eb1aa8a6-24c9-453c-8669-dce9a68ad4ba

ನಾಟಕ,ಜಾನಪದ ಗೀತೆಗಳು 

                                     ಮೂಕಾಭಿನಯ ಮತ್ತು ಕೋಲಾಟ ಪ್ರದರ್ಶನಗಳು -2023

ಕರುನಾಡ ಬೆಳಗು ಸುದ್ದಿ
ಬಳ್ಳಾರಿ:-ನವೆಂಬರ್ 18 ರಂದು ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ) ಮಾವಿನಹಳ್ಳಿ ಸಹಕಾರ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಬಳ್ಳಾರಿಯಿಂದ “ನಾಟಕ,ಜಾನಪದ ಗೀತೆಗಳು, ಮೂಕಾಭಿನಯ ಮತ್ತು ಕೋಲಾಟ ಪ್ರದರ್ಶನಗಳು” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರತಿಯೊಬ್ಬರೂ ತಯಾರಿಯಲ್ಲಿ ಇರಬೇಕು. ನಮ್ಮ ಮನೆ ಕಟ್ಟಬೇಕಾದರೆ ನಾಲ್ಕು ಸ್ತಂಭಗಳು ಮನೆಗೆ ಹೇಗೆ ಆಧಾರವಾಗಿರುತ್ತೇವೆ ಆಗೆ ನಮ್ಮ ಜೀವನದಲ್ಲಿ ಮಾನವರಿಗೆ ದೇಹದ ಆರೋಗ್ಯಕ್ಕೆ ಬೇಕಾದ ನಾಲ್ಕು ಆಹಾರ, ಉಸಿರು,ನಿದ್ದೆ, ಮತ್ತು ಪ್ರಶಾಂತವಾದ ಮನಸ್ಸು ಹಾಗೂ ಒಳ್ಳೆಯ ಆಲೋಚನೆಗಳು ನಮ್ಮಲ್ಲಿ ಅಳವಡಿಸಿಕೊಂಡಾಗ ನಮಗೆ ದೇಹಕ್ಕೆ ಯಾವ ತೊಂದರೆಗಳು ಕಾಡುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಯೋಗಾಸನದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು‌.ಇನ್ನೊಬ್ಬರ ಬಗ್ಗೆ ಮಾತಾಡದೆ ನಮ್ಮ ಬಗ್ಗೆ ನಾವು ಕಾಳಜಿವಹಿಸಿಕೊಂಡು ನಡೆಯಬೇಕು. ಸಾಂಸ್ಕೃತಿಕದಲ್ಲಿ ನಮ್ಮ ಜೀವನಕ್ಕೆ ಒಳ್ಳೆಯ ಮಾರ್ಗದರ್ಶನ ಪ್ರಕ್ರಿಯೆಯಾಗಿದೆ. ಪ್ರತಿಯೊಬ್ಬರೂ ಕಲೆ,ಸಾಹಿತ್ಯದಲ್ಲಿ ಒಳಗೊಳ್ಳಬೇಕೆಂದು ಜಂಬೆ ನುಡಿಸುವುದರ ಮುಖಾಂತರ ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ಶ್ರೀ ಡಿ ಮಹೇಶಬಾಬು ಯೋಖ ಉಪನ್ಯಾಸಕರು, ವಿ.ಶ್ರೀ.ಕೃ.ವಿ.ವಿ ಬಳ್ಳಾರಿ ಉದ್ಘಾಟನಾ ನುಡಿಯನ್ನು ನುಡಿದರು.

ಜಾನಪದ ಗೀತೆಗಳು ಮತ್ತು ಮೂಕಾಭಿನಯ ಎನ್ನುವುದು ಸಮಾಜದಲ್ಲಿ ಒಳ್ಳೆಯ ಮಾಹಿತಿಯನ್ನು ಒಳಗೊಂಡಂತಹ ಕಲೆಡಳಾಗಿವೆ.ಜನಪದರು ಸಾಂಪ್ರದಾಯಿಕವಾಗಿ ಜನಪದ ಗೀತೆಗಳನ್ನು ಕಟ್ಟಿ ಹಾಡುತ್ತಾ ಭಾವಗಳನ್ನು ವ್ಯಕ್ತಪಡಿಸುತ್ತಿದ್ದಾರು.ಮೂಕಾಭಿನಯ ಅಥವಾ ಮೈಮ್ ಇದು ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ನಮ್ಮ ಆಂಗೀಕಾಭಿನಯಗಳನ್ನು ವ್ಯಕ್ತಪಡಿಸುತ್ತಾ ಸಮಾಜಕ್ಕೆ ವಾಚಿಕಾಭಿನಯವಿಲ್ಲದೆ ನೋಡುಗರಿಗೆ ಸಂದೇಶವನ್ನು ನೀಡುವಂತಹ ಕಲೆಯಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಾಧ್ಯಾಪಕರಾದ ಶ್ರೀ ಅಲಂಬಾಷರವರು ಹೇಳಿದರು.

