
ಸತತ ಮಳೆ : ಕೃಷಿ ಚಟುವಟಿಕೆಗಳಲ್ಲಿ ಮುಂಜಾಗ್ರತೆ ಕ್ರಮ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 19- ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು ಮುನ್ಸೂಚನೆಯಂತೆ ೨-೩ ದಿನಗಳಿಂದ ಅಲ್ಲಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗಿದ್ದು, ಮುಂದುವರೆದು ಮುಂದಿನ ಎರಡು ದಿನಗಳವರೆಗೆ ಅಲ್ಲಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ರೈತ ಬಾಂಧವರು ಕೃಷಿ ಚಟುವಟಿಕೆಗಳಲ್ಲಿ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಬೇಕು. ಎಂದು ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಡಾ.ರಾಘವೇಂದ್ರ ಎಲಿಗಾರ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರು ಸಂತೋಷ ಪಟ್ಟದಕಲ್ ತಿಳಿಸಿದರು.
ಈಗಾಗಲೇ ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತು ಶೇಂಗಾ ಬೆಳೆಗಳನ್ನು ಕೊಯ್ಲು ಮಾಡುತ್ತಿದ್ದು, ನೀರು ತಾಗದಂತೆ ಸುರಕ್ಷಿತ ಜಾಗದಲ್ಲಿ ಶೇಖರಿಸಿಡಬೇಕು. ರೈತರು ಜಮೀನಿನಲ್ಲಿ ಬಸಿಗಾಲುವೆ ಮಾಡಿ, ನೀರು ಹೊರಹಾಕಬೇಕು ಹಾಗೂ ಕಾಲುವೆಗಳನ್ನು ಸ್ವಚ್ಛಗೊಳಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೈತರು ಬೆಳೆಗಳಿಗೆ ನೀರು ಹಾಯಿಸುವುದು ಮತ್ತು ಸಿಂಪರಣೆಯನ್ನು ಮುಂದೂಡಲು ಸೂಚಿಸಲಾಗಿದೆ.
ಮಳೆ ನೀರನ್ನು ಆದಷ್ಟು ನೀರು ಕೊಯ್ಲಿನ ಮುಖಾಂತರ ಅಥವಾ ಕೃಷಿ ಹೊಂಡಗಳಲ್ಲಿ ಶೇಖರಿಸಿಡುವುದರಿಂದ ಒಣ ಪರಿಸ್ಥಿತಿಯಲ್ಲಿ ಉಪಯೋಗಿಸಲು ಅನುಕೂಲ ಸತತ ಮೋಡ ಕವಿದ ವಾತಾವರಣವಿರುವುದರಿಂದ ಭತ್ತದಲ್ಲಿ ಕಣೆ ನೊಣ ಕೀಟ ಬಾಧೆ ಕಂಡುಬರುವ ಸಾಧ್ಯತೆಯಿದ್ದು, ರೈತರು ನಿರ್ವಹಣೆಗಾಗಿ ಫಿಪ್ರೊನೀಲ್ ೧.೦ ಮಿ.ಲೀ ಅಥವಾ ಥಯೋಮಿಥಾಕ್ಸಮ್ ೦.೨ ಗ್ರಾಂ. ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. ಭತ್ತದಲ್ಲಿ ಸತತವಾಗಿ ನೀರು ನಿಲ್ಲುವುದರಿಂದ ಎಲೆ ಕವಚದ ಮಚ್ಚೆ ರೋಗ ಕಂಡುಬರುವ ಸಾಧ್ಯತೆಯಿದ್ದು, ಇದರ ನಿರ್ವಹಣೆಗಾಗಿ ೧.೦ ಮಿ.ಲೀ ಹೆಕ್ಸಾಕೋನಾಜೋಲ್ ಅಥವಾ ೦.೪ ಗ್ರಾಂ. (ಟ್ರಿಪ್ಲಾಕ್ಸಿಸ್ಟೊçÃಬಿನ್ ೨೫ ಡಬ್ಲೂö್ಯಜಿ+ ಟೆಬೂಕೋನೋಜೋಲ್ ೫೦ ಡಬ್ಲೂö್ಯಜಿ) ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು.
ಭತ್ತದ ಗದ್ದೆಯಲ್ಲಿ ಭತ್ತದ ಗಿಡಗಳು ನೆಲಕ್ಕೆ ಬೀಳುವುದು ಹೆಚ್ಚಾಗುತ್ತಿದ್ದು, ಅದಕ್ಕೆ ಗಿಡಗಳನ್ನು ಮೇಲಕ್ಕೆ ಕಟ್ಟುವುದರಿಂದ ನೆಲಕ್ಕೆ ಬಿದ್ದು ಮೊಳಕೆ ಬರುವ ನಷ್ಟವನ್ನು ತಪ್ಪಿಸಬಹುದು.
