
ಶಾಲೆಗಳು ಆಧುನಿಕ ಭಾರತದ ದೇವಾಲಯಗಳು : ಶಿಕ್ಷಕ ವಿಜಯಕುಮಾರ್
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 2- ಶಾಲೆಗಳು ಮಠಗಳಿಗಿಂತಲೂ ಶ್ರೇಷ್ಠ ಶಾಲೆಗಳು ನಮಗೆ ಎಲ್ಲವನ್ನೂ ಕಲಿಸಿಕೊಡುತ್ತವೆ ಸರಿಯಾಗಿ ಶಿಕ್ಷಣ ಪಡೆದರೆ ಆದರ್ಶ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಶಾಲೆಗಳು ಆಧುನಿಕ ಭಾರತದ ದೇವಾಲಯಗಳು ಮಠಗಳಿಗಿಂತ ಶಾಲೆಗಳು ಹೆಚ್ಚಾಗಬೇಕು ಎಂದು ಶಾಲೆಯ ಶಿಕ್ಷಕರಾದ ಡಿ.ವಿಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹೋಬಳಿಯ ಜಿ. ನಾಗಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂದೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜಯಂತಿ ಆಚರಿಸಲಾಯಿತು ಈ ಸಂಧರ್ಭದಲ್ಲಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿಯವರು ಶಾಂತಿಗೆ ಆದ್ಯತೆ ಕೊಡುತ್ತಿದ್ದರು, ಪ್ರಾಣಿಗಳ ಹಿಂಸೆ ಯ ವಿರುದ್ಧ ವಾಗಿದ್ದರು, ಅಂದು ಹರಿಜನರಿಗೆ ದೇವಸ್ಥಾನಗಳಿಗೆ ಪ್ರವೇಶ ವಿಲ್ಲದಿರುವುದನ್ನು ವಿರೋಧಿಸುತ್ತಿದ್ದರು.
ವರ್ಣ ಭೇದ ನೀತಿಗಳ ವಿರುದ್ಧ ಹೋರಾಟ ಮಾಡಿದರು, ಪಾಕಿಸ್ತಾನ ಮತ್ತು ಭಾರತದ ವಿಭಜನೆಯಾಗುವ ಸಂಧರ್ಭದಲ್ಲಿ, ಪಾಕಿಸ್ತಾನ ರಾಷ್ಟ್ರಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ಸುಮಾರು 3,000ಸಾವಿರ ಡಾಲರ್ ಕೊಡಬೇಕೆಂದು ಬೇಡಿಕೆಯನ್ನಿಡುತ್ತಾರೆ. ನಾಥಾರಾಮ್ ಗೂಡ್ಸೆ, ಮತ್ತು ನಾರಾಯಣ ಪುಲೆ ಇದನ್ನು ವಿರೋಧಿಸಿ ಗಾಂದೀಜಿಯ ಹತ್ಯೆಯ ಸಂಚನ್ನು ರೂಪಿಸಿ 02 ಅಕ್ಟೊಬರ್1948ರಂದು ಅವರ ಹತ್ಯೆ ಮಾಡುತ್ತಾರೆ ಈ ವಿಷಯ ತಿಳಿದು ಪೊಲೀಸರು ಅವರನ್ನು ಬಂಧಿಸಿದಾಗ ಅವರನ್ನು ಬಂದಿಸಬೇಡಿ ಅವರ ಆಲೋಚನೆ ಸರಿ ಇರಬಹುದು ಅವರಿಗೆ ಯಾವುದೇ ಶಿಕ್ಷೆ ಕೊಡದೇ ಬಿಡುಗಡೆ ಗೊಳಿಸಿ ಎಂದು ಹೇಳಿದಾಗ ಅವರನ್ನು ಅಂದಿನಿಂದ ಮಹಾತ್ಮರ ಎಂದು ಹೇಳುತ್ತಾರೆ.
