
ಪೊಲೀಸ್ ಹುತಾತ್ಮರ ದಿನಾಚರಣೆ
ಹುತಾತ್ಮ ಯೋದರನ್ನು ಗೌರವಿಸುವುದು ಆದ್ಯ ಕರ್ತವ್ಯವಾಗಿದೆ : ನ್ಯಾ. ಅಬ್ದುಲ್ ರೆಹಮಾನ್
ಕರುನಾಡ ಬೆಳಗು ಸುದ್ದಿ
ವಿಜಯನಗರ, ೨೧- ದೇಶದ ಸಾರ್ವಜನಿಕರ ರಕ್ಷಣೆಗೆ ಬದ್ದರಾಗಿದ್ದ ಹುತಾತ್ಮ ಯೋದರನ್ನು ಇಂದು ಸ್ಮರಿಸುವುದು ಅವರ ದೇಶ ಭಕ್ತಿಗೆ ನಾವು ಗೌರವ ತೊರ್ಪಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಅವರು ಧಾರ್ಮಿಕ ಗೌರವಕ್ಕೂ ಯೋಗ್ಯರು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಅಬ್ದುಲ್ ರೆಹಮಾನ್ ನಂದಗಡಿ ಹೇಳಿದರು.
ಹೊಸಪೇಟೆಯ ಡ್ಯಾಮ್ ರಸ್ತೆಯಲ್ಲಿರುವ ಡಿಎಆರ್ ಹೊಸ ಪರೇಡ್ ಮೈದಾನ, ಟಿಎಸ್‌ಪಿ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕಮ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲೆಯ ೩ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ನಂದಗಡಿ ಮಾತನಾಡಿ, ಕಾರ್ಯನಿರತ ಸಂದರ್ಭದಲ್ಲಿ ಮೃತರಾದ ಪೋಲೀಸ್ ಸಿಬ್ಬಂದಿಗೆ ಗೌರವ ಸಮರ್ಪಣೆ ಸಲ್ಲಿಸುವುದು ಯೋಗ್ಯವಾದುದಾಗಿದೆ. ಇವರ ಬಲಿದಾನದಿಂಧ ನಮ್ಮಲ್ಲಿಯೂ ದೇಶ ಪ್ರೇಮ ಜಾಗೃತವಾಗುತ್ತದೆ. ಎಲ್ಲಾ ಕಾಲದಲ್ಲಿಯೂ ಪೋಲೀಸ್ ಸಿಬ್ಬಂದಿ ಜಾಗೃತರಾಗಿದ್ದು ದೇಶ ಮತ್ತು ಪ್ರಜೆಗಳ ರಕ್ಷಣೆ ಮಾಡುವುದರಲ್ಲಿ ತಲ್ಲೀನರಾಗುತ್ತಾರೆ, ಆದರೆ ಅಂತಹ ಸಮಯದಲ್ಲಿ ಅವರ ಜೀವಕ್ಕೆ ಅಪಾಯಕ್ಕೆ ಉಂಟಾಗುವ ಪರಿಸ್ಥಿತಿ ಎದರುರಾಗುತ್ತದೆ, ಎನ್ನುತ್ತಾ ೧೯೫೯ರ ಅಕ್ಟೋಬರ್‌ನಲ್ಲಿ ಅತ್ಯಂತ ಸುಸಜ್ಜಿತ ಅದುನಿಕ ಶಸ್ತ್ರಸ್ತ ಹೊಂದಿದ್ದ ದೇಶದ ಗಡಿಯಲ್ಲಿ ಒಳನುಗ್ಗುತ್ತಿರುವ ಚೀನೀ ಸೈನಿಕರನ್ನು ತಮಲ್ಲಿರುವ ಹಳೇ ಶಸ್ತ್ರಸ್ತಗಳನ್ನೇ ಬಳಸಿ ೯ ಚೀನೀ ಸೈನಿಕರನ್ನು ಬಂಧಿಸಿ ಹಿಮ್ಮೆಟ್ಟಿಸುವ ಮೂಲಕ, ತಮ್ಮ ಪ್ರಾಣ ಬಲಿದಾನ ನೀಡಿ ದೇಶ ರಕ್ಷಣೆ ಮಾಡಿದ ಪೋಲೀಸ್ ಸಿಬ್ಬಂದಿಗಳ ನೆನಪಿಗಾಗಿ ಇಂದು ದೇಶಾದ್ಯಾಂತ ಹುತಾತ್ಮ ದಿನಾಚರಣೆ ಆಚರಿಸುತ್ತಿರುವುದಾಗಿ ಹೇಳಿದರು.
