
ಆಸ್ಪತ್ರೆಗೆ ಸಚಿವ ತಂಗಡಗಿ ಭೇಟಿ : ಸಂತ್ರಸ್ಥರಿಗೆ ಮನೆ ನೀಡಲು ಭರವಸೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 6- ತಾಲೂಕಿನ ಡಣಾಪೂರ ಗ್ರಾಮದ ಮನೆ ಕುಸಿತಕ್ಕೆ ಒಳಗಾದ ವ್ಯಕ್ತಿ ದಾಖಲಾದ ಖಾಸಗಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಮಳೆ ಹಾನಿಗೆ ಈಡಾಗಿ ಮನೆ ಕುಸಿತಗೋಂಡಿರುವದರಿ0ದ 1ಲಕ್ಷ 20ಸಾವಿರೂಗಳಲ್ಲಿ ಮನೆ ನಿರ್ಮಿಸಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದನೆ.
ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ನೀಡುವುದು ನಮ್ಮೇಲ್ಲರ ಕರ್ತವ್ಯವಾಗಿರುತ್ತದೆ. ಗಂಗಾವತಿ ಶಾಸಕರು ಮುಖ್ಯಮಂತ್ರಿಗಳ ವಾಹನ ಬರುವಾಗ ರಸ್ತೆ ಡಿವೈಡರ ದಾಟಿ ಬಂದಿರುವುದು ಸರಿಯಲ್ಲ ಅದಕ್ಕೆ ಪೋಲಿಸ್ ಇಲಾಖೆ ಪರಿಶಿಲನೆ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಗ್ರೇಡ-೨ ತಹಶೀಲ್ದಾರ ಮಹಾಂತಗೌಡ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ, ಯುವ ಕಾಂಗ್ರೆಸ್ ಕೆಸರಹಟ್ಟಿ ವಿ.ಎಸ್.ಪಾಟೀಲ, ಫಕಿರಪ್ಪ, ಇಲಿಯಾಸ ಬಾಬಾ, ಡಣಾಪೂರ ಗೌಡರ ಮುಂತಾದವರು ಉಪಸ್ಥಿತರಿದ್ದರು.