6gvt2

ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಮಿಸಲಾತಿ ಪ್ರಕಟ ಗರಿಗೆದರಿದ ರಾಜಕೀಯ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 7-  ನಗರದ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮಿಸಲಾತಿ ಗೊಂದಲ ರಾಜ್ಯ ಮಟ್ಟದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಆಡಳಿತಅಧಿಕಾರಿ ನೇತೃತ್ವದಲ್ಲಿ ನರಗರಸಭೆ ನಡೆದು ಸದಸ್ಯರುಗಳು ಇದ್ದರು ಇಲ್ಲದಂತಾಗಿತ್ತು. ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಕೆಆರ್ ಪಿಪಿ ಪಕ್ಷದಿಂದ ಗೆದ್ದು ಶಾಸಕರಾಗಿ ಗಂಗಾವತಿ ವಿಧಾನಸಭೆ ಆಯ್ಕೆಯಾಗಿದ್ದರು.

ಕಾಂಗ್ರೇಸನ ಐದು ಜನ ನಗರಸಭೆ ಸದಸ್ಯರುಗಳು ಹಾಗೂ ಜೆಡಿಎಸ್ ಪಕ್ಷದ ಎರಡು ಜನ ನಗರಸಭೆ ಸದಸ್ಯರುಗಳು ಬಿಜೆಪಿ ಪಕ್ಷದಿಂದ ಗೆದ್ದುಬಂದ ನಾಲ್ಕು ಜನ ಸದಸ್ಯರು ಕೆಆರ್ ಪಿಪಿ ಪಕ್ಷ ಸೇರಿದ್ದರು.
ಕೆಲವು ತಿಂಗಳುಗಳ ಹಿಂದೆ ಶಾಸಕ ಜರ್ನಾಧನರೆಡ್ಡಿಯವರು ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಈಗ ಸದ್ಯಕ್ಕೆ ೨೨ಕ್ಕೂ ಹೆಚ್ಚು ಸದಸ್ಯರು ಬಿಜೆಪಿ ಪಕ್ಷದಲ್ಲಿ ಇದ್ದಾರೆ.

ರಾಜ್ಯ ಸರಕಾರ ಮೀಸಲಾತಿ ಘೋಷಣೆ ಮಾಡಿದ್ದು, ಪಪಂ ಅಧ್ಯಕ್ಷ ಹಾಗೂ ಎಸ್.ಸಿ ಉಪಾಧ್ಯಕ್ಷ ಸ್ಥಾನ ಮಿಸಲಾಗಿಇರುವದರಿಂದ ಪಪಂ(ಹಿAದುಳಿದ ವರ್ಗ(ಬಿಸಿಎ) ಅಧ್ಯಕ್ಷ-ಉಪಾಧ್ಯಕ್ಷ ಪರಿಶಿಷ್ಟ ಜಾತಿಮಹಿಳೆ(ಎಸ್ಸಿ)ಸ್ಥಾನಗಳ ಮೀಸಲಾತಿ ಪಟ್ಟಿ ಪ್ರಕಟಿಸಿದೆ.

ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಪರಶುರಾಮ ಮಡ್ಡೆರ್ ಶರಭೋಜಿ,ಮುಸ್ತಾಕ ಆಲಿ, ಮಹಮದ್ ಉಸ್ಥಾನ ಬಿಚ್ಚಗತ್ತಿ, ಜಬ್ಬಾರ ಬೇಗ, ಮೌಲಸಾಬ, ನೀಲಕಂಠ ಕಟ್ಟಿಮನಿ, ಆಜಯಕುಮಾರ ಬಿಚ್ಚಾಲಿ, ಅಧ್ಯಕ್ಷ ಸ್ಥಾನ ಪಡೆಯಲು ಪೈಪೋಟಿ ನಡೆಸಿದ್ದಾರೆ.

ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಿದೆ. ಬಿಜೆಪಿ ಮೈತ್ರಿಕೂಟದಲ್ಲಿ ಸುಧಾ ಸೋಮನಾಥ, ಪಾರ್ವತಮ್ಮ ಇಬ್ಬರಿದ್ದಾರೆ.

ಶಾಸಕ ಗಾಲಿ ಜರ್ನಾಧನ ರೆಡ್ಡಿಯವರುಈಗಾಗಲೇ ಎಲ್ಲಾ ನಗರಸಭೆ ಸದಸ್ಯರೊಂದಿಗೆ ಬೆಂಗಳೂರಿನಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿ ಸನ್ನದ್ದರಾಗಿದ್ದಾರೆ. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ ನಗರಸಭೆ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಶಾಸಕ ಗಾಲಿ ಜರ್ನಾಧನರೆಡ್ಡಿಯವರಿಗೆ ಸಾಥ ನೀಡಲು ಸೈ ಎಂದಿದ್ದಾರೆ.

ಕಾಂಗ್ರೇಸ ರಾಜಕಾರಣದ ಲೆಕ್ಕಚಾರವೇ ಬೇರೆ : ಬ್ಲಾಕ ಕಾಂಗ್ರೇಸ ಅಧ್ಯಕ್ಷ ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶ್ಯಾಮಿದ ಮನಿಯಾರ ನಾವು ಯಾವಾಗಲೂ ಕಾಂಗ್ರೇಸ ಕಟ್ಟಾನಿಷ್ಠರಾಗಿ ಇದ್ದವೆ. ನಗರಸಭೆ ಕಾಂಗ್ರೇಸ ತೆಕ್ಕೆಯಿಂದ ಬಿಡುವುದಿಲ್ಲ ಎಂದರು.

