಗೋವಿಂದಪ್ಪ, ಮರಡಿ ಮಂಜುನಾಥ , ಆಯ್ಯಾಳಿ ಮೂರ್ತಿ, ಜಿ.ಶಿವಕುಮಾರ, ಮೂಲಿಮನಿ ಯರ್ರಿಸ್ವಾಮಿ, ದೇವರ ಮನಿ ಬಸವರಾಜ , ವೆಂಕಟೇಶ, ಮುನಿಯಪ್ಪ, ಗೋಪಾಲ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!