
ನಿವೇಶನ ರಹಿತರಿಗೆ ಕೂಡಲೇ ನಿವೇಶನ ಹಂಚಲು ಎಸ್ಯುಸಿಐ ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 18- ತಾಲೂಕ ವ್ಯಾಪ್ತಿಯಲ್ಲಿ ಬರುವ ಶ್ರೀಧರ ಗಡ್ಡ ಗ್ರಾಮದಲ್ಲಿ ನಿವೇಶನ ರೈತರಿಗೆ ಕೂಡಲೇ ಸರ್ಕಾರ ನಿವೇಶನಗಳನ್ನು ಹಂಚಲು ಅಗ್ರಹಿಸಿ ಇಂದು ಎಸ್ಯುಸಿಐ ಕಮ್ಯುನಿಸ್ಟ್ ವತಿಯಿಂದ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಕಾರ್ಯನಿರ್ವಾಹಕ ಅಧಿಕಾರಿಗಳು ಮಡಗಿನ ಬಸಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಯುಸಿಐ ಕಮ್ಯುನಿಸ್ಟ್ ಬಳ್ಳಾರಿ ಗ್ರಾಮೀಣ ವಿಭಾಗದ ಕಾರ್ಯದರ್ಶಿಗಳು ಎ.ದೇವದಾಸ್ ಮಾತನಾಡಿ, ಸರ್ಕಾರ ಈಗಾಗಲೇ ಆಶ್ರಯ ಯೋಜನೆ ಅಡಿ ನಿಗದಿಪಡಿಸಿದ ಜಮೀನಿನ ವಿಸ್ತೀರ್ಣ ೧೦.೩೬ ಎಕರೆ, ಈಗಾಗಲೇ ಶ್ರೀಧರ್ ಗಡ್ಡ ಗ್ರಾಮದ ನಿವೇಶನ ರೈತರಿಗೆ ನಿವೇಶನಗಳನ್ನು ಹಂಚಲು ಸರ್ಕಾರವು ೨೦೦೭ ನಿಗದಿಪಡಿಸಿದೆ ಆದರೆ ಇಷ್ಟು ವರ್ಷಗಳು ಕಳೆದರೂ ಫಲಾನುಭವಿಗಳಿಗೆ ನಿವೇಶನಗಳು ಸಿಗಲಿಲ್ಲ ಆದ್ದರಿಂದ ಕೂಡಲೇ ಪಟ್ಟಿಯ ಅನುಗುಣವಾಗಿ ನಿವೇಶನಗಳು ಹಂಚಲು ಅಗ್ರಹಿಸಿದರು.
ಮನವಿ ಪತ್ರ ಸ್ವೀಕರಿಸಿದ ಈಓ ಮಡಿಗಿನ್ ಬಸಪ್ಪ ಮಾತನಾಡುತ್ತಾ, ಶೀಘ್ರದಲ್ಲಿ ಫಲಾನುಭವಿಗಳಿಗೆ ನಿವೇಶನ ಗಳು ಹಂಚಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕರು, ಬಚಲಪ್ಪ, ಎಸ್ಯುಸಿಐ ಕಮ್ಯುನಿಸ್ಟ್ ಬಳ್ಳಾರಿ ಗ್ರಾಮೀಣ ಸ್ಥಳೀಯ ಸಂಸ್ಥೆ ಸದಸ್ಯರು, ಈ ಹನುಮಂತಪ್ಪ, ಈರಣ್ಣ ಮತ್ತು ಗ್ರಾಮಸ್ಥರಾದ ಬಾಬು ಮೇದಾರ್, ಬಸಮ್ಮ, ನಾಗಮ್ಮ, ಯಶೋದ, ಗಂಗಮ್ಮ ಮತ್ತು ಇತರರು ಭಾಗವಹಿಸಿದ್ದರು.