Shirur devannanavaru Matanaduttiruvudu.

ಗಾಂಧೀ ತತ್ವ, ಸಿದ್ಧಾಂತಗಳ ಹಾದಿಯಲ್ಲಿ ಸಾಗುತ್ತಿರುವ ಕಾಮನೂರ

ಕರುನಾಡ ಬೆಳಗು ಸುದ್ದಿ

ಮಹಾತ್ಮ ಗಾಂಧೀಜಿ ಅಂದರೆ ಸರಳತೆ, ಸತ್ಯ, ಹೀಗೆ ಹಲವು ವಿಚಾರಗಳಗಳು ಕಣ್ಮುಂದೆ ಬುರುತ್ತವೆ. ಇದೇ ಮಹಾತ್ಮರು ಬದುಕಿದಂತೆ ಸರಳವಾಗಿ ನಮ್ಮೂರಿನಲ್ಲಿ ಯಾವೊಂದು ದುಶ್ಚಟಗಳಿಗೆ ದಾಸರಾಗಬಾರದು ಅದರ ಮಾರಾಟ ಇಲ್ಲಿ ನಿಷಿದ್ಧ, ಎನ್ನುವ ಗ್ರಾಮದ ಮುಖಂಡರ ಮಾತಿಗೆ, ಜೀವನ ಸಾಗಿಸುತ್ತಿರುವ ಗ್ರಾಮಸ್ಥರು.

ಕಾಮನೂರು ಎಲ್ಲ ಗ್ರಾಮಗಳಂತೆ ಒಂದು ಚಿಕ್ಕ ಗ್ರಾಮ ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುತ್ತದೆ. ಕಾಮನೂರ ಗ್ರಾಮ ಮಹಾತ್ಮ ಗಾಂಧೀಜಿ ತತ್ವಗಳನ್ನು ಅಂದಿನಿAದ ಇಂದಿನವರೆಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಈ ತರಹದ ಮಾದರಿ ಗ್ರಾಮಗಳ ಸಂಖ್ಯೆ ಹೆಚ್ಚಾಗಲಿ ಎನ್ನುವ ದೃಷ್ಠಿಕೋನದಿಂದ ಕೊಪ್ಪಳದ ಗಾಂಧೀ ಬಳಗದವರು ಇದೇ ಅಕ್ಟೋಬರ್ ೨-೨೦೨೪ ರಂದು ಕೊಪ್ಪಳದ ಅಶೋಕ ವೃತ್ತದಿಂದ ಕಾಮನೂರಿಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ.

ದುಶ್ಚಟ ಮುಕ್ತ ಗ್ರಾಮ ನಡೆದು ಬಂದ ದಾರಿ

ಸುಮಾರು ೩೦ ವರ್ಷದಿಂದ ಕೆಳಗೆ ನಮ್ಮೂರಲ್ಲಿ ಗುಟಖಾ ಬೇಕು, ಸಾರಾಯಿ ಅಂಗಡಿಯೂ ಇರಲಿ ಎನ್ನುವ ಮಾತು ಬಂದಾಗ ಅಂದಿನ ಗ್ರಾಮದ ಹಿರಿಯರೆಲ್ಲಾ ಸೇರಿ ಅದನ್ನು ತರಲು ನಿಷೇಧ ಮಾಡಿ, ೧೦೦೦ ರೂಪಾಯಿ ದಂಡ ವಿಧಿಸಿದರು. ಇದರಿಂದ ಕೋಪಗೊಂಡ ಒಂದು ಬಣ ಚಹಾವೂ ಒಂದು ಚಟ ಅಲ್ಲವಾ ಅಂದಾಗ ಹಿರಿಯರೆಲ್ಲ ಸೇರಿ ಅಂದಿಗೆ ಇದ್ದ ಮೂರು ಹೋಟೆಲಗಳನ್ನು ಬಂದ ಮಾಡಿಸಲಾಯಿತು.

