19Ylb03

ಶಾಸಕ ರಾಯರಡ್ಡಿ ಸ್ವ-ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ : ಯಲಬುರ್ಗಾ ಪ.ಪಂ ಬಿಜೆಪಿ ತೆಕ್ಕೆಗೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 20- ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆ ಸೋಮವಾರ ನಡೆದ ಚುನಾವಣೆಯಲ್ಲಿ ಹೊಸದಾಗಿ ಬಿಜೆಪಿ ವತಿಯಿಂದ ಅಂದಯ್ಯ ಕಳ್ಳಿಮಠ ಅಧ್ಯಕ್ಷ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಸಿದ್ರಾಮೇಶ ಬೇಲೇರಿ ಆಯ್ಕೆಗೊಂಡರು.

ಮುAಜಾನೆ ನಡೆದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಬ ಅಧ್ಯಕ್ಷ ಸ್ಥಾನಕ್ಕೆ ಅಂದಯ್ಯ ಕಳ್ಳಿಮಠ ಹಾಗೂ ಡಾ.ನಂದಿತಾ ಶಿವನಗೌಡ ದಾನರಡ್ಡಿ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಪ.ಪಂ. ಸದಸ್ಯೆ ವಿಜಯಲಕ್ಷ್ಮೀ ಸಿದ್ರಾಮೇಶ ಬೇಲೇರಿ, ರೇವಣಪ್ಪ ಹಿರೇ ಕುರಬರ ನಾಮಪತ್ರ ಸಲ್ಲಿಸಿದರು. ತದ ನಂತರ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ ಡಾ.ನಂದಿತಾ ದಾನರಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ರೇವಣಪ್ಪ ತಮ್ಮ ನಾಮಪತ್ರವನ್ನು ವಾಪಸು ಪಡೆದರು.

ಕಣದಲ್ಲಿ ಉಳಿದಿದ್ದ ಅಂದಯ್ಯ ಕಳ್ಳಿಮಠ ಅವರನ್ನು ಅಧ್ಯಕ್ಷ, ವಿಜಯಲಕ್ಷ್ಮೀ ಸಿದ್ರಾಮೇಶ ಬೇಲೇರಿ ರನ್ನು ಉಪಾಧ್ಯಕ್ಷರನ್ನಾಗಿ ಚುನಾವಣಾ ಅಧಿಕಾರಿ ಬಸವರಾಜ ತೆನ್ನಳ್ಳಿ ಅಧಿಕೃತವಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ವಿಜಯಕುಮಾರ ಗುಂಡೂರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಗುಂಡೂರು, ಪ.ಪಂ ಸದಸ್ಯರಾದ ವಸಂತ ಭಾವಿಮನಿ, ಬಸಮ್ಮ ಈರಪ್ಪ ಬಣಕಾರ, ಹನುಮಂತ ಭಜಂತ್ರಿ, ಬಸವಲಿಂಗಪ್ಪ ಕೊತ್ವಾಲ್, ಅಶೋಕ ಅರಿಕೇರಿ, ಅಮರೇಶ ಹುಬ್ಬಳ್ಳಿ, ರಿಯಾಜ್ ಮಹ್ಮದ್‌ಖಾಜಿ, ಶಾಂತಾ ಮಾಟೂರು, ಕಲಾವತಿ ಮರದಡ್ಡಿ, ಶ್ರೀದೇವಿ ದೊಡ್ಡಯ್ಯ ಗುರವಿನ್, ಸೇರಿದಂತೆ ಮುಖಂಡರು ಇನ್ನಿತರರು ಇದ್ದರು.

ನಂತರ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಬಿಜೆಪಿ ಮುಖಂಡರು ವಿಜಯೋತ್ಸವ ಆಚರಿಸಿದರು. ಈ ವೇಳೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ, ಬಸವರಾಜ ಗೌರಾ, ಸಿ.ಎಚ್.ಪಾಟೀಲ್, ವೀರಣ್ಣ ಹುಬ್ಬಳ್ಳಿ, ಅರವಿಂದಗೌಡ ಪಾಟೀಲ್, ಎಸ್.ಎನ್.ಶ್ಯಾಗೋಟಿ, ಮಾರುತಿ ಗಾವರಾಳ, ಪ್ರಕಾಶ ಬೇಲೇರಿ, ರವಿ ಕಲಬುರಗಿ, ಪ್ರಭುರಾಜ ಕಲಬುರಗಿ ಸೇರಿದಂತೆ ಪಕ್ಷದ ಮುಖಂಡರು ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!