
ಗುರುವಂದನಾ ಕಾರ್ಯಕ್ರಮ : ಗವಿಶ್ರೀಗಳಿಂದ ಪುಸ್ತಕ ಬಿಡುಗಡೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 10- ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆಯ ೧೯೮೯-೯೦ನೇ ಸಾಲಿನ ವಿದ್ಯಾರ್ಥಿ ಬಳಗದಿಂದ ಇದೇ ದಿ,೨೦ ರಂದು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಯುಕ್ತ, ೧೯೮೯-೯೦ನೇ ಸಾಲಿನಲ್ಲಿ ತಮಗೆ ಶಿಕ್ಷಣ ನೀಡಿದ ಗುರುಗಳ ಮತ್ತು ವಿದ್ಯಾರ್ಥಿಗಳ ಮಾಹಿತಿ ಪುಸ್ತಕವನ್ನು ಇಲ್ಲಿನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು.
ಅವರು ಇಂದು ಬೆಳಿಗ್ಗೆ ಗವಿಮಠದಲ್ಲಿ ಗುರುವಂದನಾ ಕಾರ್ಯಕ್ರಮದ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಅಕ್ಷರ ಕಲಿಸಿದ ಗುರುಗಳನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಸುವ ಕೆಲಸಕ್ಕೆ ಮುಂದಾಗಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಇದು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ, ಇಂತಹ ಕಾರ್ಯಕ್ರಮಗಳಿಂದ ಗುರುಗಳಿಗೆ ಸೂಕ್ತ ಗೌರವ ಸಲ್ಲುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಗುರುವಂದನಾ ಕಾರ್ಯಕ್ರಮದ ಪುಸ್ತಕದ ಜೊತೆಗೆ ಆಮಂತ್ರಣ ಪತ್ರಿಕೆಯನ್ನು ಸಹ ಶ್ರೀಗಳು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಬಳಗದ ಕಲ್ಲನಗೌಡ ದೊಡ್ಡಮನಿ, ಹೇಮಣ್ಣ ತುಪ್ಪದ, ಹನುಮಂತಪ್ಪ ಮ್ಯಾಗಳಮನಿ, ಅಜ್ಜಯ್ಯ ಹಿರೇಮಠ, ಸತ್ಯನಾರಾಯಣ ಕುಲಕರ್ಣಿ, ವಿಜಯಕುಮಾರ ಮಂಗಳೂರು, ಗಂಗಾಧರ ಕೇಸರಿಮಠ, ಶರಣಪ್ಪ ಸಜ್ಜನ್, ಶಿವಕುಮಾರ ಸಂಡೂರು, ಬಿ.ಪ್ರಸಾದ ಮತ್ತಿತರರು ಉಪಸ್ಥಿತರಿದ್ದರು.