ಮಗದೊಮ್ಮೆ ಮತ್ತೆ ದುಶ್ಚಟ ವಿರುದ್ಧ ಧ್ವನಿ ಕೇಳಿ ಬಂದಾಗ, ಗ್ರಾಮದ ಮಹಿಳೆಯರೆಲ್ಲಾ ಸೇರಿ, ಪೊರಕೆ ಹಿಡಿದು ಪ್ರತಿಭಟಿಸಿದ್ದರು ಅಂತ ಈಗಲೂ ಗ್ರಾಮದ ಜನತೆ ನೆನಪಿಸಿಕೊಳ್ಳುತ್ತಾರೆ. ತೀರಾ ಇತ್ತೀಚೆಗೆ ಯುವಕರ ಗುಂಪೊಂದು ಬೇಡಿಕೆ ಇಟ್ಟಾಗಲೂ, ಗ್ರಾಮದ ಹಿರಿಯರು ಮತ್ತೇ ಪ್ರಜಾಪ್ರಭುತ್ವ ಮಾದರಿಯಲ್ಲೆ ಸಮಸ್ಯೆಯನ್ನು ಕೈ ಎತ್ತುವ ಮೂಲಕ ಬೇಕು ಎನ್ನುವವರಿಗಿಂತ ಬೇಡ ಅನ್ನುವವರ ಸಂಖ್ಯೆ ಹೆಚ್ಚಿಗೆ ಬರುವಂತೆ ಮಾಡಿ ಪರಿಹರಿಸಿದ್ದಾರೆ.

ಗ್ರಾಮದ ದೇವಸ್ಥಾನದ ಕಟ್ಟಡ ಜೀರ್ಣೋದ್ಧಾರ ಮಾಡುವ ಕಾಲದಲ್ಲಿ, ಸಾರಾಯಿ ಮಾರಾಟ ಮಾಡಲು ಅನುಮತಿಸಿದರೆ, ಅಂಗಡಿ ಪ್ರಾರಂಭಿಸಿದವರು ಹತ್ತು ಲಕ್ಷ ನೀಡಲು ಮುಂದಾದಾಗ ಗ್ರಾಮಸ್ಥರು ಈಂತಹ ಹಣದಿಂದ ದೇವಸ್ಥಾನ ಕಟ್ಟಡ ಜಿರ್ಣೋಧ್ಧಾರ ಮಾಡಲು ಬಿಡುವುದಿಲ್ಲ, ದುಡಿದ ದುಡ್ಡಿನಿಂದ ದೇವಸ್ಥಾನ ಕಟ್ಟಡ ಕಟ್ಟದೇ ದುಶ್ಚಟದ ಹಣ ಬಳಸಲು ವಿರೋಧಿಸಿ ನಮ್ಮೂರು ಮತ್ತೇ ದುಶ್ಚಟ ಮುಕ್ತ ಗ್ರಾಮವಂತಾಗಲು ಸಹಕರಿಸಿದವರು ಗ್ರಾಮದ ಹಿರಿಯರು ಅಂತ ಮಾರುತಿ ಹೊಸಮನಿ ನೆನಪಿಸಿಕೊಳ್ಳುತ್ತಾರೆ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ದುಶ್ಚಟ ಪ್ರಾರಂಭಿಸಲು ಮುಂದಾದಾಗ ಗ್ರಾಮದ ಮಹಿಳೆಯರೆಲ್ಲಾ ಸೇರಿ ಪೊರಕೆ ಹಿಡಿದು ಹೋರಾಟ ಮಾಡಿದ್ದರು ಅಂತ ಮೈಲಾರಪ್ಪ ಐರಾಣಿ ಹೇಳುತ್ತಾರೆ.

