6

ನೂತನ ಶಿಕ್ಷಣಾಧಿಕಾರಿ ಸೊಮಶೇಖರಗೌಡ್ರಗೆ ಹಳೇಯ ವಿದ್ಯಾರ್ಥಿಗಳಿಂದ ಸನ್ಮಾನ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 8- ಪಟ್ಟಣಕ್ಕೆ ನೂತವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಸೊಮಶೇಖರಗೌಡ ಪಾಟೀಲ್ ಅವರಿಗೆ ತಾಲೂಕಿನ ಹಿರೇಅರಳಿಹಳ್ಳಿ ಪ್ರೌಡ ಶಾಲೆಯ, ಹಿರೇಅರಳಿಹಳ್ಳಿ , ಹೊಸೂರು ಮಂಡಲಮರಿ,ಕಲಕಬ0ಡಿ, ಗ್ರಾಮಗಳ ಈ ಎಲ್ಲಾ ಹಳೇಯ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಯಲಬುರ್ಗಾ ಪಟ್ಟಣದಲ್ಲಿ ನ್ಯೊತನ್ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಾಡಲಾಯಿತು

ಹನಮಂತಗೌಡ ಗೌಡ್ರ ಮಾತನಾಡಿ, ಯಲಬುರ್ಗಾ ಪಟ್ಟಣಕ್ಕೆ ನೂತನವಾಗಿ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಸೊಮಶೇಖರಗೌಡ ಪಾಟೀಲ್ ಈ ಹಿಂದೆ ತಾಲೂಕಿನ ಹಿರೇಅರಳಿಹಳ್ಳಿ ಪ್ರೌಡ ಶಾಲೆಯಲ್ಲಿ ಮುಖ್ಯಪಾದ್ಯಾಯರಾಗಿ ಕಾರ್ಯನಿರ್ವಹಿಸಿ ಉತ್ತಮ ಸೇವೆ ಸಲ್ಲಿಸಿ ದಕ್ಷತೆ ಪ್ರಾಮಾಣಿಕತೆಗೆ ಹೆಸರು ಮಾಡಿದ್ದಾರೆ, ಮಕ್ಕಳ ಸ್ನೇಹಿ ಶಿಕ್ಷಕರಾಗಿ ಸಾರ್ವಜನಿಕರಿಗೆ ಮೆಚ್ಚಿಗೆ ಪಡೆದು ಪ್ರಮಾಣಿಕ ಸೇವೆ ಸಲ್ಲಿಸಿದ ಸಂರ್ಭದಲ್ಲಿ ಅವರಿಂದ ಎಷ್ಟೋ ವಿದ್ಯಾರ್ಥಿಗಳು ಪ್ರೇರಣೆಗೊಂಡು ಉತ್ತಮ ಸೇವೆಯಲ್ಲಿ ಕಾರ್ಯನಿರ್ವಿಸುತ್ತಿ ದ್ದಾರೆ ಇವರು ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಸ್ಥಾನಮಾನ ಸಿಗಬೇಕು ಎಂಬುವರು ಅವರ ವಿದ್ಯಾರ್ಥಿಗಳ ಅಭಿಲಾಷೇಯಾಗಿದೆಂದು ಹೇಳಿದರು.

ಈ ಸಂರ್ಭದಲ್ಲಿ ಶಿಕ್ಷಕ ದಯಾನಂದ ಹಿರೇಮಠ, ಹಳೇಯ ವಿದ್ಯಾರ್ಥಿಗಳಾದ ಹನುಮಂತಗೌಡ ಗೌಡ್ರ, ಬಸವರಾಜ ಮುಂಡರಗಿ, ಶಂಕರಗೌಡ ಮುದಿಗೌಡ್ರು, ಹೊಳೆಗೌಡ ಮಾಲಿ ಪಾಟೀಲ್, ಕಳಕಪ್ಪ ಬಿಂಗಿ, ಈಶಪ್ಪ ಮೂಲಿಮನಿ, ಶಂಕ್ರಪ್ಪ ಮೂಲಿ, ಬಸವಂತ ಗೌಡ ಬಿಂಗಿ, ಶಿವಪ್ಪ ಕೊಂಡಗುರಿ, ಮಲ್ಲಿಕಾರ್ಜುನ್ ಮೂಲಿ, ಸುರೇಶ್ ಬಳೆಗಾರ, ಶ್ರೀಶೈಲ್ ಬೂತಲ್, ಶಿವಶಂಕರಗೌಡ ಮಾಲಿಪಾಟೀಲ್ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!