
ನೌಕರರು ಕರ್ತವ್ಯ ನಿಷ್ಠರಾಗಿರಬೇಕು : ಡಿ.ಎಂ.ದ್ರಾಕ್ಷಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 20- ಕೆಲಸದ ಮೂಲಕ ನಮ್ಮನ್ನು ಜನರು ಗುರುತಿಸಬೇಕು ಹಾಗೇಯೆ ಸರಕಾರಿ ನೌಕರರು ತಮ್ಮ ಕೆಲಸದಲ್ಲಿ ಕರ್ತವ್ಯನಿಷ್ಠರಾಗ ಬೇಕೆಂದು ಅಂಚೆ ಇಲಾಖೆಯ ಸಬ್ ಪೋಷ್ಟ ಮಾಸ್ಟರ್ ಡಿಂ. ದ್ರಾಕ್ಷಿ ಹೇಳಿದರು.
ಪಟ್ಟಣದ ಅಂಚೆ ಇಲಾಖೆಯಿಂದ ಪದೋನ್ನತಿಯಾಗಿ ಕೊಪ್ಪಳಕ್ಕೆ ವರ್ಗಾವಣೆಯಾದ ಅವರಿಗೆ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸರಕಾರಿ ನೌಕರರಿಗೆ ವರ್ಗಾವಣೆ ಸಹಜ ಪ್ರಕ್ರೀಯೆ ಆಗಿದೆ ಆದರೆ ಅವರು ವರ್ಗಾವಣೆಯಾದರೂ ಅಲ್ಲಿನ ಜನರು ನಮಗೆ ತೋರುವಪ್ರೀತಿ ನಿಜಕ್ಕೂ ದೊಡ್ಡದಾಗಿರುತ್ತದೆ.
ನಾವು ಎಷ್ಟುದಿನ ಕಾರ್ಯ ನಿರ್ವಹಿಸಿದೆವು ಅನ್ನುವದಕ್ಕಿಂತ ನಾವು ಸೇವೆಯಲ್ಲಿ ಇದ್ದಾಗ ಜನರಿಗೆ ಸೇವಕರಾಗಿ ಜನಹಿತ ಕಾಪಾಡಿದ್ದು ಅಚ್ಚಳಿಯದ ಸೇವೆ ಆಗಿರುತ್ತದೆ. ಜನರ ಕುಂದುಕೊರತೆಗಳು ಹಾಗೂ ಇಲಾಖೆಯಿಂದ ಸಿಗುವ ನಾನಾ ಸೌಲಭ್ಯಗಳನ್ನು ಮುಟ್ಟಿಸುವಲ್ಲಿ ಪ್ರಾಮಾಣಿಕ ಸೇವೆಗೈದಾಗ ಜನರ ಮನಸ್ಸಿನಲ್ಲಿ ನಾವು ಸದಾ ಇರಲು ಸಾಧ್ಯವೆಂದರು.
ಕಾಟಾಚಾರಕ್ಕೆ ನೌಕರಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತ ಕಟ್ಟೇಚರದಿಂದ ಸೇವೆಗೈದಾಗ ಆತ್ಮ ಸಂತ್ರಪ್ತಿ ಸಿಗುವುದು ಎಂದರು .
ವೀರೆಶ ಜೂಚನಿ ಮಾತನಾಡಿ, ಎಚ್.ಎಸ್.ಜಿ-2 ಹುದ್ದೆ ಇಲ್ಲಿ ಇಲ್ಲದಿರುವದರಿಂದ ದ್ರಾಕ್ಷಿ ಅವರು ಅನಿವಾರ್ಯವಾಗಿ ವರ್ಗಾವಣೆ ಗೊಳ್ಳಬೇಕಾಗಿದೆ ಎಂದರಲ್ಲದೆ ಇಲಾಖೆಯಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸುವ ಅವರು ನೌಕರರ ಸಂಕಷ್ಟಗಳಿಗೆ ಪರಿಹಾರ ನೀಡುವ ಮೂಲಕ ಜನಾನುರಾಗಿಗಳಾಗಿದ್ದಾರೆ
ಡಿವಿಜಿಯವರ ವಾಣಿಯಾದ ” ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮನೆಯ ವಿಧಿಸುರಿಯೆ ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಗೆ ಎಲ್ಲರೊಳಗೊಂದು ಮಂಕುತಿಮ್ಮ ” ಎನ್ನುವಂತೆ ಅವರು ಜೀವನವನ್ನು ಸವೆಸಿ ನಮಗೆಲ್ಲರಿಗೂ ಮಾದರಿ ಆಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ಬನ್ನೀಕೊಪ್ಪ, ಗೋವಿಂದ ಹೇಮಾದ್ರಿ, ಬಸಣ್ಣ, ನೀಲಕಂಠಪ್ಪ, ಕನಕಪ್ಪ, ಶ್ರೀದೇವಿ, ಸಂತೋಷ, ಸುಧಾ ಇನ್ನೀತರರು ಫಲಪುಷ್ಪ ನೀಡಿ ಗೌರವಿಸಿ ಸನ್ಮಾನ ಗೈದರು.