
ಅಂಚೆ ಸೇವೆಯಲ್ಲಿ ಬಳ್ಳಾರಿ ವಿಭಾಗಕ್ಕೆ 15 ರಾಜ್ಯ ಪ್ರಶಸ್ತಿಗಳು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 7- ಭಾರತೀಯ ಅಂಚೆ ಇಲಾಖೆಯು 2023-24ನೆ ಅರ್ಥಿಕ ವರ್ಷದಲ್ಲಿ ಹಮ್ಮಿಕೊಂಡ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಬಳ್ಳಾರಿ ಅಂಚೆ ವಿಭಾಗವು ಸಾರ್ವಜನಿಕರಿಗೆ ಅತ್ತ್ಯುತ್ತಮವಾಗಿ ಸೇವೆಯನ್ನು ನೀಡಿರುತ್ತದೆ, ಪ್ರತಿಫಲವಾಗಿ ಭಾರತೀಯ ಅಂಚೆ ಇಲಾಖೆ ಕೊಡ ಮಾಡುವ ಪ್ರಶಸ್ತಿಗಳಲ್ಲಿ ಬಳ್ಳಾರಿ ವಿಭಾಗ 15 ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಅಂಚೆ ಇಲಾಖೆಯ ಜಿಲ್ಲಾ ಅಧೀಕ್ಷಕರಾದ ಚಿದಾನಂದ ತಿಳಿಸಿದ್ದಾರೆ.
ಜುಲೈ 30 ರಂದು ಚಿಕ್ಕಬಳ್ಳಾಪುರದ ಡಿಸ್ಕವರಿ ವಿಲೇಜ್ ರೆಸಾರ್ಟ್ ನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ವೃತ್ತ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಳ್ಳಾರಿ ಅಂಚೆ ವಿಭಾಗವು ತನ್ನ ಅತ್ಯುತ್ತಮ ಸೇವೆಗಾಗಿ ರಾಜ್ಯಮಟ್ಟದ 15 ಪ್ರಶಸ್ತಿಗಳನ್ನು ಪಡೆದು ರಾಜ್ಯದಲ್ಲಿಯೇ ಅತಿಹೆಚ್ಚು ಪ್ರಸಸ್ತಿ ಪಡೆದ ವಿಭಾಗವಾಗಿ ಹೊರಹೊಮ್ಮಿದೆ.
ಉಪ ವಿಭಾಗ ಮಟ್ಟದಲ್ಲಿ ಬಳ್ಳಾರಿ , ಹೊಸಪೇಟೆ , ಕೂಡ್ಲಿಗಿ ಉಪವಿಭಾಗಗಳು , ಪ್ರಧಾನ ಅಂಚೆ ಕಚೇರಿ ಮಟ್ಟದಲ್ಲಿ ಬಳ್ಳಾರಿ , ಹೊಸಪೇಟೆ ಪ್ರಧಾನ ಅಂಚೆ ಕಛೇರಿಗಳು , ಉಪ ಅಂಚೆ ಕಛೇರಿಗಳ ಮಟ್ಟದಲ್ಲಿ ಸಿರುಗುಪ್ಪ , ಕೂಡ್ಲಿಗಿ, ಅರಸೀಕೆರೆ ಉಪ ಅಂಚೆ ಕಛೇರಿಗಳು ಮತ್ತು ಶಾಖಾ ಅಂಚೆ ಕಚೇರಿ ಮಟ್ಟದಲ್ಲಿ ಮಾದಿಹಳ್ಳಿ ರಾಜ್ಯದಲ್ಲೇ ಉತ್ತಮ ಪ್ರದರ್ಶನ ನೀಡಿ ರಾಜ್ಯ ಪ್ರಶಸ್ತಿ ಪಡೆದಿವೆ ಜೊತೆಗೆ ವೈಯಕ್ತಿಕ ವಿಭಾಗದಲ್ಲಿ ಬಳ್ಳಾರಿ ಪ್ರಧಾನ ಅಂಚೆ ಕಚೇರಿಯ ಶಾಂತಮ್ಮ IPPB ಯಲ್ಲಿ ಮೂರು ರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಗಳ ಅನುಷ್ಟಾನ, ಹೊಸ ಅಂಚೆ ಉಳಿತಾಯ ಖಾತೆಗಳನ್ನು ತೆರೆಯುವ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಬಳ್ಳಾರಿ ವಿಭಾಗದ ಅಂಚೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಲುವಾಗಿ ಸಲುವಾಗಿ ಬಳ್ಳಾರಿ ಅಂಚೆ ವಿಭಾಗ ಈ ಪ್ರಶಸ್ತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದರ ಎಲ್ಲಾ ಶ್ರೇಯಸ್ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಸಮಸ್ತ ಅಂಚೆ ಸಿಬ್ಬಂದಿಗೆ ಸಲ್ಲುತ್ತದೆ ಎಂದು ಅಂಚೆ ಅಧಿಕ್ಷಕರು ಸಿಬ್ಬಂದಿಗಳನ್ನು ಅಭಿನಂದಿಸಿದರು.
ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು, ವಿಮಾ ಯೋಜನೆಗಳು, ಮನೆಬಾಗಿಲಿಗೆ DBT ಆಯ್ಕೆಗಳು ಮತ್ತು ಪತ್ರವ್ಯವಹಾರಗಳು ಕಟ್ಟ ಕಡೆಯ ಪ್ರತಿ ನಾಗರಿಕನಿಗೂ ಸುಬಧ್ರತೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಜನ ಸಾಮಾನ್ಯರಿಗೆ ಅಂಚೆ ಇಲಾಖೆಯ ಸೇವೆಗಳು ಅತ್ಯಂತ ವಿಶ್ವಾಸ ಅರ್ಹತೆ ಪಡೆದುಕೊಂಡಿವೆ ಕಾರಣ ಸಾರ್ವಜನಿಕರ ಸೇವೆಗಾಗಿ ಇಲಾಖೆ ಸದಾ ಸನ್ನದ್ದ ವಿದೆ ಎಂದು ಅವರು ತಿಳಿಸಿದರು.