ಇಂದು ತಾಂತ್ರಿಕತೆ ಹಾಗೂ ಮಾದ್ಯಮ ಕ್ಷೇತ್ರದಿಂಧ ಅಪರಾದಗಳು ಬೇಗನೆ ಪತ್ತೆಯಾದರೂ, ಪೋಲಿಸರಿಗೆ ಪ್ರಾಣ ಭಯ ತಪ್ಪಿಲ್ಲ ಆದರೂ ಜೀವದ ಹಂಗು ತೊರೆದು ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪೋಲೀಸ್ ಅಗ್ರಸ್ಥಾನದಲ್ಲಿದ್ದಾರೆ ಎಂದರು. ಮುಂಧುವರೆದು ಅಂತಹ ಪೋಲಿಸ್ ಸಿಬ್ಬಂದಿಗೆ ಸ್ಮರಿಸಿ ಗೌರವಿಸೋಣ, ಅವರ ತ್ಯಾಗ ನಮ್ಮ ದೇಶದ ಪೋಲಿಸ್ ಸಿಬ್ಬಂದಿಗೂ ಹಾಗೂ ಪ್ರಜೆಗಳಿಗೂ ಸ್ಪೊರ್ತಿದಾಯಕವಾಗಲಿ ಎಂದರು.
ಹರಿಬಾಬು ಬಿ.ಎಲ್ ಜಿಲ್ಲಾ ಪೊಲೀಸ್ ಅಧಿಕ್ಷಕರು ಪೊಲೀಸ್ ಹುತಾತ್ಮರ ದಿನಾಚರಣೆಯಂದು ಹುತಾತ್ಮರಿಗೆ ಹೂ-ಗುಚ್ಚ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಕಾಳಗದಲ್ಲಿ ಮಡಿದವರ ಪೊಲೀಸ್ ಪೇದೆಗಳ ಮಾಹಿತಿ ನೀಡಿದ ಅವರು ತಮ್ಮ ಕರ್ತವ್ಯ ಪಾಲನೆಯಲ್ಲಿ ಪ್ರತಿ ವರ್ಷ ದೇಶದಲ್ಲಿ ಅನೇಕ ಪೊಲೀಸ್ ಸಿಬ್ಬಂದಿಯವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತಹವರ ಸ್ಮರಣೆಗಾಗಿ ಪ್ರತಿ ವರ್ಷ ಅಕ್ಟೋಬರ್-೨೧ ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ನಡೆಸಲಾಗುತ್ತಿದೆ.
ದಿನಾಂಕ : ೨೧/೧೦/೧೯೫೯ ರಂದು ಚರಣ್ ಸಿಂಗ್ ಡಿಎಸ್‌ಪಿ, ಸಿಆರ್‌ಪಿಎಫ್ ಇವರ ನೇತೃತ್ವದಲ್ಲಿ ಒಂದು ಸಿಆರ್‌ಪಿಎಫ್, ತುಕಡಿ ಲಡಾಕ್ ಪ್ರದೇಶದಲ್ಲಿರುವ ಹಾಟ್‌ಸ್ಟಿಂಗ್ ಹತ್ತಿರ ಗಸ್ತು ನಡೆಸುತ್ತಿರುವಾಗ, ಅವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಚೈನಾ ದೇಶದ ಸೈನಿಕರು ಸದರಿ ಸಿಆರ್‌ಪಿಎಪ್ ತುಕಡಿಯ ಮೇಲೆ ದಾಳಿ ಮಾಡಿರುತ್ತಾರೆ. ಸಿಆರ್‌ಪಿಎಫ್ ಜನರು ಕೇವಲ ತಮ್ಮ ಹತ್ತಿರ ಸಾಮಾನ್ಯ ರೀತಿಯ ಬಂದೂಕುಗಳನ್ನು ಹೊಂದಿದ್ದು, ಶತ್ರು ಸೈನಿಕರು ಅವರಿಗಿಂತಲೂ ಸುಸಜ್ಜಿತ ಮದ್ದು-ಗುಂಡುಗಳು ಮತ್ತು ಆಯುಧಗಳನ್ನು ಹೊಂದಿದ್ದರು. ಭಾರತದ ಜವಾನರು ಧೈರ್ಯ ಮತ್ತು ಸಾಹಸದಿಂದ ಚೈನಾ ದೇಶದ ಸೈನಿಕರೊಂದಿಗೆ ಹೋರಾಡಿರುತ್ತಾರೆ. ಈ ಹೋರಾಟದಲ್ಲಿ ೧೦ ಮಂದಿ ಸಿಆರ್‌ಪಿಎಫ್ ಜವಾನರು ವೀರ ಮರಣ ಹೊಂದಿದ್ದು, ೯ ಮಂದಿಯನ್ನು ಚೈನಾ ದೇಶದ ಸೈನಿಕರು ಸೆರೆ ಹಿಡಿದುಕೊಳ್ಳುತ್ತಾರೆ.
