2c136fae-be38-4577-97e1-318669006cc9

ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ವಿಜಯನಗರ, 1-2024-25ನೇ ಸಾಲಿಗೆ ಸಂಬಂಧಿಸಿದಂತೆ ಎಸ್‌ಎಸ್‌ಪಿ ರಾಜ್ಯ ವಿದ್ಯಾರ್ಥಿವೇತನ ಯೋಜನೆಯಡಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಮತ್ತು ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದ್ದು, ಅಕ್ಟೋಬರ್ ೩೧ ಕೊನೆಯ ದಿನಾಂಕ ಆಗಿರುತ್ತದೆ.

ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ನಂತರ ಮತ್ತು ಮೆರಿಟ್ ಕಮ್ ಮಿನ್ಸ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗೆ hಣಣಠಿs://ssಠಿ.ಠಿosಣmಚಿಣಡಿiಛಿ.ಞಚಿಡಿಟಿಚಿಣಚಿಞಚಿ.gov.iಟಿ/ (ಎಸ್‌ಎಸ್‌ಪಿ) ಪೋರ್ಟಲ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ,). ಮೆಟ್ರಿಕ್ ನಂತರದ ಕೋರ್ಸ್ಗಳ ಶುಲ್ಕ ಮರುಪಾವತಿ ಯೋಜನೆಗಾಗಿ ಕುಟುಂಬದ ವಾರ್ಷಿಕ ಆದಾಯವು ೨ ಲಕ್ಷ ರೂಗಳನ್ನು ಮೀರಿರಬಾರದು ಮತ್ತು ಮೆರಿಟ್ ಕಮ್ ಮೀನ್ಸ್ ಶುಲ್ಕ ಮರುಪಾವತಿ ಯೋಜನೆಯಡಿಗಾಗಿ ಕುಟುಂಬದ ವಾರ್ಷಿಕ ಆದಾಯ ೨.೫ ಲಕ್ಷ ರೂ ಮೀರಿರಬಾರದು. ಶುಲ್ಕ ಮರುಪಾವತಿ ಯೋಜನೆ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆಕ್ಟಿವ್ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ hಣಣಠಿ://ಜom.ಞಚಿಡಿಟಿಚಿಣಚಿಞಚಿ.gov.iಟಿ ವೆಬ್ ಸೈಟ್‌ಅನ್ನು ವೀಕ್ಷಿಸಿ ಅಥವಾ ಜಿಲ್ಲಾ ಕಚೇರಿ ಮತ್ತು ಜಿಲ್ಲಾ ಹಾಗೂ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ದೂರವಾಣಿ ಸಂಖ್ಯೆ: ಹೆಲ್ಪ್ಡೆಸ್ಕ್-೮೨೭೭೭೯೯೯೯೦ (೨೪/೭), ೮೦೫೦೪೩೫೩೬೬, ೯೯೮೦೨೩೭೨೪೨, ೭೩೫೩೬೯೬೯೮೪, ೮೪೯೪೯೨೭೮೧. ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!