
ಕು0ಬಾರ ಸಮಾಜದಿಂದ ಕಳಕಪ್ಪ ಕುಂಬಾರಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕುಕನೂರು, 21- ಇತ್ತೀಚಿಗೆ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಕ ಮತ್ತು ಅಭಿವೃದ್ಧಿ ಟ್ರಸ್ಟ್ (ರಿ) ಕುಕನೂರು, ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು, ಇವರ ಸಯೋಗದಲ್ಲಿ ರಾಜ್ಯಮಟ್ಟದ ಸಾಂಸ್ಕೃತಿಕ ಮೇಳ ೨೦೨೪ದಲ್ಲಿ ಜರುಗಿದ ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಕಳಕಪ್ಪ ಕುಂಬಾರ್ ಇವರ ಸಾಹಿತ್ಯ ಸಂಘಟನೆ ಮತ್ತು ಸಮಾಜಮುಖಿ ಕ್ಷೇತ್ರದಲ್ಲಿ ಸಾಧನೆಯನ್ನು ಪರಿಗಣಿಸಿ ಇವರಿಗೆ “ರಾಜಶ್ರೀ” ನಾಲ್ವಡಿ ಕೃಷ್ಣರಾಜ ಒಡೆಯರು ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರಿಸಲಾಗಿದೆ.
ಕುಕನೂರಿನ ಜಗದ್ಗುರು ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಕೊಪ್ಪಳ ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಕಳಕಪ್ಪ ಕುಂಬಾರ್ ಹಾಗೂ ಕುಷ್ಟಗಿ ತಾಲೂಕು ಕುಂಬಾರ್ ಸಂಘದ ಅಧ್ಯಕ್ಷ ರಾಮಣ್ಣ ಕುಂಬಾರ್, ಯಲಬುರ್ಗಾ ತಾಲೂಕು ಕುಂಬಾರ್ ಸಂಘದ ಅಧ್ಯಕ್ಷ ಚನ್ನಪ್ಪ ಕುಂಬಾರ್ ಮತ್ತು ಕುಕನೂರು ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಗವಿಸಿದ್ದಪ್ಪ ಕುಂಬಾರ್, ಕನಕಗಿರಿ ತಾಲೂಕು ಕುಂಬಾರ್ ಅಧ್ಯಕ್ಷ ಸಿದ್ದು ಹಾಗೂ ಸದಸ್ಯ ಅಂದಪ್ಪ ಕುಂಬಾರ್, ಸೋಮಶೇಖರಪ್ಪ ಕುಂಬಾರ್, ಗಂಗಮ್ಮ ಕುಂಬಾರ್, ಕೊಟ್ರೇಶ್ ಕುಂಬಾರ್, ಬಾನಾಪುರ ಮಳೆಕೊಪ್ಪ ಇಟಗಿ ಗ್ರಾಮದ ಕುಂಬಾರ್ ಸಮಾಜ ಬಾಂದವರು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.