6

ಅನಂತಶಯನ ಬಡಾವಣೆ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ : ಡಿಸಿ

ಕರುನಾಡ ಬೆಳಗು ಸುದ್ದಿ

ವಿಜಯನಗರ, 28- ಹೊಸಪೇಟೆಯ ಅನಂತಶಯನ ಬಡಾವಣೆಯಲ್ಲಿ ನೀರಿನ ಗುಂಡಿಗೆಗೆ ಮಗುವೊಂದು ಬಿದ್ದು ಮೃತಪಟ್ಟ ಘಟನೆಯು ಎಚ್ಚರಿಕೆ ಗಂಟೆಯಾಗಿದೆ. ಕರುಳು ಹಿಂಡುವಂತಹ ಇಂತಹ ಅವಘಡಗಳು ಮರುಕಳಿಸದಂತೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಹೊಸಪೇಟೆ ನಗರಸಭೆಯ ಪೌರಾಯುಕ್ತರು ಮತ್ತು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಬಳಿಕ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ೧೫ ದಿನಗಳೊಳಗೆ ತನಿಖಾ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಇದೆ ವೇಳೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕುಟುಂಬದವರಿಗೆ ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.

ನಗರದ ವಿವಿಧೆಡೆಯ ಖಾಸಗಿಯವರ ಖಾಲಿ ನಿವೇಶನಗಳಲ್ಲಿ ಈ ರೀತಿ ನೀರು ಯಾವ ಯಾವ ಕಡೆಗಳಲ್ಲಿ ನಿಂತಿದೆ ಎಂಬುದರ ಬಗ್ಗೆ ಕೂಡಲೇ ಸಮೀಕ್ಷೆ ನಡೆಸಬೇಕು. ಖಾಲಿ ಸೈಟಗಳಲ್ಲಿ ನೀರು ನಿಂತಿರುವುದು ಕಂಡುಬಂದರೆ ಅಂತಹ ಖಾಸಗಿ ನಿವೇಶನಗಳ ಮಾಲೀಕರಿಗೆ ಕೂಡಲೇ ಎಚ್ಚರಿಕೆಯ ನೊಟೀಸ್ ಜಾರಿ ಮಾಡಿ ನೀರು ಖಾಲಿ ಮಾಡಿಸಲು ಗಡುವು ವಿಧಿಸಬೇಕು. ಆದಾಗ್ಯೂ ಖಾಸಗಿ ನಿವೇಶನ ಮಾಲೀಕರು ನೀರನ್ನು ಖಾಲಿ ಮಾಡದಿದ್ದಲ್ಲಿ ನಗರಸಭೆಯಿಂದಲೇ, ಖಾಲಿ ಸೈಟನಲ್ಲಿ ನಿಂತಿರುವ ನೀರನ್ನು ಖಾಲಿ ಮಾಡಿಸಬೇಕು. ಇದಕ್ಕೆ ತಗುಲುವ ಖರ್ಚು ವೆಚ್ಚವನ್ನು ಕಂದಾಯ ವಸೂಲಾತಿ ರೀತಿಯಲ್ಲಿ ಸಂಬಂಧಿಸಿದವರಿಂದಲೇ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಅಂಗನವಾಡಿ, ಶಾಲೆಗೆ ಭೇಟಿ : ಇದೆ ವೇಳೆ ಜಿಲ್ಲಾಧಿಕಾರಿಗಳು, ಅನಂತಶಯನ ಬಡಾವಣೆಯಲ್ಲಿನ ಅಂಗನವಾಡಿಗೆ ಭೇಟಿ ನೀಡಿದರು. ಅಂಗನವಾಡಿಯಲ್ಲಿ ಸಿದ್ಧಪಡಿಸಿದ್ದ ಆಹಾರವನ್ನು ಸೇವಿಸಿ ಗುಣಮಟ್ಟ ಪರೀಕ್ಷಿಸಿದರು. ಬಳಿಕ ಜಿಲ್ಲಾಧಿಕಾರಿಗಳು, ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು. ಶಾಲೆಯಲ್ಲಿ ಶೌಚಾಲಯಗಳ ನಿರ್ವಹಣೆ ಸರಿ ಇಲ್ಲ ಎಂದು ಸಾರ್ವಜನಿಕರು ದೂರಿದರು. ಶಾಲೆಯಲ್ಲಿ ಕೂಡಲೇ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಮುಖ್ಯ ಗುರುಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

Leave a Reply

Your email address will not be published. Required fields are marked *

error: Content is protected !!