
ಮಹಿಳಾ ವಿ.ವಿ ಬಿ.ಕಾಂ. ಪದವಿ ಫಲಿತಾಂಶ ಕಲ್ಮಠ ಮಹಿಳಾ ಕಾಲೇಜಿಗೆ ಶೇಕಡಾ 90.00% ರಷ್ಟು ಫಲಿತಾಂಶ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 10- ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 2023-2024ನೇ ಸಾಲಿನ ಬಿ.ಕಾಂ. ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಗಂಗಾವತಿಯ ಶ್ರೀ ಕೋಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯಕ್ಕೆ ಶೇಕಡಾ ೯೦.೦೦%ರಷ್ಟು ಫಲಿತಾಂಶ ಬಂದಿದೆ.
ಪರೀಕ್ಷೆಗೆ ಹಾಜರಾಗಿದ್ದ 60 ವಿದ್ಯಾರ್ಥಿನಿಯರಲ್ಲ್ಲಿ 54 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು ಒಟ್ಟಾರೆ ಅತ್ಯುತ್ತಮ ಫಲಿತಾಂಶ ದಾಖಲಾಗಿದೆ. ಸುಮ ಪಿ. ಶೇಕಡಾ 936.30%, ವರ್ಷ ಪಟ್ಟಣಶೆಟ್ಟಿ 95.53%, ಸೌಂದರ್ಯ ಐಲಿ ಶೇಕಡಾ 94.92%, ಎಸ್.ರಮ್ಯಶ್ರೀ ಶೇಕಡಾ 93.53%, ರಷ್ಟು ಗಳಿಸಿ ಕ್ರಮವಾಗಿ ಮಹಾವಿದ್ಯಾಲಯಕ್ಕೆ ಪ್ರಥಮ ಐದು ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಅಧ್ಯಕ್ಷ ಪೂಜ್ಯಶ್ರೀ ಮ.ನಿ.ಪ್ರ. ಡಾ.ಕೊಟ್ಟೂರು ಮಹಾಸ್ವಾಮಿಗಳು, ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಕಾರ್ಯದರ್ಶಿ ಶರಣೇಗೌಡ ಮಾಲಿಪಾಟೀಲ್ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.