3

ಮಕ್ಕಳಿಗೆ ಇಂದು ಶಿಕ್ಷಣದ ಅಗತ್ಯ ಅವಶ್ಯವಾಗಿದೆ : ಸಿ.ವೆಂಕಟೇಶ್

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ, 3- ಪಟ್ಟಣದ ೧೫ನೇ ವಾರ್ಡಿನ ಎ.ಕೆ.ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂದೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.

ಜಯಂತಿ ಉದ್ದೇಶಿಸಿ ಮುಖ್ಯ ಗುರುಗಳಾದ ಸಿ.ವೆಂಕಟೇಶ್ ಮಾತನಾಡಿ ಮಕ್ಕಳಿಗೆ ಇಂದು ಶಿಕ್ಷಣದ ಅಗತ್ಯ ಅವಶ್ಯವಾಗಿದೆ, ವಿದ್ಯಾಭ್ಯಾಸದ ಜೊತೆಗೆ ಮಹನೀಯರ ಸಾಧನೆಗಳಂತಹ ಕನಸುಗಳನ್ನು ಕಟ್ಟಿಕೊಳ್ಳಬೇಕು, ಪೂರಕವಾಗಿ ಪೋಷಕರೂ ಸಹ ಅವರ ಒಳ್ಳೆ ಕನಸುಗಳು ನನಸಾಗಲು ಸಹಕರಿಸಬೇಕು. ಮಕ್ಕಳನ್ನು ಸಮಾಜದಲ್ಲಿ ಅತ್ಯುತ್ತಮ ವ್ಯಕ್ತಿಗಳನ್ನಾಗಿಸಲು ಪ್ರಮುಖ ಪಾತ್ರ ವಹಿಸಬೇಕು ಎಂದು ಶಿಕ್ಷಣದ ಮಹತ್ವಕುರಿತು ತಿಳಿಸಿದರು.

ಹಿರಿಯ ಶಿಕ್ಷಕರಾದ ಸಿ.ರಂಗಪ್ಪ ಮತ್ತು ಎಲ್. ಸುರೇಶ ಗಾಂದೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಕುರಿತು ಹಾಗೂ ಮಕ್ಕಳು ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ಸು ಕಾಣುವ ಕುರಿತಾಗಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮುಖ್ಯ ಶಿಕ್ಷಕ ಜಿ.ಸೋಮಪ್ಪ, ಬಿ.ಕಸ್ತೂರಿ, ಜೆ.ಎಂ.ಗೀತಾ, ಎಲ್.ರಾಧಾ, ಹೆಚ್.ಯಲ್ಲಮ್ಮ ಇದ್ದರು.

Leave a Reply

Your email address will not be published. Required fields are marked *

error: Content is protected !!