
ಸಿರುಗುಪ್ಪ ತಾಲೂಕು ಆಡಳಿತದಿಂದ ಗಾಂಧೀಜಿ ಶಾಸ್ತಿçಜಿ ಜನ್ಮದಿನ ಆಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 2- ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಮಹಾತ್ಮ ಗಾಂಧೀಜಿಯವರ ಜನ್ಮದಿನ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ೧೨೧ ನೇ ಜನ್ಮದಿನ ಕಚೇರಿ ಸಭಾಭವನದಲ್ಲಿ ಆಚರಿಸಲಾಯಿತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಭಾವಚಿತ್ರಕ್ಕೆ ತಹಸಿಲ್ದಾರ್ ಹೆಚ್ ವಿಶ್ವನಾಥ ಅವರು ಮಾಲಾರ್ಪಣೆ ಹಾಗೂ ಪುಷ್ಪ ಅರ್ಪಿಸಿ ನಮನ ಸಲ್ಲಿಸಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.
ಸಿದ್ದಾರ್ಥ ಕಾರಂಜಿ, ಶೇಖರ್, ಮಹಾಂತೇಶ, ಕಂದಾಯ ಪರಿವೀಕ್ಷಕ ಮಂಜುನಾಥ, ಸಾಮಾಜಿಕ ಕಾರ್ಯಕರ್ತರಾದ ಮೊಹಮ್ಮದ್ ನೌಶಾದ್ ಅಲಿ, ಅಬ್ದುಲ್ ನಬಿ ಹಾಗು ಸಿಬ್ಬಂಧಿ ವರ್ಗದವರು ಇದ್ದರು.