
ಆಧುನಿಕ ಕಂಪ್ಯೂಟರಿ0ಗ್ ಯುಗದಲ್ಲಿ ಕೌಶಲ್ಯ ಮಟ್ಟಗಳನ್ನು ಹೆಚ್ಚಿಸಲು ಪ್ರಯತ್ನಿಸಿ : ಡಾ.ಮುನಿರಾಜು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 9- ಪ್ರತಿಷ್ಠಿತ ವಿವಿ ಸಂಘದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿ0ಗ್ ಕಾಲೇಜಿನಲ್ಲಿ “ಟೇಬ್ಲೋ ಮತ್ತು ಪವರ್ ಬಿಐ ಬಳಸಿ ಡೇಟಾ ವೀಜುಲೈಸೇಶನ್” ಕುರಿತು ಎರಡು ದಿನಗಳ ತಾಂತ್ರಿಕ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರವನ್ನು ಬಳ್ಳಾರಿಯ ವಿಎಸ್ಕೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಮುನಿರಾಜು ಪವಿತ್ರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಉಪಕುಲಪತಿ ಡಾ.ಮುನಿರಾಜು ಡೇಟಾ ಸೈನ್ಸ್ ವಿದ್ಯಾರ್ಥಿಗಳಿಗೆ, ಪವರ್ ಬಿಐ, ಟೇಬ್ಲೋ ಮುಂತಾದ ಹೊಸ ಕೌಶಲ್ಯಗಳನ್ನು, ವಿಶ್ಲೇಷಣಾ ಕೌಶಲ್ಯಗಳೊಂದಿಗೆ, ಆಧುನಿಕ ಕಂಪ್ಯೂಟಿAಗ್ ಯುಗದಲ್ಲಿ ಕೌಶಲ್ಯ ಮಟ್ಟಗಳನ್ನು ಹೆಚ್ಚಿಸಲು ಅಗತ್ಯವಿದೆ ಎಂದು ವಿವರಿಸಿದರು.
ಪ್ರಾಂಚಾರ್ಯ ಡಾ.ಟಿ.ಹನುಮಂತರೆಡ್ಡಿ ಮತ್ತು ಡಾ.ಕೆ.ರಾಘವೇಂದ್ರ ಪ್ರಸಾದ್, ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥರು, ಈ ಕೌಶಲ್ಯಗಳ ಅಧ್ಯಯನವು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ವಿವರಿಸಿದರು.
ಉಪಪ್ರಾಂಶುಪಾಲೆ ಡಾ.ಸವಿತಾ ಸೋನೋಳಿ, ಡೇಟಾ ಸೈನ್ಸ್ ಕಲಿಯುವುದು ಎಲ್ಲಾ ವೃತ್ತಿಗಳಲ್ಲಿ ಅಗತ್ಯವಾಗಿದೆ ಎಂದರು.
ಈ ಕಾರ್ಯಕ್ರಮವನ್ನು ಬೆಂಗಳೂರು ಮೂಲದ ಎಕ್ಸ್ಚೇಂಜ್ಟೆಕ್ ಟೆಕ್ನಾಲಜೀಸ್ ಸಹಯೋಗದಲ್ಲಿ ಆಯೋಜಿಸಲಾಯಿತು. ಈ ಸಾಫ್ಟ್ವೇರ್ ಕಂಪನಿಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಏಡುಕೊಂಡಲ ಶ್ರೀನಿವಾಸರಾವ್, ನಿರ್ದೇಶಕ ವೆಂಕಟರಾವ್ ವಿ, ಹಾಗೂ ಮಾನವ ಸಂಪತ್ತಿನ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣರಾಜು, ತರಬೇತಿ ಮುಖ್ಯಸ್ಥ ಹಾಗೂ ಕಾರ್ಯನಿರ್ವಹಣಾಧಿಕಾರಿ ಬಾಲಚಂದ್ರ ಶ್ರೀನಿವಾಸಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಈ ಹೊಸ ವೀಜುಲೈಸೇಶನ್ ಸಾಧನಗಳ ಕಲಿಯುವ ಪ್ರಯೋಜನಗಳನ್ನು ಪ್ರಸ್ತುತಪಡಿಸಿದರು.
ಗಿಗಿ ಸಂಗದ ಗಣ್ಯರಾದ ಅಲ್ಲಂ ಗುರುಬಸವರಾಜ್, ಅಧ್ಯಕ್ಷರು ಜಾನೆಕುಂಟೆ ಬಸವರಾಜ್, ಉಪಾಧ್ಯಕ್ಷರು ಮತ್ತು ಆರ್ವೈಎಂ ಇಂಜಿನಿಯರಿAಗ್ ಕಾಲೇಜಿನ ಅಧ್ಯಕ್ಷರು ಡಾ.ಅರವಿಂದ ಪಟೇಲ್, ಕಾರ್ಯದರ್ಶಿ ಯಾಲ್ಪಿ ಮೇಟಿ ಪೊಂಪನಗೌಡ, ಸಹಾಯಕ ಕಾರ್ಯದರ್ಶಿ ಬೈಲು ವದ್ದಿಗೇರಿ, ಎರ್ರಿಸ್ವಾಮಿ ಖಜಾಂಚಿ ಇವರುಗಳು ಹಾಜರಿದ್ದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಡಾ.ನಾಗರಾಜ್ ಕೋರಿ, ಡಾ.ಬಿ.ಶ್ರೀಪತಿ, ಡಾ.ಹೆಚ್.ಎಂ.ಮಲ್ಲಿಕಾರ್ಜುನ, ಡಾ.ಪ್ರಭಾವತಿ, ಡಾ.ಕೋಟ್ರೇಶ್, ಡಾ.ತಿಮ್ಮನಗೌಡ ಮತ್ತು ಕಾರ್ಯಾಗಾರ ಸಮನ್ವಯಕರ ಬಸವರಾಜ ಕುಸುಮನ್ನನವರ್, ವಿನಯ್ ಕುಮಾರ್, ರಾಜೇಶ್ವರಿ ಹಾಗೂ ಡೇಟಾ ಸೈನ್ಸ್ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮವನ್ನು ಅಧ್ಯಾಪಕಿ ಬಿಲ್ವಶ್ರೀ ನಿರ್ವಹಿಸಿದ್ದು, ವಂದನಾರ್ಪಣೆ ಡಾ.ಎಚ್.ಗಿರೀಶ, ಮುಖ್ಯಸ್ಥರು ಸಿಎಸ್ಸಿ ವಿಭಾಗ ನೆರವೇರಿಸಿದರು.