
ಸೇವಾಭಾರತಿಯ ವಿದ್ಯಾ ವಿಕಾಸ ಪ್ರಕಲ್ಪದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಗಡಿಯಾರ ಕಂಬ ವೃತ್ತದಿಂದ ಕೋಟೆಯ ಶ್ರೀಶಂಕರಾಚಾರ್ಯ ಕಲ್ಯಾಣ ಮಂಟಪದ ವರೆಗೆ ನಡೆದ ಶೋಭಾಯಾತ್ರೆಯಲ್ಲಿ ನೂರಾರು ಶ್ರೀಕೃಷ್ಣ ರಾಧೆಯರ ವೇಶಧಾರಿ ಮಕ್ಕಳು, ಮಾತೆಯರು, ಶಿಕ್ಷಕಿಯರು, ಪ್ರಕಲ್ಪದ ಕಾರ್ಯರ್ತರು,ಮಕ್ಕಳು ಭಾಗವಹಿಸಿದ್ದರು. ಕೋಟೆಯ ನಾಗರಿಕರು, ಮಾತೆಯರು ಮಕ್ಕಳಿಗೆ ಆರತಿ ಮಾಡಿ ಸ್ವಾಗತಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ನಡೆಸಲಾಯಿತು.
ನಿರ್ಣಾಯಕರಾಗಿ ಪ್ರವೀಣ ಕುಲಕರ್ಣಿ ಹಾಗೂ ಪ್ರಶಾಂತ ಶಾಸ್ತ್ರಿ ಕಾರ್ಯ ನಿರ್ವಹಿಸಿದರು.
ನಂತರ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವೇಶ್ವರ ಮನೆಪಾಠ ಕೇಂದ್ರದ ಮಕ್ಕಳಿಂದ ಉತ್ಕೃಷ್ಟ ನೃತ್ಯ ಪ್ರದರ್ಶನ ನಡೆಯಿತು.
ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಪ್ರಕಲ್ಪದ ಕಾರ್ಯದರ್ಶಿಗಳಾದ ಮಹಾದೇವಪ್ಪ ಕೌಲಗಿ, ಸದಸ್ಯರಾದ ಶ್ರೀನಿವಾಸ ದೇಸಾಯಿ, ಮಹಾಲಕ್ಷ್ಮಿ ಕಂದಾರಿ, ಕಾರ್ಯಕರ್ತರಾದ ಹನುಮೇಶ ಹೂಲಗೇರಿ, ಶೀತಲ ಜಾಧವ, ಜಯಶ್ರೀ ಪಲ್ಲೇದ, ಹುಲಿಗೆಮ್ಮ ಉಂಕಿ ಉಪಸ್ಥಿತರಿದ್ದರು.