
7ನೇ ವೇತನ ಆಯೋಗ ಅನುಷ್ಠಾನದಲ್ಲಿ, ಆದ ತಾರತಮ್ಯವನ್ನು ಸರಿಪಡಿಸಲು ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಅನುಷ್ಠಾನದಲ್ಲಿ, ನಿವೃತ್ತಿಯಾದ ಅಧಿಕಾರಿಗಳು ಮತ್ತು ನೌಕರರಿಗೆ ಪರಿಸ್ಕೃತ ವೇತನ ಶ್ರೇಣಿಯಲ್ಲಿ ಆದ ವ್ಯತ್ಯಾಸವನ್ನು ಕೂಡಲೇ ಪರಿಷ್ಕರಿಸಲು ಇಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಚಾಲಕರು ಏಕೆ ಚಂದ್ರಪ್ಪ ಮಾತನಾಡುತ್ತಾ 01/07/2022,ರಿಂದ 31/07/2024 ಅವಧಿಯಲ್ಲಿ ನಿವೃತ್ತರಾದ ಅಧಿಕಾರಿ / ನೌಕರರಿಗೆ 7 ನೆ ವೇತನ ಅನುಷ್ಠಾನದಲ್ಲಿ, ಸೇವೆಯಿಂದ ನಿವೃತ್ತರಾದ, ಸೇವೆಯಲ್ಲಿ ಇರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ಮತ್ತು ನಿವೃತ್ತಿ ವೇತನ ಮತ್ತು ಕುಟುಂಬದವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸತಕ್ಕದ್ದು ಆದರೆ ಸದರಿ ಕಾಲ್ಪನಿಕ ಪುನರ್ ನಿಗದಿಯ ಹಾರ್ದಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗೆ ಅಥವಾ ಮರಣ ಹೊಂದಿದ ಸರ್ಕಾರಿ ನೌಕರರ ಫಲಾನುಭವಿಗೆ ಸಂದರ್ಭನು ಸಾರ 01/08/2024 ರಿಂದ ಪ್ರಾಪ್ತವಾಗುತಕ್ಕದ್ದು ಎಂದರು.
ಈ ಆದೇಶದ 25 ತಿಂಗಳ ಅವಧಿಯಲ್ಲಿ ನಿವೃತ್ತರಾದ ಅಥವಾ ನಿಧನ ಹೊಂದಿದ ಅಧಿಕಾರಿ ನೌಕರರಿಗೆ ಪರಿಷ್ಕೃತ ವೇತನದ ಅನ್ವಯ ಡಿಸಿ ಆರ್ ಜಿ ಕಮ್ಯುನಿಕೇಶನ್ ( ಆಪ್ಷನ್ )(5) ಇಎಲ್ encadhment ಲೆಕ್ಕಾಚಾರ ಮಾಡದೆ, ಹಳೆಯ ವೇತನ ಶ್ರೇಣಿಯ ಮೇಲೇ ಪರಿಗಣಿಸುತ್ತಿರುವದು, ನಿವೃತ್ತಿ ಜೀವನ ಸಂಧ್ಯಾಕಾಲದಲ್ಲಿರುವ ನೌಕರರಿಗೆ ಆಘಾತವಾಗಿರುತ್ತದೆ ಎಂದರು.
ರಾಜ್ಯ ಸರ್ಕಾರ 7ನೇ ವೇತನ ಜಾರಿಯನ್ನು ಸಂತೋಷಕರವಾದರೂ ಈ ತಾರತಮ್ಯವನ್ನು ಕೂಡಲೇ ಸರಿಪಡಿಸಲು ಏಳುನೋ ವೇತನ ಆಯೋಗದ ವರದಿಯಂತೆ ಪರಿಸ್ಕೃತ ವೇತನದ ಮೇಲೆ ಸೌಲಭ್ಯಗಳು ಒದಗಿಸಲು ಮನವಿ ಮಾಡಿದರು. ಆದ್ದರಿಂದ ನಿವೃತ್ತರಾದ ಅವರಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಅರ್ಥ ಮಾಡಿಕೊಂಡು ಮೇಲಿನ ಅವಧಿಯಲ್ಲಿ ನಿವೃತ್ತರಾದ ಉದ್ಯೋಗಗಳಿಗೂ ಪರಿಸ್ಕೃತ ಮೂಲವೇತನದ ಮೇಲೆ ಡಿ ಸಿ ಆರ್, ಕಮ್ಯುಟೇಷನ್, ( ಆಪ್ಷನ್ ) ಮತ್ತು ಇಎಲ್ ಎನ್ ಕ್ಯಾಸ್ಟ್ ಮೆಂಟ್ ಲೆಕ್ಕಾಚಾರ ಮಾಡಿ ನ್ಯಾಯೋಚಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ಕೊಡಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ಸಂಘದ ಅಧ್ಯಕ್ಷ, ಡಾಕ್ಟರ್, ಎಂಟಿ ಮಲ್ಲೇಶ್, ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ ಶಿವಾಜಿ ರಾವ್, ಪ್ರಧಾನ ಕಾರ್ಯದರ್ಶಿ, ಜಿಕೆ ರಾಮಕೃಷ್ಣ, ಕರ್ನಾಟಕ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಂಚಾಲಕರು, ಏಕೆ ಚಂದ್ರಪ್ಪ, ಕೆ ಜಿಲಾನಿ, ಪದಾಧಿಕಾರಿಗಳು ಡಾಕ್ಟರ್ ಹನುಮಂತಪ್ಪ, ಬಾಗಪ್ಪ, ಕೆಂಚ ಎಲ್ಲಪ್ಪ, ಈರಮ್ಮ, ಕುಮಾರಸ್ವಾಮಿ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.