
ಕುಷ್ಟಗಿ : ವಕೀಲರ ಸಂಘದ ಅಧ್ಯಕ್ಷರಾಗಿ ಸಂಗನಗೌಡ ಜಿ. ಪಾಟೀಲ ಆಯ್ಕೆ
ಅತ್ಯಂತ ತುರುಸಿನ ಪೈಪೋಟಿಯಿಂದ ಇಂದು ನಡೆದ 2024-25 ನೇ ಸಾಲಿನ ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಹೆಚ್ಚು ಮತ ಪಡೆಯುವ ಮೂಲಕ ಸಂಗನಗೌಡ ಪಾಟೀಲ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂಗಮೇಶ ಕಂದಕೂರ ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷದ ಅದ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹೊರತುಪಡಿಸಿ ಈಗಾಗಲೇ ಉಳಿದ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ ಅದ್ಯಕ್ಷ ಆಕಾಂಕ್ಷಿಗಳಾದ ಸಂಗನಗೌಡ ಜಿ. ಪಾಟೀಲ್ ಹಾಗೂ ದೊಡ್ಡನಗೌಡ ಪಾಟೀಲ್ (ರೆಡ್ಡಿ )ಅವರ ಮಧ್ಯ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣೆ ನಡೆಸಲಾಯಿತು. ಒಟ್ಟು 249 ಮತಗಳಲ್ಲಿ 1 ಕುಲಗೆಟ್ಟ ಮತ ಸೇರಿದಂತೆ 204 ಮತಗಳು ಚಲಾವಣೆಯಾದವು. ಇದರಲ್ಲಿ ಸಂಗನಗೌಡ ಜಿ ಪಾಟೀಲ್ ಅವರು 130 ಮತ ಹಾಗು ದೊಡ್ಡನಗೌಡ ಪಾಟೀಲ್ (ರೆಡ್ಡಿ) 73 ಮತ ಪಡೆದುಕೊಂಡರು. ಒಟ್ಟು 57ಮತಗಳ ಅಂತರದಿಂದ ಸಂಗನಗೌಡ ಜಿ ಪಾಟೀಲ್ ಅವರು ವಿಜಯಶಾಲಿಯಾದರು ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಉಳಿದ ಸ್ಥಾನಗಳಿಗೆ ಅವಿರೋದ ಆಯ್ಕೆ ಮಾಡಲಾಗಿದ್ದು ಉಪಾಧ್ಯಕ್ಷರಾಗಿ ರಾಜಶೇಖರ್ ಮಾಲಿಪಾಟೀಲ, ಕಾರ್ಯದರ್ಶಿ ಆನಂದ ಡೊಳ್ಳಿನ, ಜಂಟಿ ಕಾರ್ಯದರ್ಶಿ ಮಹಾಂತೇಶ್ ನಾಯಕ, ಮಹಿಳಾ ಪ್ರತಿನಿಧಿ ಲತಾ ಸ್ಥಾವರಮಠ ಅವರನ್ನು ಆಯ್ಕೆಮಾಡಲಾಗಿದೆ ಎಂದು ವಕೀಲರ ಸಂಘದವರು ಮಾಹಿತಿ ನೀಡಿದರು.
ನಂತರ ವಕೀಲರ ಸಂಘದಿಂದ ನೂತನ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಿ ಸಿಹಿ ಹಂಚಲಾಯಿತು.