ನಗರಸಭೆ ಸದಸ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮನೋಹರ ಸ್ವಾಮಿ ಯವರು ಮಾತನಾಡಿ ಕೆಆರ್ ಪಿಪಿ ಸೇರಿದ ನಮ್ಮಕಾಂಗ್ರೇಸ ಸದಸ್ಯರುಗಳು ಮರಳಿ ಗೂಡಿಗೆ ಬರುತ್ತಾರೆ. ಕಾದುನೋಡಿ ನಮ್ಮ ಕಾಂಗ್ರೇಸ ಹೈಕಮಾಂಡ ನಗರಸಭೆ ಬಿಟ್ಟು ಕೊಡುವುದಿಲ್ಲ. ಕಾಂಗ್ರೆಸನಿಂದ ನೂತನವಾಗಿ ಆಯ್ಕೆಯಾದ ಸಂಸದರು ಹಾಗೂ ವಿಧಾನಪರಿಷತ ಇರ್ವರು ಸದಸ್ಯರು ಇದ್ದಾರೆ.

ಕಾಂಗ್ರೇಸಿನಿAದ ಅಧ್ಯಕ್ಷ ಸ್ಥಾನಕ್ಕೆ ಸುನಿತಾ ಶ್ಯಾವಿ,ಗದ್ವಾಲ ಖಾಸಿಂಸಾಬ ಇನ್ನೂ ಅನೇಕರು ಇದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಹುಲಿಗೆಮ್ಮ ಕಿರಿಕಿರಿ ಹಾಗೂ ಪಾರ್ವತೆಮ್ಮ ದುರುಗೇಶ ಇದ್ದಾರೆ ನಮ್ಮ ಪಕ್ಷದ ಒಳಗುಟ್ಟಿನ ಬಗ್ಗೆ ಏನು ಹೇಳೋದಿಲ್ಲ ಕಾಂಗ್ರೇಸ ಒಂದೇ ಇದೆ ಮೂರು ಬಾಗಿಲು ಇಲ್ಲ ಎಂದರು.

ಇವೇಲ್ಲದರ ನಡುವೆ ಬೆಂಗಳೂರಿನಲ್ಲಿ ಕುಳಿತು ಸರಕಾರದ ನೇಮಕಾತಿಗಳನ್ನು ತನ್ನೊಂದಿಗೆ ಗುರುತಿಸಿಕೊಂಡವರಿಗೆ ಸದಸ್ಯರುಗಳನ್ನಾಗಿ ನೇಮಕ ಕೊಂಡು ಬಂದಿರುವ ಕಾಂಗ್ರಸಿನ ಮಾಜಿ ಸಚಿವ ಇಕ್ಬಾಲ ಅನ್ಸಾರಿ ತಮ್ಮ ನಿರ್ಧಾರದ ಬಗ್ಗೆ ಮಾತನಾಡದೇ ಮೌನ ವಹಿಸಿ ರಾಜಕೀಯ ಲೆಕ್ಕಚಾರ ಹಾಕುತ್ತಿದ್ದಾರೆ.

ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಹಾಗೂ ವಿಧಾನಪರಿಷತ ಮಾಜಿ ಸದಸ್ಯ ಹೆಚ್. ಆರ್. ಶ್ರೀನಾಥ ಬ್ಲಾಕ ಕಾಂಗ್ರೇಸ ಅಧ್ಯಕ್ಷ ಶ್ಯಾಮಿದ ಮನಿಯಾರರೊಂದಿಗೆ ಸೇರಿ ಶಾಸಕ ಗಾಲಿ ಜರ್ನಾಧನರೆಡ್ಡಿ ಯವರೊಂದಿಗೆ ಕೆಆರ್ ಪಿಪಿ ಪಕ್ಷ ಸೇರಿದ್ದ ಕಾಂಗ್ರೇಸ ನಗರಸಭೆ ಸದಸ್ಯರುಗಳನ್ನು ಹಾಗೂ ಜೆಡಿಎಸ್ ಸದಸ್ಯರುಗಳನ್ನು ಕರೆ ತರುವ ಪ್ರಯತ್ನದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಕೋನೆಯ 15 ತಿಂಗಳ ಅವಧಿಯ ನಗರಸಭೆಯ ಚುಕ್ಕಾಣಿ ಹಿಡಿಯುವ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಹಾಗೂ ಕಾಂಗ್ರೇಸ ಪಕ್ಷದ ಬಿರುಸಿನ ರಾಜಕೀಯ ಚಟುವಟಕೆ ಗರಿಗೆದುರಿದೆ.

ನಗರದಜನರು ಮಾತ್ರ ಅಧಿಕಾರಿದಲ್ಲಿ ಯಾರೇ ಕೂಡಲಿ ನಗರದ ಅಭಿವೃದ್ದಿಗೆ ಆದ್ಯತೆ ನೀಡಬೇಕು ಎನ್ನುವುದು ಸಾರ್ವಜನಿಕರ ಅಂಭೋಣವಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!