 

ಪುಟ್ಟ ಕುಗ್ಗ್ರಾಮದಲ್ಲಿ ಜನಿಸಿ ತಮ್ಮ ವಯಸ್ಸಿನ ಮಟ್ಟವನ್ನು ಮೀರಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಬಿ.ಎ ಮತ್ತು ಎಂ.ಎಯನ್ನು ಹುಟ್ಟುಹಾಕಿದ ಉತ್ತರ ಕರ್ನಾಟಕದ ಮೊಟ್ಟ ಮೊದಲುಬಾರಿಗೆ ದಮ್ಮೂರು ಕಗ್ಗಲ್ ಗ್ರಾಮದ ಶ್ರೀ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಹಾಗೂ ನಮ್ಮ ಊರಿನ ಪಕ್ಕದಲ್ಲಿ ಇರುವ ಕುಗ್ಗ್ರಾಮದಲ್ಲಿ ಜನಿಸಿದ ರಂಗಭೂಮಿಯಲ್ಲಿ ಶೈಕ್ಷಣಿಕ ಪಡೆದುಕೊಂಡು ವಿಶ್ವವಿದ್ಯಾಲಯದ ಮಟ್ಟಕ್ಕೆ ನಾಟಕ ವಿಭಾಗದ ಉಪನ್ಯಾಸಕರಾದ ಮಾವಿನಹಳ್ಳಿ ಗ್ರಾಮದ ಶ್ರೀ ಕೆ ಹೇಮೇಶ್ವರ ಇವರಿಬ್ಬರ ಸಾಧನೆಗಳನ್ನು ಮೆಚ್ಚುವಂತದ್ದು ಎಂದು ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಡಾ. ಅಶ್ವರಾಮು ಹೇಳಿದರು.

ಇಂದು ಸಾಂಸ್ಕೃತಿಕ ಕಲೆಗಳಾದ ನಾಟಕ,ಮೂಕಾಭಿನಯ, ಜಾನಪದ ಗೀತೆಗಳು ಮತ್ತು ಕೋಲಾಟ ತರಬೇತಿ ನೀಡಿ ಪ್ರಾಶಿಕ್ಷಣಾರ್ಥಿಗಳಿಗೆ ಸಾಂಸ್ಕೃತಿಕ ಅಭಿರುಚಿಗೆ ಕಾರಣಿಕರ್ತರಾದವರು ನಿರ್ದೇಶಕರು. ಪ್ರಾಶಿಕ್ಷಣಾರ್ಥಿಗಳಿಗೆ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಕಲಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಕಾಲೇಜಿನಲ್ಲಿ ನಡೆಯಲು ಬೆಳಕಾಗಿ ಬಂದಂತಹ ರಂಗಭೂಮಿಯ ನಿರ್ದೇಶಕರು ಕಲೆಗಳನ್ನು ಮಕ್ಕಳಿಗೆ ನೀಡುತ್ತಾ ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ತಂಡದ ಕಾರ್ಯಕ್ರಮಗಳನ್ನು ಮಾಡಲು ತಮ್ಮ ಸಮಯವನ್ನು ಕೊಟ್ಟು ಮಕ್ಕಳಿಗೆ ತರಬೇತಿ ನೀಡಿ ಉನ್ನತ ಮಟ್ಟದಲ್ಲಿ ಕಾರ್ಯಕ್ರಮ ಆಗುವುದಕ್ಕೆ ಸಹಕರಿಸಿದರೆ ನಮ್ಮ ವಿದ್ಯಾರ್ಥಿಯಾದ ಹೇಮೇಶ್ವರ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಾಧ್ಯಾಪಕರಾದ ಆರ್. ಚಂದ್ರಶೇಖರ ಹೇಳಿದರು.