ತೊಗರಿಯಲ್ಲಿ ಹೂ ಉದುರುವುದು ಕಂಡುಬAದಿದ್ದು, ಇದರ ನಿರ್ವಹಣೆಗಾಗಿ ನ್ಯಾಫ್ತಾಲೀನ್ ಅಸೆಟಿಕ್ ಆಸಿಡ್ ೦.೫ ಮೀ.ಲೀ ಪ್ರತಿ ಲೀಟರ್ ನೀರಿಗೆ ಹಾಗೂ ಸೊರಗು/ನೆಟೆ/ಸಿಡಿ ರೋಗದ ನಿರ್ವಹಣೆಗಾಗಿ ಸಾಫ್ (ಕಾರ್ಬೆಂಡಾಜಿಮ್+ಮ್ಯಾAಕೋಜೆಬ್) ೨.೦ ಗ್ರಾಂ. ಪ್ರತಿ ಲೀಟರ್ ನೀರಿಗೆ ಹಾಕಿ ಬುಡಕ್ಕೆ ಸುರಿಯಬೇಕು.
ತೊಗರಿ ಕಾಯಿಕೊರಕದ ನಿರ್ವಹಣೆಗಾಗಿ ೦.೧೫ ಮಿ.ಲೀ.ಕ್ಲೋರಂಟ್ರಿನಿಲಿಪ್ರೋಲ್ ಅಥವಾ ೦.೧ ಮಿ.ಲೀ. ಸ್ಪೆöÊನೊಸಾಡ್ ಅಥವಾ ೨.೦ ಮಿ.ಲೀ. ಕ್ವಿನಾಲ್‌ಫಾಸ್ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ಹತ್ತಿ ಬೆಳೆಯಲ್ಲಿ ಎಲೆ ಕಂಪಾಗುವಿಕೆಯ ನಿರ್ವಹಣೆಗಾಗಿ ಶೇ. ೧ ರ ಮ್ಯಾಗ್ನೇಷಿಯಂ ಸಲ್ಫೇಟ್‌ನ ಜೊತೆಯಲ್ಲಿ ಶೇ. ೧ ರ ೧೯:೧೯:೧೯ ಸಾ.ರಂ.ಪೋ.ನ ದ್ರಾವಣವನ್ನು ಸಿಂಪರಣೆ ಮಾಡಬೇಕು. ತರಕಾರಿ ಬೆಳೆಗಳಿಗೆ ಅರ್ಕಾ ತರಕಾರಿ ಸ್ಪೆಷಲ್ ಲಘುಪೋಷಕಾಂಶದ ಮಿಶ್ರಣವನ್ನು ಸಿಂಪಡಿಸಲು ಸೂಚಿಸಲಾಗಿದೆ.
ದ್ರಾಕ್ಷಿ ಬೆಳೆಯಲ್ಲಿ ಡೌನಿಮಿಲ್ಡು (ಕೇದಿಗೆ ರೋಗ) ಮತ್ತು ಗೊಂಚಲು ಕೊಳೆ ರೋಗ ಉಲ್ಭಣವಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸ್ಪರ್ಶ ಶಿಲೀಂಧ್ರನಾಶಕಗಳಾದ ೨ ಗ್ರಾಂ, ಮೆಟಾಲಾಕ್ಸಿಲ್ ಎಂ.ಝಡ್. ಅಥವಾ ಮ್ಯಾಂಕೋಜೆಬ್ ೩ ಗ್ರಾಂ. ಪ್ರತಿ ಲೀಟರ್ ಅಥವಾ ತಾಮ್ರದ ಆಕ್ಸಿಕ್ಲೋರೈಡ್ ೨.೫ ಗ್ರಾಂ. ಅಥವಾ ಥಯೋಪೋನೆಟ್ ಮಿಥೈಲ್ ೧ ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.
ಹಿಂಗಾರು ಹಂಗಾಮಿನಲ್ಲಿ ಬಿತ್ತುವ ಬೆಳೆಗಳಿಗೆ ಬೋಜೋಪಚಾರ ಮಾಡಿ ಬಿತ್ತಬೇಕಾಗಿ ಸೂಚಿಸಲಾಗಿದೆ. (ದ್ವಿದಳ ಧಾನ್ಯ ಬೆಳೆಗಳಿಗೆ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಅಣುಜೀವಿ @ ೫೦೦ ಗ್ರಾಂ./ಎಕರೆ ಬೀಜಕ್ಕೆ, ಟ್ರೆöÊಕೋಡರ್ಮಾ @೪.೦ ಗ್ರಾಂ./ಕೆ.ಜಿ ಬೀಜ ಮತ್ತು ಏಕದಳ ಧಾನ್ಯ ಬೆಳೆಗಳಿಗೆ ಅಜೋಸ್ಪಿರುಲಂ @ ೨೦೦ ಗ್ರಾಂ./ಎಕರೆ ಬೀಜಕ್ಕೆ,).
ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಗಂಗಾವತಿ ಹಾಗೂ ಹವಾಮಾನ ವಿಜ್ಞಾನಿಯಾದ ಡಾ.ಫಕೀರಪ್ಪ ಅರಭಾಂವಿ ಇವರನ್ನು ಸಂಪರ್ಕಿಸಬಹುದು.