
ಶಿಡಿಗಿನ ಮೊಳ ಬನಶಂಕರಿ ದೇವಿಗೆ ವಿಶೇಷ ಪೂಜೆಗಳು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 3- ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸುವ ಹಬ್ಬಗಳಲ್ಲಿ ಒಂದಾದ ದಸರಾ ಮಹೋತ್ಸವಗಳು, ಗುರುವಾರ ಅಕ್ಟೋಬರ್ ೩ ರಿಂದ, ಹತ್ತು ದಿನಗಳ ಕಾಲ ನಡೆಯುವ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ನಾಂದಿ ಹಾಡಲಾಯಿತು.
ಮುಂಜಾನೆ ಗ್ರಾಮೀಣ ಪ್ರದೇಶಗಳಲ್ಲಿ ಇರುವ ದೇವಸ್ಥಾನಗಳು ಭಕ್ತಾದಿಗಳಿಂದ, ನಾನಾವಿದ ಅಲಂಕಾರಗಳಿAದ ಕಳಕಳಲಾಡಿದವು. ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಶಿಡಿಗಿನ ಮೊಳ, ಗ್ರಾಮದಲ್ಲಿ ನೆಲೆಸಿರುವ ಬನಶಂಕರಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ವಿಶೇಷ ಪೂಜೆಗಳು ಇಂದು ಆರಂಭವಾದವು, ರುದ್ರಾಭಿಷೇಕ ಪಂಚಾಮೃತ ಅಭಿಷೇಕ ವಿಶೇಷ ಅಭಿಷೇಕಗಳು ,ಮಾಡಿ ಅಮ್ಮನವರಿಗೆ, ನಾನಾ ವಿಧ ಆಭರಣಗಳು ಹೂಗಳಿಂದ ಅಲಂಕರಿಸಲಾಯಿತು.
ಸೇವಾ ಸಮಿತಿ ವತಿಯಿಂದ ನಡೆಯುವ ಈ ಕಾರ್ಯಕ್ರಮಗಳಲ್ಲಿ ಹೋಮ ಹವನ ಎಲೆ ಪೂಜೆ ಲಲಿತ ಸಹಸ್ರನಾಮ ದೇವಿ ಕವಚ,ದೇವಿ ಅಷ್ಟೋತ್ತರ ನಾಮಾವಳಿ ಬನಶಂಕರಿ ದೇವಿ ಮಹಾತ್ಮೆ, ಮಹಾಲಕ್ಷ್ಮಿ ಅಷ್ಟಕಂ ದೇವಿ ಖಡ್ಗಮಾಲಾ ಸ್ತೋತ್ರಂ ಮಹಿಶಾಸುರ ಮರ್ದಿನಿ ಸ್ತೋತ್ರಂ ಹಾಗೂ ಸಾಯಂಕಾಲ ದೇವಿ ಪುರಾಣ ಪ್ರವಚನ ಮತ್ತು ಭಜನೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ.
ಪ್ರಧಾನವಾಗಿ ಇದೆ ತಿಂಗಳು ೧೨ನೇ ತಾರೀಕು ಶನಿವಾರದಂದು ವಿಜಯದಶಮಿ ಅಂಗವಾಗಿ ಹೋಮ ಹಾಗೂ ದೇವಿ ಪುರಾಣ ಮತ್ತು ಹೋಮಪೂರ್ಣಾಹುತಿ ಹಾಗೂ ಮಂಗಳಾರತಿ ಇರುತ್ತದೆ ಎಂದು ಆಡಳಿತ ಮಂಡಳಿ ಸದಸ್ಯರು ತಿಳಿಸಿರುತ್ತಾರೆ.
ಅಂದಿನ ಸಂಜೆ 5:30 ಬನ್ನಿ ಮಹಾಕಾಳಿ ಅವತಾರದಲ್ಲಿ ಪಲ್ಲಕ್ಕಿ ಉತ್ಸವದ ಮೂಲಕ ಬನ್ನಿ ಮುಡಿಯುವ ಕಾರ್ಯಕ್ರಮವಿರುತ್ತದೆ ಎಂದು ತಿಳಿಸಿದ್ದಾರೆ.
ಹತ್ತು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ದಸರಾ ಮಹೋತ್ಸವಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಮಿತಿಯವರು ತಿಳಿಸಿರುತ್ತಾರೆ.