4

ರಾಮಾಯಣವನ್ನು ಜಗತ್ತಿಗೆ ಪರಿಚಯಿಸಿದ ಆದಿಕವಿ ವಾಲ್ಮೀಕಿ : ಹನುಮಂತ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 21- ಸನಾತನ ಹಿಂದೂ ಧರ್ಮದ ಮಹಕಾವ್ಯಗಳಲ್ಲಿ ಒಂದಾದ ಶ್ರೀರಾಮಾಯಣವನ್ನು ಜಗತ್ತಿಗೆ ಪರಿಚಯಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಗರದ ಬನ್ನಿಗಿಡದ ಕ್ಯಾಂಪ್‌ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಬನ್ನಿಗಿಡದ ಕ್ಯಾಂಪಿನ ಗುರುಹಿರಿಯರು, ಯುವಕರು, ಸರ್ವಧರ್ಮದವರೆಲ್ಲರೂ ಕೂಡಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರ ಇಟ್ಟು, ಮಾಲಾರ್ಪಣೆ ಮಾಡುವ ಮೂಲಕ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ವಾರ್ಡಿನವರಾದ ಹನುಮಂತ ಜಾಲಹಳ್ಳಿ, ಯಮನೂರಿ ನಾಯಕ, ಹುಸೇನ ಬಂಡಿ, ರಮೇಶ ಕರಡಿ, ರಾಘವೇಂದ್ರ ಭೋವಿ, ಲಕ್ಷö್ಮಣ ನಾಯಕ, ನಾಗೇಶ ನಾಯಕ, ಭೀಮರಾಜ ನಾಯಕ, ರಂಗನಾಥ ನಾಯಕ, ಪರಶುರಾಮ ನಾಯಕ, ಅಂಬರೀಶ ನಾಯಕ, ಶ್ರೀನಿವಾಸ ನಾಯಕ, ರಮೇಶ ನಾಯಕ, ವಿಜಯ ನಾಯಕ, ರಾಘವೇಂದ್ರ, ವಿರೇಶ, ಅಂಜಿ, ಮಂಜುನಾಥ, ದೇವರಾಜ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!