
ಡಾ.ಷಣ್ಮುಖಯ್ಯ ತೋಟದಗೆ ಆದರ್ಶ ರತ್ನ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ಉತ್ತರ ಕನ್ನಡ ಜಿಲ್ಲೆ ಶಿರಶಿಯ ನೆಮ್ಮದಿ ಆವರಣದಲ್ಲಿ ಅಕ್ಷರ ದೀಪ ಪೌಂಡೇಶನ್ (ರಿ) ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕಲಾ ವೇದಿಕೆ ಆಯೋಜಿಸಿದ ಮಲೆನಾಡ ಅಕ್ಷರೋತ್ಸವ ಸಮಾರಂಭದಲ್ಲಿ ಕೊಪ್ಪಳ ತಾಲುಕಿನ ಮೈನಹಳ್ಳಿ ಗ್ರಾಮದ ಡಾ.ಷಣ್ಮಖಯ್ಯ ತೋಟದರವರ ಸಾಹಿತ್ಯ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ” ಅದರ್ಶ ರತ್ನ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದ ಉದ್ಟಾಟನೆಯನ್ನು ಶ್ರೀ ಅನಂತಮೂರ್ತಿ ಹೆಗಡೆ, ಅಧ್ಯಕ್ಷತೆಯನ್ನು ದತ್ತಗುರು ಕಂಠಿ, ಮುಖ್ಯ ಅತಿಥಿಗಳಾಗಿ ಶ್ರೀಮತಿ ಲತಾ ಹೆಗಡೆ, ಕೃಷ್ಣ ಪದಕಿ, ಗಣಪತಿ ಹೆಗಡೆ ಅನೇಕ ಗಣ್ಯರು ವೇದಿಕೆ ಮೇಲಿದ್ದರು.
ಡಾ.ದಿವ್ಯಾ ಹೆಗಡೆ ಕವಿಗೋಷ್ಟಿ ನಿರೂಪಣೆ ಮತ್ತು ಶ್ರೀಮತಿ ಯಶಸ್ವಿನಿ ಶ್ರೀಧರಮೂರ್ತಿ ಭವ್ಯ ಹಳೆಯೂರು ನಿರೂಪಣೆ ಮಾಡಿದರು.