ರೋಗಿಗಳಿಗೆ ಧೈರ್ಯ ಸ್ಥೈರ್ಯ ತುಂಬೋದರ ಮೂಲಕ ಬೆಂಬಲ ಸೂಚಿಸಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 4- ಸಮುದಾಯ ಆರೋಗ್ಯ ಕೇಂದ್ರ ತೆಕ್ಕಲಕೋಟೆಯಲ್ಲಿ ಕ್ಷಯ ರೋಗಿಗಳ ಬೆಂಬಲ ಗುಂಪು ಸಭೆ ಹಮ್ಮಿಕೊಳ್ಳಲಾಗಿತ್ತು.
ವೈದ್ಯಾಧಿಕಾರಿ ಹರಿ ಮಾತನಾಡಿ, ರೋಗಿಗಳಿಗೆ ಧೈರ್ಯ ಸ್ಥೈರ್ಯ ತುಂಬೋದರ ಮೂಲಕ ಮಾತ್ರೆಗಳನ್ನು ತಪ್ಪದೆ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಎಸ್‌ಟಿಎಸ್ ಹುಲುಗಪ್ಪ ಮಾತನಾಡಿ ಟಿಬಿ ರೋಗಿಗಳಿಗೆ ಮಾತ್ರೆಗಳ ಜೊತೆಗೆ ನಿಕ್ಷಯ್ ಪೌಷ್ಠಿಕ ಎಂದು ಸರಕಾರದ ವತಿಯಿಂದ ಪ್ರತಿ ತಿಂಗಳು ೫೦೦ ರೂಪಾಯಿಗಳು ನೀಡಲಾಗುತ್ತಿದೆ. ಹಾಗೆಯೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ೨೭ ಜನ ಕ್ಷಯ ರೋಗಿಗಳಿಗೆ, ಜೆಎಸ್‌ಡಬ್ಲ್ಯೂ ಜಿಂದಾಲ್ ವತಿಯಿಂದ ಸರಬರಾಜು ಆದ ಪೌಷ್ಟಿಕ ಆಹಾರದ ಕಿಟ್ ಗಳನ್ನು ಎಲ್ಲಾ ಕ್ಷಯ ರೋಗಿಗಳಿಗೆ ವಿತರಿಸಲಾಗುವುದು. ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಟಿಬಿ ರೋಗದ ಲಕ್ಷಣ, ವೈಯಕ್ತಿಕ ಸ್ವಚ್ಛತೆ ಪೌಷ್ಠಿಕ ಆಹಾರ ಸೇವನೆ ಮತ್ತು ತಪ್ಪದೆ ಮಾತ್ರೆಗಳನ್ನು ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ ಆಗ ೨೦೨೫ರ ಒಳಗೆ ಟಿಬಿ ಮುಕ್ತ ಭಾರತ ಮಾಡಲು ಅನುಮಾನವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಔಷದ ತಜ್ಞರಾದ ಸಂಧ್ಯಾ ಪ್ರಯೋಗಶಾಲಾ ತಂತ್ರಜ್ಞರಾದ ಪಾಟೀಲ್ ಇಂಡಿಯನ್ ರೆಡ್ ಕ್ರಾಸ್ ಸಾಕ್ಷರತಾ ಎ ಅಬ್ದುಲ್ ನಬಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.