ಮೇಲ್ಕಂಡ ಸಿಆರ್‌ಪಿಎಫ್ ಜವಾನರ ಧೈರ್ಯ ಮತ್ತು ಸಾಹಸಗಳನ್ನು ಹಾಗೂ ಸಮರ್ಪಣೆಯನ್ನು ಭಾರತ ದೇಶದ ಎಲ್ಲಾ ಪ್ರಜೆಗಳು ಸ್ಮರಿಸುತ್ತಾರೆ. ಸದರಿ ಮೇಲ್ಕಂಡ ಪ್ರದೇಶದಲ್ಲಿ ವೀರ ಮರಣವನ್ನು ಅಪ್ಪಿದ ಜವಾನರ ಸವಿನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ೨೦೨೩-೨೪ನೇ ಸಾಲಿನಲ್ಲಿ ಇಡೀ ಭಾರತ ದೇಶದಲ್ಲಿ ಮರಣ ಹೊಂದಿದ ಒಟ್ಟು ೨೧೩ ಪೊಲೀಸ್ ಅಧಿಕಾರಿ ಸಿಬ್ಬಂಧಿಯವರಲ್ಲಿ ಕರ್ನಾಟಕ ರಾಜ್ಯದ ೫ ಜನ ಪೊಲೀಸ್ ಸಿಬ್ಬಂಧಿಯವರು ಕರ್ತವ್ಯ ಪಾಲನೆಯಲ್ಲಿ ಮರಣ ಹೊಂದಿರುತ್ತಾರೆ.
ಗೌರವ ನಮನ : ಲಡಾಕ್ ನಲ್ಲಿ ವೀರ ಮರಣವನ್ನು ಹೊಂದಿದ, ಹಾಗೂ ಕರ್ನಾಟಕದಲ್ಲಿ ಕರ್ತವ್ಯದಲ್ಲಿ ಮರಣ ಹೊಂದಿದ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಗೌರವ ನಮನ ಸೂಚಿಸಲು ಮೂರು ಸುತ್ತಿನ ಗುಂಡನ್ನು ಗಾಳಿಯಲ್ಲಿ ಹಾರಿಸಲಾಯಿತು. ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ ಮೇಲಕ್ಕೇರಿಸಲಾಯಿತು. ಕೆಲ ನಿಮಿಷಗಳ ಕಾಲ ಎಲ್ಲಾ ಅಧಿಕಾರಿಗಳು ಮತ್ತು ನೆರೆದಿರ್ತಕ್ಕಂತ ಎಲ್ಲರೂ ಎದ್ದು ನಿಂತು ತಲೆತಗ್ಗಿಸಿ ಮೌನಚರಣೆ ಮಾಡಿ ಗೌರವ ಸೂಚಿಸಿದರು.
ಮಡಿದವರ ಸ್ಮರಣಾರ್ಥಕ್ಕಾಗಿ ನಿರ್ಮಿಸಿರುವ ಪೊಲೀಸ್ ಸ್ಮಾರಕಕ್ಕೆ, ನ್ಯಾಯಾದೀಶರು ಸೇರಿದಂತೆ ಮಾಜಿ ಸೈನಿಕರು, ಪೊಲೀಸ್ ಅಧಿಕಾರಿಗಳು ಸರ್ಕಾರಿ ಗೌರವದೊಂದಿಗೆ ಹೂ ಗುಚ್ಛ ಸಮರ್ಪಣೆ ಮಾಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲೆಯ ಹೆಚ್ಚುವರು ಎಸ್‌ಪಿ ಸಲೀಂಪಾಷಾ, ಡಿವೈಎಸ್‌ಪಿ, ಸಿಪಿಐ, ಪೊಲೀಸ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗ ನಿವೃತ್ತ ಮಿಲಿಟರಿ ಸೈನಿಕರು ಮತ್ತು ಪೊಲೀಸ್ ವರ್ಗದವರು ಭಾಗವಹಿಸಿದ್ದರು.