IMG-20240918-WA0015

  ಸೆ , 19 ರಂದು ಭಾಗ್ಯನಗರದಲ್ಲಿ

ಕೌದಿ ನಾಟಕ ಪ್ರದರ್ಶನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ18-  ಭಾಗ್ಯನಗರದ ಖೋಡೆ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 19ರಂದು ಸಂಜೆ 6.30ಕ್ಕೆ ಕೌದಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಭಾಗ್ಯನಗರದ ಶಕ್ತಿ ಶಾರದೆ ಮೇಳವು ಈ ನಾಟಕವನ್ನು ಆಯೋಜಿಸಿದೆ.ಗಣೇಶ ಅಮೀನಗಡ ಅವರ ಕೌದಿ ನಾಟಕವನ್ನು ಮೈಸೂರಿನ ಕವಿತಾ ಕಲಾ ತಂಡ ಪ್ರಸ್ತುತಪಡಿಸಲಿದೆ.
ಏಕವ್ಯಕ್ತಿ ನಾಟಕವಾದ ಇದರಲ್ಲಿ ಕಲಬುರಗಿಯ ಭಾಗ್ಯಶ್ರೀ ಪಾಳಾ ಅಭಿನಯಿಸುವರು. ಈ ನಾಟಕಕ್ಕೆ ಸಂಗೀತ ನೀಡಿ, ವಿನ್ಯಾಸಗೊಳಿಸಿ ನಿರ್ದೇಶಿಸಿದವರು ಜಗದೀಶ್ ಆರ್. ಜಾಣಿ. ಸಂಗೀತ, ಬೆಳಕನ್ನು ಪದ್ಮಾ ರಾಯಚೂರು ನಿರ್ವಹಿಸುವರು.
ಒಂದು ಗಂಟೆಯ ಈ ನಾಟಕಕ್ಕೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!