ಕಾಮನೆಗಳನ್ನು ಮೀರಿ ಬದುಕುತ್ತಿರುವ ಕಾಮನೂರ ಗ್ರಾಮದಲ್ಲಿ, ಇವತ್ತಿಗೂ ಯಾವೊಂದು ಹೋಟೆಲ್, ಪಾನ್ ಪರಾಕ್, ಬೀಡಿ ಸಿಗರೇಟ್, ಮಧ್ಯ ಸಿಗುವುದಿಲ್ಲ. ಆ ಮಟ್ಟಿಗೆ ಇವತ್ತಿಗೂ ದುಶ್ಚಟ ಮುಕ್ತ ಗ್ರಾಮವಾಗಿ ಉಳಿದುಕೊಂಡಿದ್ದು ಅಲ್ಲಿನ ಹಿರಿಯ ಜೀವಿಗಳು ಅನುಸರಿಸಿದ ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶಗಳಿಂದ.

ಗಾಂಧೀ ಬಳಗ ಹುಟ್ಟಿದ್ದು

ಕೊಪ್ಪಳದ ಗಾಂಧೀ ಬಳಗದಲ್ಲಿ ಶಿಕ್ಷಕರು, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ವಕೀಲರು, ಪತ್ರಕರ್ತರು, ಸಾಹಿತಿಗಳು, ಚಾಲಕರು, ಗ್ರಂಥಪಾಲಕರು, ಪೌರಕಾರ್ಮಿಕರು, ಸೇರಿದಂತೆ ಎಲ್ಲ ವರ್ಗದವರು ಕೂಡಿ ಕಳೆದ ಅಕ್ಟೋಬರ್ ೨-೨೦೨೩ ಕ್ಕೆ ಕೊಪ್ಪಳ ಜಿಲ್ಲೆಯ ಭಾನಾಪೂರ ಗ್ರಾಮಕ್ಕೆ ಹರಿಜನೋದ್ಧಾರ ಕಾರ್ಯಕ್ಕಾಗಿ ದೇಶ ಸುತ್ತುವಾಗ ಭಾನಾಪೂರ ಗ್ರಾಮಕ್ಕೆ ಮಾರ್ಚ ೦೩-೧೯೩೪ ರಂದು ಭೇಟಿ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಅದೇ ಭಾನಾಪೂರ ಗ್ರಾಮಕ್ಕೆ ಕೊಪ್ಪಳದ ಅಶೋಕ ವೃತ್ತದಿಂದ ಪಾದಯಾತ್ರೆಮೂಲಕ ತೆರಳಿ, ಸಸಿನೆಟ್ಟು ಮಹಾತ್ಮ ಗಾಂಧೀಜಿ ಅವರಿಗೆ ನೂಲಿನ ಹಾರ ಹಾಕಿ, ಆರತಿ ಬೆಳಗಿ, ನೀರು ಕೊಟ್ಟಂತಹ ಸುಟ್ಟವ್ವ ಹರಿಜನ ವಂಶಸ್ಥರನ್ನು ಕರೆದು ಗೌರವಿಸಲಾಗಿತ್ತು.

