ದೇವದಾಸಿ ಮಹಿಳೆಯರ ಬೇಡಿಕೆಗಳು ಈಡೇರಿಸಲು ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 4- ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘ ನೇತೃತ್ವದಲ್ಲಿ ಮನವಿ ಮಾಡಿದರು ಸರ್ಕಾರದಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷರು ಈರಮ್ಮ, ಹೇಳಿದರು.
ಇಂದು ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಂತರ ಅವರು ಮಾತನಾಡುತ್ತಾ, ಸಮಾಜದಲ್ಲಿ ಹಲವಾರು ವರ್ಷಗಳಿಂದ ದೇವದಾಸಿ ಮಹಿಳೆಯರ ಪದ್ಧತಿ ಇದೆ ಎಂದು ಇದಕ್ಕೆ ಪ್ರಧಾನವಾಗಿ ದಲಿತ ಆಗೋ ಇತರ ಹಿಂದುಳಿದ ಜನದ ಸಮುದಾಯಗಳ ಕುಟುಂಬಗಳೆ ಬಲಿಯಾಗುತ್ತಿರುವುದು ಸೂಚನೆಯ ಎಂದರು.
ರಾಜ್ಯದಲ್ಲಿ ಅಧಿಕಾರವನ್ನು ಹಿಡಿದ ಯಾವುದೇ ಪಕ್ಷವು ನಮ್ಮ ಸಮಸ್ಯೆಗಳು ಪರಿಷ್ಕರಿಸಲು ಮುಂದಾಗಲಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಅಧಿಕಾರವನ್ನು ಹಿಡಿದು ಕಾಂಗ್ರೆಸ್ ಪಕ್ಷ ತಮ್ಮ ಅವಧಿಯಲ್ಲಿ ಈಗಾಗಲೇ ಒಂದು ವರ್ಷಕ್ಕೆ ಸಮೀಪ ಕಳೆದಿರುವುದರಿಂದ ಇನ್ನು ಮುಂದಾದರು ದೇವದಾಸಿ ಮಹಿಳೆಯರಿಗೆ ಸೌಲಭ್ಯಗಳು ಕಲ್ಪಿಸಲು ಮುಂದಾಗಬೇಕೆAದು ಈ ಸಂದರ್ಭದಲ್ಲಿ ಅವರು ಸರ್ಕಾರವನ್ನು ಒತ್ತಾಯ ಮಾಡಿದರು ದೇವದಾಸಿ ಮಹಿಳೆಯರಿಗೆ ಬೇಕಾದ ಉದ್ಯೋಗ ಮತ್ತು ನಿವೇಶನ ಸರ್ಕಾರದಿಂದ ಸ್ವಂತ ಮನೆ ವ್ಯವಸಾಯ ಭೂಮಿ ಈ ರೀತಿಯಾಗಿ ನೀಡಿ ಅವರನ್ನು ಕಾಪಾಡಬೇಕೆಂದು ಕೇಳಿದರು.
ಅದೇ ರೀತಿಯಾಗಿ ಮಾಜಿದೇವದಾಸಿ ಮಹಿಳೆಯರು ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಹಾಕಿದ್ದು ಇಲ್ಲಿಯವರೆಗೂ ಬೋರ್ವೆಲ್ ಹಾಕಿಲ್ಲ ಕೂಡಲೇ ಬೋರ್ವೆಲ್ ಹಾಕಬೇಕೆಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಸಂಡೂರು ತಾಲೂಕ ಕಾರ್ಯದರ್ಶಿ ಅಂಜಿನಮ್ಮ, ಕುರುಗೋಡು ತಾಲೂಕ ಮತ್ತು ಬಳ್ಳಾರಿ ತಾಲೂಕ ಅಧ್ಯಕ್ಷರು ವೆಂಕಮ್ಮ ವೀರೇಶ್ ಕುರುಕುಡು, ತಾಲೂಕ ಕಾರ್ಯದರ್ಶಿ ಹುಲಿಗಮ್ಮ ಜೊತೆಗೆ ಹಲವಾರು ಮಂದಿ ದೇವದಾಸಿ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.