ಇಲ್ಲಿ ನೇರೆದಿರುವ ಎಲ್ಲಾ ಪ್ರಾಶಿಕ್ಷಣಾರ್ಥಿಗಳಿಗೆ ತಿಳಿಪಡಿಸುವುದೆನೆಂದರೆ ಪಠ್ಯಶಿಕ್ಷಣ ಎಲ್ಲರೂ ಒಳಗೊಳ್ಳಬಹುದು.ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಾಗಿ ಎಲ್ಲರೂ ಪಡೆದುಕೊಳ್ಳಬೇಕು.ಮಕ್ಕಳಿಗೆ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಲೆಗಳನ್ನು ತಿಳಿಸುತ್ತಾ ಹೋಗಬೇಕು. ರಂಗಭೂಮಿ ಸಮಾಜದ ಆಗು ಹೋಗುಗಳನ್ನು ತಿದ್ದುವಂತಹ ಕೆಲಸ ಮಾಡುತ್ತದೆ. ಅದಕ್ಕಾಗಿ ಎಲ್ಲಾ ಪ್ರಾಶಿಕ್ಷಣಾರ್ಥಿಗಳು ಸಮಾಜವನ್ನು ತಿದ್ದುವಂತಹ ಕೆಲಸಕ್ಕೆ ಮುಂದಾಗಬೇಕು. ಸಮಾಜದಲ್ಲಿ ನಡೆಯುವಂತಹ ಭ್ರಷ್ಟಾಚಾರ, ಬಾಲಕಾರ್ಮಿಕತೆ,ಆರೋಗ್ಯ ಸಮಸ್ಯೆ ಇನ್ನೂ ಹಲವಾರು ಸಮಾಜದಲ್ಲಿ ಸಮಸ್ಯೆಗಳನ್ನು ತಿದ್ದವಂತಹ ಕೆಲಸಕ್ಕೆ ಕೈಗೊಳ್ಳಬೇಕು. ಅದನ್ನು ಈ ರಂಗಭೂಮಿ ಸಮಾಜಕ್ಕೆ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವಂತಹ ಮಾಧ್ಯಮವಾಗಿದೆ ಎಂದು ವಿ.ಶ್ರೀ. ಕೃ.ವಿ.ವಿ ನಾಟಕ ವಿಭಾಗದ ಉಪನ್ಯಾಸಕರಾದ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಪ್ರಸ್ತಾಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:- ಚಂದ್ರಶೇಖರ ಬಸಾಪುರ ಮತ್ತು ತಂಡದವರಿಂದ ಸಾಮಾಜಿಕ ನಾಟಕ “ಅಪ್ಪ ಅಮ್ಮ” , “ಜಾನಪದ ಗೀತೆಗಳು” ಬಿ ದೊಡ್ಡ ಬಸಪ್ಪ ಮತ್ತು ತಂಡದವರಿಂದ, “ಮೂಕಾಭಿನಯ” ಕೆ ನಾಗರಾಜ್ ಮತ್ತು ತಂಡದವರಿಂದ ಹಾಗೂ “ಕೋಲಾಟ” ಜಯಪ್ರಕಾಶ್ ಮತ್ತು ತಂಡದವರಿಂದ.ಪಾತ್ರಧಾರಿಗಳಾಗಿ ಶಿಲ್ಪ, ಜ್ಯೋತಿ, ಸರಸ್ವತಿ, ಜಲಗಂಗಾ,ಗಾಧಿಲಿಂಗಪ, ಬಸವರಾಜ, ಕುಪೇಂದ್ರ, ಮೀನಾಕ್ಷಿ,ದ್ರಾಕ್ಷಯಾಣಿ,ಅಕ್ಷತ, ಶೃತಿ, ದೀಪಾ, ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ:- ಶ್ರೀ ಜಗದೀಶ್ ಕುಮಾರ್ , ಕಾರ್ಯದರ್ಶಿಗಳು ಶ್ರೀ ಸತ್ಯಂ ಸಮೂಹ ಸಂಸ್ಥೆಗಳು, ಶ್ರೀ ಜಯದೇವಯ್ಯ ಪ್ರಾಧ್ಯಾಪಕರು,ಶ್ರೀ ನಾಗೇಶ ಬಾಬು ಪ್ರಾಧ್ಯಾಪಕರು,ಶ್ರೀ ಆರ್. ಚಂದ್ರಶೇಖರ ಪ್ರಾಧ್ಯಾಪಕರು ಶ್ರೀ ಮತಿ ರೆಡ್ಡಿಹಳ್ಳಿ ಗಿರೀಜಾ ಪ್ರಾಧ್ಯಾಪಕರು,ಶ್ರೀಮತಿ ಅಶ್ವಿನಿ ಪ್ರಾಧ್ಯಾಪಕರು,ಶ್ರೀ ಅನುಷಾ ಪ್ರಾಧ್ಯಾಪಕರು,ಶ್ರೀ ನೀಲಕಂಠಪ್ಪ ಗ್ರಂಥಾಲಯ,ಶ್ರೀ ಚಂದ್ರಶೇಖರ ನಾಯ್ಡು ಹಣಕಾಸು ವಿಭಾಗ,ಶ್ರೀ ವಿಷ್ಣು ಹಡಪದ ನಾಟಕ ಉಪನ್ಯಾಸಕರು ಶ್ರೀ.ಸ.ಸ.ಕಾಲೇಜು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಬಳ್ಳಾರಿ, ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಕಾರ್ಯದರ್ಶಿಯಾದ ಕುರುಬರ ಹೇಮೇಶ್ವರ ಮಾವಿನಹಳ್ಳಿ,ಚಿಂದಾನಂದ, ಕೆ ಜಯಪ್ರಕಾಶ್ ಪ್ರಾರ್ಥನೆ ರಾಜೇಶ್ವರಿ ಪ್ರಾಶಿಕ್ಷಣಾರ್ಥಿ,ನಿರೂಪಣೆ ಕುರುಬರ ಹೇಮೇಶ್ವರ, ಸುಮಂತ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!