ಶಿರೂರು ವೀರಭದ್ರಪ್ಪನವರು ಹರಿಜನೋದ್ಧಾರ ನಿಧಿಗೆಂದು ಸಂಗ್ರಹಿಸಿದ್ದ ರೂಪಾಯಿ ೧೪೦ ಗಳನ್ನು ಮಹಾತ್ಮ ಗಾಂಧೀಜಿಯವರಿಗೆ ಅರ್ಪಿಸಿದ್ದರು. ಕಳೆದ ವರ್ಷದ ಕಾರ್ಯಕ್ರಮದಲ್ಲಿ ಶಿರೂರು ವೀರಭದ್ರಪ್ಪ ಅವರ ಮಗ ಶಿರೂರು ದೇವಣ್ಣ ಅವರನ್ನು ಕರೆದು ಗೌರವಿಸಲಾಗಿತ್ತು. ಅದೇ ಗ್ರಾಮದ ಕಾಳಪ್ಪ ಪತ್ತಾರ ಅವರು ಸ್ವತಹ ಮಹಾತ್ಮ ಗಾಂಧೀಜಿ ಅವರಿಗೆ ಸಮರ್ಪಿಸಿದ್ದರು. ಮಹಾತ್ಮ ಗಾಂಧೀಜಿ ಮಾನಪತ್ರ ಹಾಗೂ ಭಾವಚಿತ್ರವನ್ನು ಹರಾಜು ಹಾಕಿ ಆ ದುಡ್ಡನ್ನು ಹರಿಜನ ನಿಧಿಗೆ ಬಳಸಿಕೊಳ್ಳಲು ಪಡೆದಿದ್ದರು. ಮಹಾತ್ಮ ಗಾಂಧೀಜಿ ಚಿತ್ರ ಬಿಸಿಡಿದ ಕಾಳಪ್ಪ ಪತ್ತಾರ ಅವರ ಪುತ್ರ ಶಂಕರ ಪತ್ತಾರ ಅವರು ಐತಿಹಾಸಿಕ ಘಟನೆಯ ದಾಖಲಾಗಲಿ ಎನ್ನುವ ಸದಾಶಯದೊಂದಿಗೆ ದಿನಾಂಕ ೧೯೯೮ ಅಕ್ಟೋಬರ್-೨ ರಂದು ತೈಲವರ್ಣ ಚಿತ್ರ ಬಿಡಿಸಿ ಭಾನಾಪೂರ ರೈಲು ನಿಲ್ದಾಣದಲ್ಲಿ ಅಳವಡಿಸಿದ್ದಾರೆ. ಈ ಎಲ್ಲ ಮಹನೀಯರ ಕುಟುಂಬದ ಸದಸಯರಿಗೆ ಗೌರವಿಸಿ ಭಾನಾಪೂರ ರೈಲು ನಿಲ್ದಾಣದಕ್ಕೆ ಕೊಪ್ಪಳದ ಅಶೋಕ ವೃತ್ತದಿಂದ ಸುಮಾರು ೧೫೦ ಕ್ಕೂ ಹೆಚ್ಚಿನ

ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ಹುಟ್ಟಿದ್ದು ಕೊಪ್ಪಳದ ಗಾಂಧೀ ಬಳಗ.

ಈ ವರ್ಷ ಅದೇ ಗಾಂಧೀ ಬಳಗ ಕೊಪ್ಪಳ ತಂಡದವರು ಮತ್ತೇ ದುಶ್ಚಟ ಮುಕ್ತ ಗ್ರಾಮ ಕಾಮನೂರಿಗೆ ತೆರಳಿ. ದುಶ್ಚಟ ಮುಕ್ತ ಗ್ರಾಮಗಳ ಸಂಖ್ಯೆಯೂ ಅಧಿಕವಾಗಲಿ ಎನ್ನುವ ಸದಾಶಯದೊಂದಿಗೆ ಹಾಗೂ ಈವರೆಗೂ ದುಶ್ವಟ ಮುಕ್ತ ಗ್ರಾಮಕ್ಕಾಗಿ ಕಠಿಣ ನಿರ್ಧಾರಗಳ ತೆಗೆದುಕೊಂಡ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ ಸದಸ್ಯರಿಗೆ ಬೆಂಬಲಿಸುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಅನ್ನುವ ಬೆಂಬಲವಾಗಿ ಈ ಪಾದಯಾತ್ರೆ ಹೊರಡಲು ಕೊಪ್ಪಳದ ಗಾಂಧೀ ಬಳಗ ಸಜ್ಜಾಗಿದೆ.

