4

ಕುಲಾ0ತರಿ ತಳಿಗಳ ಮೇಲೆ ಸುಳ್ಳು ಪ್ರಚಾರ ತಡೆಗಟ್ಟಲು ಒತ್ತಾಯ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 26- ಬಹುರಾಷ್ಟ್ರೀಯ ಕಂಪನಿಗಳು ಕೇವಲ ತಮ್ಮ ಲಾಭದ ಉದ್ದೇಶಕ್ಕೆಂದು, ಸ್ಥಳೀಯ ಕೃಷಿ ಸಮುದಾಯಗಳು ಮತ್ತು ದೇಶದ ಆಹಾರ ಸಾರ್ವಭೌಮತ್ವ ಹಾನಿಯುಂಟು ಮಾಡುವ ಕುಲಾಂತರಿ (ಜಿಎಂ) ಬೆಳೆಗಳನ್ನು ಮಾರುಕಟ್ಟೆಗೆ ತರುವ ಹೊನ್ನಾರ ಮಾಡುತ್ತಿದ್ದು, ಈ ಮೂಲಕ ಬಿತ್ತನೆ ಬೀಜಗಳ ಮೇಲೆ ಬೆರಳೆಣಿಕೆ ಎಷ್ಟು ಕಂಪನಿಗಳು ಓಡೆತನ ಸಾಧಿಸಲಿವೆ ಎಂದು ಇದರ ಮೇಲೆ ಸರ್ಕಾರ ಕೂಡಲೇ ಕ್ರಮವಹಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಭೇಟಿ ಮಾಡಿ ಮನವಿ ಪತ್ರ ಮುಖ್ಯಮಂತ್ರಿಗೆ ಕಳಸಿಕೊಡಲಾಯಿತು.

ಸಂದರ್ಭದಲ್ಲಿ ಕೃಷ್ಣಪ್ಪ ಮಾತನಾಡುತ್ತ ಕುಲಾಂತರಿ ತಂತ್ರಜ್ಞಾನ ಅಥವಾ ಜೈವಿಕ ತಂತ್ರಜ್ಞಾನದಿAದ ಹೊರಬರುವ ಬಿತ್ತನೆ ಬೀಜಗಳು ಎರಡು ಬೇರೆ ಬೇರೆ ಸಂಕುಲಗಳ ಜೀವಕೋಶಗಳ ಬೇರಿಕೆಯಾಗಿರುತ್ತವೆ. ಪ್ರಾಣಿ ಮತ್ತು ಸಸ್ಯಗಳ ಜೀವಕೋಶಗಳ ಕಲಿಬೆರಕೆಯಿಂದಾಗಿ ಹುಟ್ಟುವ ಬಿತ್ತನೆ ಬೀಜಗಳಿಂದ ಬೆಳೆಗೆ ಆಹಾರವು ಜನಜಾನುವಾರುಗಳ ಆರೋಗ್ಯ ದಮೇಲೆ ಮತ್ತು ನಿಸರ್ಗದ ಮೇಲೆ ಎಂದೆ0ದಿಗೂ ಸರಿ ಪಡೆಸ್ಕಲಾಗದಂತಹ ದುಷ್ಟ ಪರಿಮಾನಗಳನ್ನು ಬೀರುತ್ತವೆ ಎಂದರು.

ಈ ರೀತಿಯ ಆಹಾರಗಳನ್ನು ನಾವು ಸೇವಿಸಿದಾಗ ಕ್ರಮೇಣ ನಮ್ಮ ಅಂಗಾAಗಗಳು ವಿಫಲಗೊಳ್ಳುತ್ತವೆ ಎಂದು ಜಗತ್ತಿನ ೧೩೦ಕ್ಕೂ ಹೆಚ್ಚಿನ ವಿಜ್ಞಾನಿಗಳು ೨೬ ವರ್ಷಗಳ ಹಿಂದೆಯೇ ಹೊಕ್ಕರಳಿನಲ್ಲಿ ಈ ತಂತ್ರಜ್ಞಾನದ ವಿರುದ್ಧ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು ಎಂದರು.

ಕೃಷಿ ನಮ್ಮ ಆಹಾರ ಮತ್ತು ನಮ್ಮ ಆರೋಗ್ಯವನ್ನು ನಿಯಂತ್ರಿಸಲು ಈ ಸಂಜನ ವಿರುದ್ಧ ಹೋರಾಟವು ಎಲ್ಲ ವರ್ಗಗಳು ಕೈಗೆತ್ತಿಕೊಳ್ಳಬೇಕೆಂದರು.

ಮುಖ್ಯಮಂತ್ರಿಗಳು ಈ ವಿಷಯದ ಮೇಲೆ ಗಮನಹರಿಸಿ ಜಿಲ್ಲೆಯ ವ್ಯಾಪ್ತಿಯಲ್ಲಿ ಇಂತಹ ದುಷ್ಪರಿಣಾಮಗಳು ಹರಡದಂತೆ ಕ್ರಮ ವಹಿಸಲು ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕ ಅಧ್ಯಕ್ಷರು ಬೇವಿನ ಗಿಡದ ಯರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೊಳಗಲ್ ತಿಮ್ಮಪ್ಪ, ಖಜಾಂಜಿ ಮಾರಣ್ಣ, ಸಂಘಟನಾ ಕಾರ್ಯದರ್ಶಿ ಬೈಲೂರು ವೀರೇಶ್, ಮತ್ತು ಶ್ರೀರಾಮುಲು, ಯುವ ಸಂಘಟನಾ ಕಾರ್ಯದರ್ಶಿ ಚಿನ್ನ ರಾಯುಡು, ಗಂಗಾಧರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!