
ಮಹಾತ್ಮಾ ಗಾಂಧಿಜಿ ಚಿತ್ರದ ದೇಶ ವಿದೇಶದ ಅಂಚೆ ಚೀಟಿಗಳ ಪ್ರದರ್ಶನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ಮಹಾತ್ಮಾ ಗಾಂಧಿಜಿ ಚಿತ್ರದ ದೇಶ ವಿದೇಶದ ಅಂಚೆ ಚೀಟಿಗಳ ಪ್ರದರ್ಶನ ಪ್ರಧಾನ ಅಂಚೆ ಕಚೇರಿಯಲ್ಲಿ ಅ. 2 ಗಾಂಧಿ ಜಯಂತಿಯಂದು ಆರಂಭವಾಗಿದೆ. ಅಕ್ಟೋಬರ್ ತಿಂಗಳು ಪೂರ್ತಿ ಈ ಪ್ರದರ್ಶನ ಇರಲಿದೆ.
ಪ್ರಧಾನ ಅಂಚೆ ಕಚೇರಿಯ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಸುಭಾಷ್ ಮೋಟಮ್ಮನವರ ಅವರು ಗಾಂಧಿಜಿ ಚಿತ್ರದ ದೇಶ ವಿದೇಶದ ಅಂಚೆ ಚೀಟಿ ಹಾಗೂ ಗಾಂಧಿಜಿ ಚಿತ್ರದ ಖಾದಿ , ರೇಷ್ಮೆಯ ಅಂಚೆ ಚೀಟಿಗಳನ್ನು ಸಂಗ್ರಹಿಸಿ ಪ್ರದರ್ಶನ ಏರ್ಪಡಿಸಿದ್ದಾರೆ.
ಕೊಪ್ಪಳ ಪ್ರಧಾನ ಅಂಚೆ ಕಚೇರಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಆಗಿರುವ ಸುಭಾಷ ಮೋಟಮ್ಮನವರ್ ಸಂಗ್ರಹಿಸಿದ್ದ ಅಂಚೆ ಚೀಟಿ ಪ್ರದರ್ಶನ ಮಾಡಲಾಗಿದೆ.
ಸುಭಾಷ್ ಅವರು ಗಾಂಧಿಜಿ ಚಿತ್ರದ ಅಂಚೆ ಚೀಟಿ ಬಿಡುಗಡೆಗೊಳಿಸಿರುವ ಅಫ್ಘಾನಿಸ್ತಾನ, ತಜಕಿಸ್ತಾನ, ಸಾಂಡಾ ಐಸ್ ಲ್ಯಾಂಡ್, ಕೋರಿಯಾ, ಸೌತ್ ಆಫ್ರಿಕಾ, ಸ್ಕಾಟ್ಲೆಂಡ್, ಡಚ್, ಪ್ಯಾಲೆಸ್ತಿನ್ ಸೇರಿ ಸುಮಾರು 10 ಕ್ಕೂ ಹೆಚ್ಚು ದೇಶಗಳ ಅಂಚೆ ಚೀಟಿ ಸಂಗ್ರಹಿಸಿ ಪ್ರದರ್ಶನ ಏರ್ಪಡಿದ್ದಾರೆ.
ಯಲಬುರ್ಗಾ ತಾಲೂಕು ರಾಜೂರಿನ ಸುಭಾಷ ಮೋಟಮ್ಮನವರ ಅವರ ಅಜ್ಜ ಹೈದ್ರಾಬಾದ ಕರ್ನಾಟಕ ವಿಮೋಚನೆಯಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು. ಅವಿಭಜಿತ ಯಲಬುರ್ಗಾದ ಬಾಣಾಪುರ ರೈಲು ನಿಲ್ದಾಣಕ್ಕೆ 1934ರಲ್ಲಿ ಆಗಮಿಸಿದ್ದ ಗಾಂಧಿಜೀ ರೈಲು ನಿಲ್ದಾಣದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ವಿಷಯ ಗಾಂಧಿಜಿ ವಿಚಾರಗಳತ್ತ ಆಕರ್ಷಿಸಿದೆ.
ಕೆಲ ವರ್ಷಗಳ ಹಿಂದೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂಚೆ ಚೀಟಿಗಳ ಪ್ರದರ್ಶನ ನೋಡಿ ಪ್ರಭಾವಿತರಾಗಿ ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡರು.
ಹೀಗಾಗಿ ಬಗೆ ಬಗೆಯ ಅಂಚೆ ಚೀಟಿ ಸಂಗ್ರಹಿಸಿರುವ ಸುಭಾಷ್ ಮೋಟಮ್ಮನವರ ಗಾಂಧೀಜಿಯವರ ಕುರಿತು ದೇಶ ವಿದೇಶಗಳು ಹೊರ ತಂದಿರುವ ಅಂಚೆ ಚೀಟಿಗಳನ್ನೂ ಸಂಗ್ರಹಿಸಿರುವುದು ವಿಶೇಷ.