
ತಿಂಗಳ ಸೊಬಗು : ಕಲಾಸಕ್ತರ ಮನಸೂರೆಗೊಂಡ ಸಾಂಸ್ಕೃತಿಕ ಸೊಗಡು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 23- ಜಾನಪದ ಗೀತೆ-ನೃತ್ಯ, ಸಂಗೀತ, ನಾಟ್ಯ ಪ್ರಕರಗಳಾದ ಕೂಚುಪಡಿ, ಭರತನಾಟ್ಯಕ್ಕೆ ಮನ ಸೋಲದವರಿಲ್ಲ. ಸಾಂಸ್ಕೃತಿಕ ಸೊಗಡಿನಿಂದ ಕೂಡಿದ್ದ ತಿಂಗಳ ಸೊಬಗು ಸಾಂಸ್ಕೃತಿಕ ಕಾರ್ಯಕ್ರಮ ಕಲಾಸಕ್ತರ ಮನಸೂರೆಗೊಳಿಸಿ, ಭರಪೂರ ಮನರಂಜನೆಗೆ ಸಾಕ್ಷಿಯಾಯಿತು.
ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಹಾಗೂ ಸಾಂಸ್ಕೃತಿಕ ನಿರ್ವಹಣಾ ಸಮಿತಿ ವತಿಯಿಂದ ಸ್ಥಳೀಯ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ತಿಂಗಳ ಸೊಬಗು” ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿನ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮAದಿರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಸರ್ಕಾರಿ ಬಾಲಕಿಯರ ಬಾಲಮಂದಿರದ ಜಾನಪದ ನೃತ್ಯವು ಜಾನಪದ ಪ್ರೇಮಿಗಳ ಮನದಲ್ಲಿ ಮನಸೂರೆಗೊಂಡಿತು.
ಇಬ್ರಾಹಿ0ಪುರದ ಎಸ್.ಹೆಚ್.ಹುಲುಗಪ್ಪ ಮತ್ತು ಸಂಗಡಿಗರಿ0ದ ಪ್ರಸ್ತುತ ಪಡಿಸಿದ ಜಾನಪದ ಗೀತೆಗಳು ಜನಪದ ಸೊಗಡನ್ನು ಮರುಕಳಿಸುವಂತೆ ಮಾಡಿ, ಚಪ್ಪಾಳೆ ಗಿಟ್ಟಿಸಿಕೊಂಡರು.
ಬಳ್ಳಾರಿಯ ಲಕ್ಷಿ ಕಲಾ ಟ್ರಸ್ಟ್ನ ನೃತ್ಯಗಾರರ ಕೂಚುಪಡಿ ಮತ್ತು ಭರತನಾಟ್ಯ ನೃತ್ಯಗಳು ನೆರೆದಿದ್ದವರ ಕಣ್ಮನ ಸೆಳೆದು, ಸಾಂಸ್ಕೃತಿಕ ಮೆರಗು ನೀಡಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಕಲಾಭಿಮಾನಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮತ್ತಿರರು ಉಪಸ್ಥಿತರಿದ್ದರು.