
ಸ್ವಚ್ಛತಾ ಹೀ ಸೇವಾ-2024, ಸ್ವಚ್ಛ ಹಂಪಿ ಗ್ರೀನ್ ಹಂಪಿ
ಕರುನಾಡ ಬೆಳಗು ಸುದ್ದಿ
ಹ0ಪಿ, ೨೫- ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ, ಹಾಗೂ ಮುಜರಾಯಿ ಇಲಾಖೆ, ವಿಜಯನಗರ ಜಿಲ್ಲೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಹಾಗೂ ಹೋಟೆಲ್ ಮಯೂರ ಭುವನೇಶ್ವರಿ (ಕೆ. ಎಸ್.ಟಿ.ಡಿ. ಸಿ) ಕಮಲಾಪುರ ಹೋಟೆಲ್ ಅಸೋಸಿಯೇಷನ್ ಹೊಸಪೇಟೆ, ಜಿಲ್ಲಾ ಪ್ರವಾಸಿ ಮಾರ್ಗದರ್ಶಿಗಳು ಹಂಪಿ ಇವರ ಸಂಯೋಗದಲ್ಲಿ ಇದೇ ಸೆ. ೨೭.ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ನಿಮಿತ್ತ ದಿನಾಂಕ: ೨೫ರಿಂದಲೇ ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ ಮೊದಲ ದಿನ ವಿಶ್ವ ಪ್ರಸಿದ್ಧ ಐತಿಹಾಸಿಕ ಹಂಪಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೪ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ವತಿಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸಾರ್ವಜನಿಕರಲ್ಲಿ ನೈರ್ಮಲ್ಯ, ಶುಚಿತ್ವ ಕುರಿತು ವ್ಯಾಪಕ ಪ್ರಚಾರಪಡಿಸುವ ನಿಟ್ಟಿನಲ್ಲಿ, ವಿರೂಪಾಕ್ಷೇಶ್ವರ ದೇವಸ್ಥಾನ ಮುಂಭಾಗ ಹಂಪಿ ಬಜಾರ್, ಎದುರು ಬಸವಣ್ಣ, ಮಾತಂಗ ಪರ್ವತ, ಕಮಲ್ ಮಹಲ್ ಪರಂಪಾರಿಕ ತಾಣಗಳಲ್ಲಿ ಸ್ವಚ್ಛತಾ ಹೀ ಸೇವಾ-೨೦೨೪ ಕಾರ್ಯಕ್ರಮ ಪ್ರಯುಕ್ತ ಹಂಪಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹಾಗೂ ಪರಿಸರ ಸ್ನೇಹಿ ಹಂಪಿಯ ಬಗ್ಗೆ ಪ್ರವಾಸಿಗರಿಗೆ ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭುಲಿಂಗ ಎಸ್ ತಳಕೇರಿ, ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಶ್ರೀಮತಿ ರಜನಿ ಷಣ್ಮುಖ ಗೌಡ ಅಧ್ಯಕ್ಷರು ಗ್ರಾಮ ಪಂಚಾಯತ್, ಹಂಪಿ, ಅನಿರುದ್ಧ ದೇಸಾಯಿ ಸಹಾಯಕ ಸಂರಕ್ಷಣಾಧಿಕಾರಿಗಳು ಂSI, ಸುನಿಲ್ ಕುಮಾರ್ ವ್ಯವಸ್ಥಾಪಕರು ಞsಣಜಛಿ, ಎಸ್ ಹನುಮಂತಪ್ಪ ಉಪಾಧ್ಯಕ್ಷರು, ಬಿ ಗಂಗಾಧರ್ Pಆಔ, ವಿರುಪಾಕ್ಷಿ ವಿ ಹಂಪಿ, ಪ್ರವಾಸಿ ಮಾರ್ಗದರ್ಶಿಗಳು, ಪ್ರವಾಸಿ ಮಿತ್ರರು, ಭಾರತೀಯ ಪುರ ತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರುಎಂಬ ಮಾಹಿತಿಯನ್ನು ವರದಿ ಮಾಡಲು ಕೋರಲಾಗಿದೆ.