
ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ
ಕನ್ನಡ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ಯು.ನಾಗರಾಜ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 19- ನಗರದ ಬಸ್ ನಿಲ್ದಾಣದ ಬಳಿ ಶ್ರೀಕೃಷ್ಣದೇವರಾಯ ವೃತ್ತ ಬಸವೇಶ್ವರ ಪುತ್ಥಳಿ ಮುಂದೆ ಕನ್ನಡ ರಥಕ್ಕೆ ತಾಲೂಕ ಆಡಳಿತ, ನಗರಸಭೆ ವಿವಿಧ ಇಲಾಖೆ,ಕನ್ನಡ ಸಾಹಿತ್ಯ ಪರಿಷತ ಸಹಯೋಗದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನಗರಸಭೆ ಅಧ್ಯಕ್ಷ ಮೌಲಾಸಾಬ ಹಾಗೂ ತಹಶೀಲ್ದಾರ ಯು.ನಾಗರಾಜ ಜಂಟಿಯಾಗಿ ಕನ್ನಡ ರಥಕ್ಕೆ ಪೂಜೆ ಸಲ್ಲಿಸಿ ನಗರದ ವಿವಿಧ ವೃತ್ತಗಳಾದ ಅಂಬೇಡ್ಕರ ವೃತ್ತ, ನೀಲಕಂಠೇಶ್ವರ, ಆದಿಜಾಂಭವ ವೃತ್ತ, ದುರುಗಮ್ಮನ ಗುಡಿ, ಚನ್ನಬಸವಸ್ವಾಮಿ ಮಠಗಳ ಮುಂದಿನಿ0ದ ಗಣೇಶ ವೃತ್ತ, ಮಹಾವೀರ ವೃತ್ತ, ಸಿಬಿಎಸ್ ವೃತ್ತಗಳ ಮೂಲಕ ಕನಕಗಿರಿಗೆ ಬಿಳ್ಕೋಡಲಾಯಿತು.
ಡೊಳ್ಳು ಕುಣಿತ ತಂಡ, ಎಸ್‌ಕೆಎನ್ ಕಾಲೇಜ ಎನ್‌ಸಿಸಿ ತಂಡ, ಪೋಲಿಸ ಇಲಾಖೆ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳು ಸಾಥ ನೀಡಿದರು.
ನಗರಸಭೆ ಅಧ್ಯಕ್ಷ ಮೌಲಾಸಾಬ, ತಹಶೀಲ್ದಾರ ಯು.ನಾಗರಾಜ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸೈಯದ ಇಲಿಯಾಸ ಖಾದ್ರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಮಾತನಾಡಿ, ಮಂಡ್ಯದಲ್ಲಿ ನಡೆಯುವ ೮೭ನೇ ಕನ್ನಡ ಜಾತ್ರೆ (ಸಮ್ಮೇಳನ-ಅಕ್ಷ ಜಾತ್ರೆ) ಯಶ್ವಸಿಗೆ ಸರ್ವರೂ ಕೈ ಜೋಡಿಸೋಣ ಕನ್ನಡ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಶರಣೆಗೌಡ ಪೋಪಾಟೀಲ, ನಗರಸಭೆ ಉಪಾಧ್ಯಕ್ಷ ಪಾರ್ವತೆಮ್ಮ ದುರುಗೇಶ, ಕನ್ನಡ ಸಂಸ್ಕçತಿ ಇಲಾಖೆ ಕೋಟ್ರೇಶ ಮರಬನಹಳ್ಳಿ, ಗ್ರೇಡ-೨ ತಹಶೀಲ್ದಾರ ಮಹಾಂತಗೌಡ, ನಗರಸಭೆ ಸದಸ್ಯ ಮನೋಹರಸ್ವಾಮಿ ಮುದೇನೂರ, ವಾಸುದೇವ ನವಲಿ, ಶರಬೋಜಿರಾವ, ನೀಲಕಂಠ ಕಟ್ಟಮನಿ, ತಾಪಂ ನಿದೇರ್ಶಕ ಮಹಾಂತಗೌಡ, ನಗರಸಭೆ ಪ್ರಭಾರಿ ಪೌರಾಯುಕ್ತ ವ್ಯವಸ್ಥಾಪಕ ಷಣಮುಖಪ್ಪ, ನಗರ ಪೋಲಿಸ ಠಾಣೆ ಪಿಐ ಪ್ರಕಾಶ ಮಾಳಿನ, ಯೋಪ್ರಾ ಸದಸ್ಯ ರಹಮತ ಸಂಪAಗಿ, ಕನ್ನಡ ಪರ ಸಂಘಟನೆಯ ಪಂಪಣ್ಣ ನಾಯಕ, ರಾಮಣ್ಣ ಬಳ್ಳಾರಿ, ಚನ್ನಬಸವ ಜೇಕಿನ, ವಿರುಪಾಕ್ಷಿ ಹೇರೂರ, ಮಂಜುನಾಥ ಪತ್ತಾರ, ಅಧಿಕಾರಿಗಳಾದ ಜಯಶ್ರೀ, ಆರ್‌ಸಿಎಂಸಿ ನಾಗರಾಜ ಪಿಡಬ್ಲೂಡಿ ಇಂಜನಿಯರ, ದಲಿತ ಸಂಘಟನೆಯ ಹಂಪೆಶ ಹರಿಗೋಲ, ರೈತ ಸಂಘಟನೆಯ ಶರಣೆಗೌಡ, ರಾಜೇಶ್ವರಿ ವಕೀಲ, ಸದಸ್ಯ ರಮೇಶ ಗಬ್ಬೂರು, ಶಿವಕಾಂತ ತಳವಾರ, ಶೇಖ ನಬಿಸಾಬ ಮುಂತಾದವರು ಉಪಸ್ಥಿತರಿದ್ದರು.