ಸದರಿ ಕಾರ್ಯಕ್ಕೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಕಾಮನೂರಿನ ಗ್ರಾಮದಂತೆ ದುಶ್ಚಟ ಮುಕ್ತ ಗ್ರಾಮ ನಿಮ್ಮದಾಗಲಿ. ಅಲ್ಲಿಗೂ ನಾವು ಬಂದು ನಿಮ್ಮನ್ನು ಬೆಂಬಲಿಸುತ್ತೇವೆ ಅಂತ ಗಾಂಧೀ ಬಳಗ ಕೊಪ್ಪಳದವರು ಹೇಳುತ್ತಾರೆ.
ಹನುಮಂತರಾವ್ ಮಾಲಿಪಾಟೀಲ, ಕುಬೇರಪ್ಪ ತುಬಾಕಿ, ದೊಡ್ಡಪ್ಪ ಜಾನದ, ಮಲ್ಲಪ್ಪ ಸಂಗಟಿ, ಬಸಪ್ಪ ಒಂಕಲಕುAಟಿ, ಗ್ರಾಮದ ಹಿರಿಯರೆಲ್ಲರ ಉಳಿಸಿಕೊಂಡು ಬಂದಿದ್ದಾರೆ. ಗ್ರಾಮದ ಹಿರಿಯರೆಲ್ಲರಿಗೂ ಕೊಪ್ಪಳದ ಗಾಂಧೀ ಬಳಗ ಹೋಗಿ ನಿಮ್ಮೂರಿಗೆ ನಾವು ಬರುತ್ತೇವೆ ಅಂದಾಗ ನಾವು ಎನು ಅಂದುಕೊAಡು ಬಂದೀವಲ್ರೀ, ಅದು ಸರಿ ಅಂತ ಹೇಳಲಿಕ್ಕೆ ನೀವು ಬಂದೀರಿ ಅಂತ ಖುಷಿಯಿಂದ ಪೂರ್ವಭಾವಿ ಸಭೆಯಲ್ಲಿ ಹಿರಿಯರು ಖುಷಿಯಿಂದಲೇ ಬರಮಾಡಿಕೊಂಡರು.

ದುಶ್ಚಟ ಮುಕ್ತ ಗ್ರಾಮ ಕಾಮನೂರಿನಲ್ಲಿ ಪೂರ್ವಭಾವಿ ಸಭೆ.

ಅಕ್ಟೋಬರ್ ೨-೨೦೨೪ ಕ್ಕೆ ಕೊಪ್ಪಳದ ಅಶೋಕ ವೃತ್ತದಿಂದ ಕಾಮನೂರಿಗೆ ಪಾದಯಾತ್ರೆಗೆ ಬರುತ್ತೇವೆ ಅಂತ ಕೊಪ್ಪಳದ ಗಾಂಧೀ ಬಳಗದವರಲ್ಲಿ ಪ್ರಮುಖವಾಗಿ ಬರಹಗಾರ, ಪ್ರಗತಿಪರ ಕೃಷಿಕರು ಆದ ಆನಂದತೀರ್ಥ ಪ್ಯಾಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ, ಶಿಕ್ಷಕರ ಕಲಾಸಂಘದ ಪ್ರಾಣೇಶ ಪೂಜಾರ, ರಾಮಣ್ಣ ಶ್ಯಾವಿ, ಶಿವಪ್ಪ ಜೋಗಿ, ಉಪನ್ಯಾಸಕರಾದ ಬಸವರಾಜ ಸವಡಿ, ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್, ಸಹಾಯಕ ಪ್ರಾಧ್ಯಾಪಕರಾದ ಡಾ,ಪ್ರಭುರಾಜ ನಾಯಕ, ಪತ್ರಕರ್ತರಾದ ಪ್ರಮೋದ ಕುಲಕರ್ಣಿ ಟ್ಯಾಕ್ಸಿ ಚಾಲಕರಾದ ದುರಗಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌರಕ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ ಕಾಮನೂರಿನ ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ನಡೆದ ಸಪ್ಟಂಬರ್ ೧೬-೨೦೨೪ ರ ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದವರಲ್ಲಿ ಪ್ರಮುಖರು.

-ನಾಗರಾಜ ನಾಯಕ ಡಿ.ಡೊಳ್ಳಿನ
ಕೊಪ್ಪಳ

Leave a Reply

Your email address will not be published. Required fields are marked *

error: Content is protected !!