ನಾವು ಜಾತ್ಯತೀತ ಮನೋಭಾವಣೆಯನ್ನು ಹೊಂದಬೇಕು , ತಪ್ಪು ಮಾಡಿದ ಯಾರೇ ಆಗಲಿ ಖಂಡಿಸುವ ಸ್ವಭಾವ ಇಟ್ಟುಕೊಳ್ಳಬೇಕು , ಶಿಕ್ಷಕರು ಸಹ ಜಾತಿ ಮನೋ ಭಾವನೆ ಇಟ್ಟುಕೊಳ್ಳಬಾರದು, ಮದ್ಯಪಾನ, ಪ್ರಾಣಿಗಳ ಹಿಂಸೆ ಮಾಡಬಾರದು, ನಾವು ಬದಲಾಗಬೇಕು ದೇವರ ಹೆಸರಿನಲ್ಲಿ ಕುರಿ, ಕೋಳಿ, ಬೇಟೆ ಗಳನ್ನು ಮಾಡಬಾರದು ಇವುಗಳನ್ನು ನಾವು ನಮ್ಮ ಸ್ವಾರ್ಥಕ್ಕಾಗಿ ಮಾಡಿಕೊಳ್ಳಲಾಗಿದೆ, ಸಾತ್ವಿಕ ಆಹಾರ ಸೇವಿಬೇಕು. ಗಾಂಧೀಜಿಯವರ ಕನಸು ವ್ಯಾಸನ ಮುಕ್ತ ದೇಶ ಆಗಬೇಕೆನ್ನುವ ನಿಲುವಿತ್ತು ಹಾಗಾಗಿ ಇಂದು ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸಿದ್ದಾರೆ, ಇದು ಕೇವಲ ಇಂದಿಗೆ ಮಾತ್ರ ಸೀಮಿತವಾಗಬಾರದು ನಿರಂತರ ವಾಗಿರಬೇಕು. ಆದರೆ ಇದು ಅವರ ಜಯಂತಿ ದಿನದಂದು ನೆಪ ಮಾತ್ರಕ್ಕೆ ಜಾರಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳು ದುಶ್ಚಟಗಳಿಗೆಬಲಿಯಾಗದೆ, ಮೊಬೈಲ್ ಗಳಲ್ಲಿ ಕೆಟ್ಟವಿಚಾರ ನೋಡಬಾರದು ಒಳ್ಳೆ ವಿದ್ಯಾಭ್ಯಾಸ ಮಾಡಬೇಕು, ಮಕ್ಕಳಲ್ಲಿ ಜಾತಿ , ಭೇಧಬಾವ, ಧರ್ಮ ವ್ಯಾಮೋಹಗಳನ್ನು ಹೋಗಲಾಸುವುದೇ ಶಿಕ್ಷಣದ ವ್ಯವಸ್ಥೆ,
ಯಾರು ಗುರುವನ್ನು ಗೌರವ ದಿಂದ ಕಾಣುತ್ತಾರೋ ಅವರು ಎಲ್ಲರನ್ನು ಪ್ರೀತಿಸುತ್ತಾರೆ, ತಾಯಿಯನ್ನು ಪ್ರೀತಿಸುವವರು ಅವರು ಹೆಂಡತಿಯನ್ನು ಪ್ರೀತಿಸುತ್ತಾರೆ.
ಈ ದೇಶಕ್ಕೆ ಗಾಂಧೀಜಿ ಒಬ್ಬರೇ ಸ್ವಾತಂತ್ರ್ಯ ತಂದುಕೊಟ್ಟಿಲ್ಲ ಹಲವಾರು ಸ್ವತಂತ್ರ ಹೋರಾಟಗಾರರಿಂದ ಸ್ವಾತಂತ್ರ್ಯ ಲಭಿಸಿತು ಅದಕ್ಕಾಗಿ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ , ಸುಖ್ ದೇವ್, ದಾದಾ ಬಾಯಿ ನೆಹರೋಜಿ, ಜಾನ್ಸಿ ರಾಣಿ ಲಕ್ಷ್ಮಿಬಾಯಿ ಚಂದ್ರ ಶೇಖರ್ ಅಜಾದ್, ಬಿಪಿನ್ ಚಂದ್ರಪಾಲ್ ಇನ್ನೂ ಹಲವಾರು ಸ್ವಾತಂತ್ರ್ಯ ಸೇನಾನಿಗಳು ಹೋರಾಡಿ ಮಡಿದಿದ್ದಾರೆ.
ಅಂಬೇಡ್ಕರ್ ಅವರು ಮುಸ್ಲಿಮರು ಕೇವಲ ಧರ್ಮದ ಬಗ್ಗೆ ವ್ಯಾಮೋಹ ಇಟ್ಟುಕೊಂಡಿರುತ್ತಾರೆ ಹಾಗಾಗಿ ಭಾರತವನ್ನು ಅಖಂಡ ಗೊಳಿಸಿ ಭಾರತೀಯರನ್ನು ಒಂದುಗೂಡಿಸಿ ಸರ್ವ ಧರ್ಮಿಯರ ಒಳಿತಿಗಾಗಿ ಮತ್ತು ಅವರ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ ಎಂದು ಭಾರತ ವಿಭಜನೆ ಕುರಿತು ಹೇಳಿದ್ದಾರೆ ಎಂದರು.
