WhatsApp Image 2024-08-13 at 4.42.30 PM

ಟಿಬಿ ಡ್ಯಾಂ ಗೇಟ್ ಶೀಘ್ರವಾಗಿ ಸರಿಪಡಿಸಿ ರೈತರ ಆತಂಕವನ್ನು ದೂರ ಮಾಡಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 13- ತುಂಗಭದ್ರಾ ಜಲಾಶಯದ 19 ನೇ ಗೇಟ್ ನ ಸರಪಳಿಯ ಕೊಂಡಿ ಕಳಚಿ ಹೋಗಿದ್ದು, ಅದನ್ನು ಆದಷ್ಟು ಬೇಗನೆ ರಿಪೇರಿ ಮಾಡಿ, ಈಗಾಗಲೇ ಬಿತ್ತನೆ ಮಾಡಿ ನೀರಿನ ಅಭಾವದಿಂದ ಆತಂಕಕ್ಕೆ ಒಳಗಾದ ಕರ್ನಾಟಕ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರ ಹಿತವನ್ನು ಕಾಪಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗನಕಲ್ಲು ಕೃಷ್ಣಮೂರ್ತಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತುಂಗಭದ್ರಾ ಜಲಾಶಯದ ಅಧಿಕಾರಿಗಳು ನಿರ್ಲಕ್ಷ ವಹಿಸಿದ ಕಾರಣದಿಂದಾಗಿ ಈ ರೀತಿಯಾಗಿ ಅತ್ಯಂತ ಪ್ರಮುಖವಾದ ಗೇಟಿನ ಸರಪಳಿಯ ಕೊಂಡಿ ಕಳೆಚಿ ಹೋಗಿರುತ್ತದೆ, ಇಂತಹ ತಾಂತ್ರಿಕ ವಿಷಯಗಳ ಬಗ್ಗೆ ಗಮನಹರಿಸಿ ಕಾಲಕಾಲಕ್ಕೆ ಅವುಗಳನ್ನು ಬದಲಾಯಿಸಿ ತುಂಗಭದ್ರ ಜಲಾಶಯದ ಸುರಕ್ಷತೆಯನ್ನು ಕಾಪಾಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದರಿಂದ ಸಹಜವಾಗಿ ಜಲಾಶಯ ಅವಲಂಬನೆಯಿಂದ ಕೃಷಿ ಚಟುವಟಿಕೆಯನ್ನು ಮಾಡುತ್ತಾ ಸಂತೋಷಗೊಂಡಿದ್ದರು.

ಭತ್ತ ಮತ್ತು ಹತ್ತಿ, ಮೆಣಸಿನ ಕಾಯಿ, ಮೆಕ್ಕೆಜೋಳ ಬೆಳೆಯನ್ನು ಬಿತ್ತನೆ ಮಾಡಿದ್ದರು. ಜಲಾಶಯದ ಚೈನ್ ಲಿಂಕ್ ತುಂಡಾಗಿ ಹೋದ ಕಾರಣ ಸಹಜವಾಗಿ ರೈತರಿಗೆ ಬಹಳ ಆಂತಕ ಶುರುವಾಗಿದೆ.

ಆದ್ದರಿಂದ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಸಂಬಂಧಿಸಿದ ಅಧಿಕಾರಿಗಳು , ಜವಾಬ್ದಾರಿಯಿಂದ ಕೆಲಸ ಮಾಡಿ ಆದಷ್ಟು ಬೇಗನೆ ರಿಪೇರಿ ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಪ್ರತಿ 6 ತಿಂಗಳಿಗೊಮ್ಮೆ ಆಂಧ್ರ ಮತ್ತು ಕರ್ನಾಟಕ ಸರ್ಕಾರಗಳು, ಸಭೆಯನ್ನು ನಡೆಸಬೇಕು, ಹಿರಿಯ ಅಧಿಕಾರಿ ಒಬ್ಬರು ಆರು ತಿಂಗಳು ರಜಾ ಇದ್ದಾರೆ. ಅದಕ್ಕೆ ಬದಲಾಗಿ ಬೇರೆಯವರಿಗೆ ಉಸ್ತುವಾರಿ ವಹಿಸಬೇಕು ಅಥವಾ ಹೊಸದಾಗಿ ನೇಮಕ ಮಾಡಿಕೊಳ್ಳಬೇಕು.

ಅತ್ಯಂತ ಪ್ರಮುಖವಾಗಿ ಈ ತಕ್ಷಣ 19ನೇ ಗೇಟ್ ಸಂಬಂಧಿಸಿದ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. .

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಬೆವಿನಗಿಡದ ಎರಿಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ತಿಮ್ಮಪ್ಪ, ಮಾರಣ್ಣ ಚಿನ್ನರಾಯ್ಡು ಶ್ರೀರಾಮುಲು ಇದ್ದರು.

Leave a Reply

Your email address will not be published. Required fields are marked *

error: Content is protected !!