
ಬ್ರಾಹ್ಮಣ ಸಮಾಜದಿಂದ ಉಪಾಕರ್ಮ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 20- ಪಟ್ಟಣದ ಶ್ರೀ ಲಕ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ಉಪಾಕರ್ಮ ಕಾರ್ಯಕ್ರಮ ನಡೆಯಿತು.
ನಮ್ಮನ್ನು ಬಾಹ್ಮಣರೆಂದು ಗುರುತಿಸಿಕೊಳ್ಳಲು ಇರುವ ಏಕಮಾತ್ರ ಸಾಧನವಾಗಿರುವ “ಯಜ್ಞೋಪವಿತ” ವನ್ನು ಶ್ರದ್ದಾ ಭಕ್ತಿ ಪೂರಕವಾಗಿ ಧರಿಸಿ ಕೊಳ್ಳಬೇಕು. ನಮ್ಮ ನಿತ್ಯದ ಶ್ರೌತ ಹಾಗು ಸ್ಮಾರ್ತ ಕರ್ಮಗಳನ್ನು ನಡೆಸುವ ಅರ್ಹತೆ ಬರಬೇಕಾದರೆ ವರ್ಷಕೊಮ್ಮೆ ಬರುವ ಉಪಾಕರ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಥಾಪಿತ ಋಷಿಗಳ ಸಮಕ್ಷಮದಲ್ಲಿ ಯಜ್ಞೋಪವಿತ ಧಾರಣೆ ಮಾಡಿಕೊಳ್ಳಬೇಕೆಂದು ಹೋಮದ ಕಾರ್ಯಕ್ರಮವನ್ನು ನಡೆಸಿಕೊಟ್ಟ ಪವಮಾನ ಆಚಾರ ತಿಳಿಸಿದರು.
ದೇಹ ಶುದ್ದಿಗಾಗಿ ಪಂಚಗವ್ಯ ಪ್ರಾಶನ, ಇದರಿಂದ ನಮ್ಮ ದೇಹ ಪವಿತ್ರವಾಗಿ ನಂತರ ಜನಿವಾರಧಾರಣೆ ಮಾಡಲಾಯಿತು.
ಈ ಸಂದರ್ಬದಲ್ಲಿ ಗಾಯತ್ರಿ ದೇವಿಯನ್ನು ಸ್ಮರಿಸಿ, ನಮ್ಮನಮ್ಮ ಗೋತ್ರದ ಋಷಿಗಳ ಮುಂದೆ ಯಜ್ಞೋಪವಿತವನ್ನು ಇಟ್ಟು ಪೂಜಿಸಿ ನಂತರ ಅದನ್ನು ಧರಿಸಲಾಯಿತು. ಬ್ರಾಹ್ಮಣ ಸಮಾಜದ ಹಿರಿಯರಾದ ವೆಂಕಟರಾವ ಮೇಗುರು, ಭೋಗೆಶ ದೇಶಪಾಂಡೆ ವಿರಾಪೂರ, ಸುಭಾಸ ಆಚಾರ ಜೋಶಿ ಸಾಸ್ವಿಹಾಳ, ಮಾಧವರಾವ, ವಿಠಲರಾವ, ನರಸಿಂಹಾರ್ಚಾರ್ಯಜೋಶಿ, ಕೇಶವರಾವ ಕುಲಕರ್ಣಿ, ಸುರ್ಯಕಾಂತರಾವ ನಾಯಕ, ಭೋಗೆಶ ನಾರಿನಾಳ, ವಾಸದೇವರಾವ ನಾರಿನಾಳ, ಅನೀಲ ಆಚಾರ, ಗುರಾಜ ಹುಬ್ಬಳ್ಳಿ ಹಾಗು ವೈಶ್ಯಸಮಾಜದ ಮುಖಂಡರಾದ ನರಹರಿಯಪ್ಪ ದರೋಜಿ, ಹನುಮೇಶಪ್ಪ ಖ್ಯಾಡೆದ, ಗೋವಿಂದ ಹಂಚಿನಾಳ ಇನ್ನು ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.