ಜೈಜವಾನ್ ಜೈ ಕಿಸಾನ್ ಎಂಬ ಘೋಷ ವಾಕ್ಯ ಹೇಳಿದವರು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಅತ್ಯಂತ ಪ್ರಾಮಾಣಿಕ ಪ್ರಭಾವಿ ರಾಜಕಾರಣಿಯಾಗಿದ್ದರು ಅವರು ದೇಶದ ಎರಡನೇ ಪ್ರಾಧಾನಮಂತ್ರಿ ಯಾಗಿದ್ದರು ಒಮ್ಮೆ ಅವರು ರೈಲ್ವ ಸಚಿವರಿದ್ದಾಗ ಒಂದು ರೈಲ್ವೆ ದುರಂತ ನಡೆಯುತ್ತದೆ ಆಗ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದರು. ಪ್ರಪಂಚದಲ್ಲೇ ಅತ್ಯಂತ ತ್ಯಾಗಮಯಿ ಮತ್ತು ಮುತ್ಸದ್ದಿ ರಾಜಕಾರನಿಯಾಗಿದ್ದರು ಎಂದು ಅವರ ವ್ಯಕ್ತಿತ್ವದ ಬಗ್ಗೆ ವಿವರಿಸಿದರು.
ಭ್ರಹ್ಮಣರರು ಈ ದೇಶದಲ್ಲಿ ಕೇವಲ 5%ಇದ್ದು ಇಡೀ ಪ್ರಪಂಚವನ್ನೇ ಆಳುತ್ತಿದ್ದಾರೆ. ಕಾರಣ ಅವರು ವಿದ್ಯಾಭ್ಯಾಸ ಕಲಿತು ಉನ್ನತ ಶ್ರೇಣಿಗೆ ಹೋಗುತ್ತಾರೆ. ನೀವೂ ಸಹ ಶಿಕ್ಷಣ ಸರಿಯಾಗಿ ಕಲಿತು ಉನ್ನತ ಉದ್ದೆಗಳಿಗೆ ಹೋಗಬೇಕು ಬಡತನ ಮುಕ್ತಗೊಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರಾಜುನ ನಮ್ಮ ದೇಶದಲ್ಲಿ ಬಟ್ಟೆಯ ಅಭಾವ ಇತ್ತು ಹಾಗಾಗಿ ಗಾಂದೀಜಿ ಯವರು ಕೇವಲ ಪಂಚೆಯನ್ನು ಮಾತ್ರ ಹಾಕಿಕೊಳ್ಳುತ್ತಿದ್ದರು, ಊಟದ ಅಭಾವ ಇದ್ದುದ್ದರಿಂದ ಅವರು ಶೇಂಗಾಬೀಜ ಮತ್ತು ಹಾಲು ಕುಡಿದು ಜೀವಿಸುತ್ತಿದ್ದರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಕೊಂಡಿದ್ದರು.
ಇಂದು ಜಯಂತಿಗಳನ್ನು ಆಚರಿಸುತ್ತಿರುವ ಉದ್ದೇಶ ಅವರ ಸಾಧನೆಗಳನ್ನು ಅರಿತು ಅವರ ಆದರ್ಶಗನ್ನು ಮೈಗೂಡಿಸಿಕೊಂಡು ಅವರಂತೆ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಜೀವಿಸಬೇಕೆಂದು ಮಕ್ಕಳು ಶಿಕ್ಷಣ ಮಟಕುಗೊಳಿಸದೆ ಒಂದು ಸ್ಥಾನಕ್ಕೆ ಬರುವವರೆಗೂ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಶಿಕ್ಷಕರಾದ ಕೆ. ಹೆಚ್ ವೀಣಾ, ರೇಣುಕಾ, ಜಿ.ಮೇಟಿ ಗಿರಿಜಾ, ಮಾಲತೇಶ್, ಮಂಗಳ ಗೌರಿ, ಮಲ್ಲಮ್ಮ, ವಿ.ರಮೇಶ್, ಗೌರಮ್ಮ, ಭಾಗ್ಯಮ್ಮ, ಭುವನೇಶ್ವರಿ ಇದ್ದರು.